ಸಂಜೆ (ಸಂಧ್ಯಾಕಾಲ, ಸಾಯಂಕಾಲ, ಬೈಗು) ಎಂದರೆ ದಿನದ ಕೊನೆಯಲ್ಲಿನ ಸಮಯಾವಧಿ, ಸಾಮಾನ್ಯವಾಗಿ ಸುಮಾರು ೫ ಅಥವಾ ೬ ಗಂಟೆಯಿಂದ ರಾತ್ರಿಯವರೆಗೆ. ಇದು ಬದಲಾಗುವ ಸಮಯಾವಧಿಯ ಪ್ರತಿದಿನದ ಖಗೋಳಶಾಸ್ತ್ರೀಯ ಘಟನೆಯಾಗಿದೆ ಮತ್ತು ಹಗಲು ಹಾಗೂ ರಾತ್ರಿಯ ನಡುವೆ ಬರುತ್ತದೆ. ಮಧ್ಯಾಹ್ನದ ನಂತರ ಹಾಗೂ ರಾತ್ರಿಗೆ ಮೊದಲಿನ ಈ ಅವಧಿಯಲ್ಲಿ ಹಗಲಿನ ಬೆಳಕು ಕಡಿಮೆಯಾಗುತ್ತ ಹೋಗುತ್ತದೆ. ಸಂಜೆಯು ಯಾವಾಗ ಆರಂಭವಾಗುತ್ತದೆ ಮತ್ತು ಮುಗಿಯುತ್ತದೆ ಎಂಬುದಕ್ಕೆ ಯಾವುದೇ ನಿಖರ ಸಮಯವಿಲ್ಲ. ಈ ಪದವು ವ್ಯಕ್ತಿನಿಷ್ಠವಾದರೂ, ಸಂಜೆಯು ಸಾಮಾನ್ಯವಾಗಿ ಸೂರ್ಯಾಸ್ತಕ್ಕೆ ಸ್ವಲ್ಪ ಮೊದಲು ಆರಂಭಗೊಂಡು, ಸಂಧಿಪ್ರಕಾಶದ ಅವಧಿಯಲ್ಲಿ ಇದ್ದು (ಸೂರ್ಯಾಸ್ತ ಮತ್ತು ಸಂಧಿಪ್ರಕಾಶ ವರ್ಷದಾದ್ಯಂತ ಬದಲಾಗುತ್ತವೆ), ರಾತ್ರಿಯವರೆಗೆ (ಸಾಮಾನ್ಯವಾಗಿ ಖಗೋಳ ಸೂರ್ಯಾಸ್ತ) ಇರುತ್ತದೆ ಎಂದು ತಿಳಿಯಲಾಗುತ್ತದೆ. ಗಡಿಯಾರದ ಸಮಯದನುಸಾರವಾಗಿ ಯಾವುದೇ ನಿಖರ ವ್ಯಾಖ್ಯಾನ ಸಾಧ್ಯವಿಲ್ಲವಾದರೂ, ಇದು ಸಾಮಾಜಿಕವಾಗಿ ಸುಮಾರು ೫ ಅಥವಾ ೬ ಗಂಟೆಗೆ ಆರಂಭವಾಗಿ ರಾತ್ರಿ ಅಥವಾ ಮಲಗುವ ಸಮಯದವರೆಗೆ ಇರುತ್ತದೆ ಎಂದು ಪರಿಗಣಿಸಲಾಗುತ್ತದೆ. == ಉಲ್ಲೇಖಗಳು ==