ಸಂಖ್ಯೆ ಎನ್ನುವುದು ಎಣಿಕೆ ಮತ್ತು ಅಳತೆಯಲ್ಲಿ ಉಪಯೋಗಿಸುವ ಒಂದು ಅಮೂರ್ತ ಕಲ್ಪನೆ / ಪ್ರತೀಕ. ಗಣಿತಶಾಸ್ತ್ರದಲ್ಲಿ, ಸಂಖ್ಯೆಯ ಪರಿಕಲ್ಪನೆಯನ್ನು ವಿಸ್ತರಿಸಿ ಸ್ವಾಭಾವಿಕ ಸಂಖ್ಯೆಗಳು, ಸೊನ್ನೆ, ಧನ ಸಂಖ್ಯೆಗಳು ( ), ಋಣ ಸಂಖ್ಯೆಗಳು ( ) ಇನ್ನೂ ಮುಂತಾದ ಹೊಸ ರೀತಿಯ ಸಂಖ್ಯೆಗಳನ್ನೂ ಸೇರಿಸಿಕೊಳ್ಳಲಾಗಿದೆ. ಸಂಕಲನ, ವ್ಯವಕಲನ, ಗುಣಾಕಾರ, ಭಾಗಾಕಾರ ಮುಂತಾದ ಸಂಖ್ಯೆಗಳ ಮೇಲೆ ಮಾಡುವ ಕ್ರಿಯೆಗಳ ಅಭ್ಯಾಸಕ್ಕೆ ಸಂಖ್ಯಾಗಣಿತ ಎನ್ನುವರು. ಪ್ರಪಂಚದಾದ್ಯಂತ ವ್ಯವಹಾರದಲ್ಲಿರುವ ಹಿಂದು-ಅರ‍್ಯಾಬಿಕ್ ಪದ್ಧತಿಯಲ್ಲಿ ಹತ್ತು ವಿಭಿನ್ನ ಪ್ರತೀಕಗಳಿವೆ: 0, 1, 2, 3, 4, 5, 6, 7, 8, 9. ಇವು ಅಂಕೆಗಳು (ನ್ಯೂಮರಲ್ಸ್). ಇವುಗಳ ವಿವಿಧ ಸಂಯೋಜನೆಗಳೇ ಸಂಖ್ಯೆಗಳು. == ಸಂಖ್ಯಾಪ್ರಭೇದಗಳು == ನೈಜ, ಮಿಶ್ರ, ಪರಿಮೇಯ, ಅಪರಿಮೇಯ, ಪೂರ್ಣಾಂಕ, ಭಿನ್ನರಾಶಿ, ಕರಣಿ, ಬೀಜಾತೀತ, ಋಣ, 0, ಧನ ನೈಜ ಸಂಖ್ಯೆಗಳಿಗೆ (ರಿಯಲ್ ನಂಬರ್ಸ್) ಉದಾಹರಣೆಗಳು: -5, 4/3, π, 2 {\ {\ {2}}} ಇತ್ಯಾದಿ. ಪರಿಮೇಯ (ರ‍್ಯಾಶನಲ್): 3 7 , − 5 , 9 44 {\ {\ {3}{7}},-5,{\ {9}{44}}} ಇತ್ಯಾದಿ ಪೂರ್ಣಾಂಕ (ಇಂಟಿಜರ್): 37, -43 ಇತ್ಯಾದಿ ಭಿನ್ನರಾಶಿ (ಫ್ರ್ಯಾಕ್ಷನ್): 1 2 , 17 3 {\ {\ {1}{2}},{\ {17}{3}}} ಇತ್ಯಾದಿ ಋಣ (ನೆಗೆಟಿವ್): -43, -107 ಇತ್ಯಾದಿ ಧನ (ಪಾಸಿಟಿವ್): 37, 149 ಇತ್ಯಾದಿ ಅಪರಿಮೇಯ (ಇರ‍್ಯಾಶನಲ್): 2 {\ {\ {2}}} , π, ಇತ್ಯಾದಿ ಕರಣಿ (ಸರ್ಡ್): 2 , 3 , 5 {\ {\ {2}},{\ {3}},{\ {5}}} ಇತ್ಯಾದಿ ಬೀಜಾತೀತ (ಟ್ರಾನ್ಸೆಂಡೆಂಟಲ್): , π ಇತ್ಯಾದಿ ಮಿಶ್ರ (ಕಾಂಪ್ಲೆಕ್ಸ್): -1 + 3i, 2 - 7i ಇತ್ಯಾದಿ (ಇದರ ಮೊತ್ತ 2 ಮತ್ತು 3ರ ನಡುವೆ ಇದೆ) π = ವೃತ್ತಪರಿಧಿ ÷ ವ್ಯಾಸ (ಇದರ ಬೆಲೆ 3 ಮತ್ತು 4 ರ ನಡುವೆ ಇದೆ). ಮಿಶ್ರ ಸಂಖ್ಯೆಯನ್ನು + ರೂಪದಲ್ಲಿ ಬರೆಯುವುದು ವಾಡಿಕೆ. ಇಲ್ಲಿ ಮತ್ತು ನೈಜ ಸಂಖ್ಯೆಗಳು, = − 1 {\ ={\ {-1}}} ಅಥವಾ i2 = -1 ಕಾಲದೊಂದಿಗೆ ಕನ್ನಡ ಲಿಪಿಯು ಹಲವಾರು ಬದಲಾವಣೆಗಳನ್ನು ಹೊಂದಿದೆ. ಅಂತೆಯೇ ಸಂಖ್ಯೆಗಳನ್ನು ಬರೆಯವ ರೀತಿಯಲ್ಲೂ ಅನೇಕ ಮಾರ್ಪಾಟುಗಳಾಗಿವೆ.ಸಂಖ್ಯಾ ಇತಿಹಾಸವು ಭಾಷಾ ವಿಜ್ಞಾನದ ಪ್ರಮುಖ ವಿಭಾಗವಾಗಿದೆ. == ಉಲ್ಲೇಖಗಳು ==