ಹಿಂದೂ ಧರ್ಮ, ಜೈನ ಧರ್ಮ, ಮತ್ತು ಬೌದ್ಧ ಧರ್ಮದಲ್ಲಿ, ಸಂತ ಎಂದರೆ "ಆತ್ಮ, ಸತ್ಯ, ವಾಸ್ತವ"ದ ಬಗ್ಗೆ ಅವನ ಅಥವಾ ಅವಳ ಜ್ಞಾನಕ್ಕಾಗಿ ಮತ್ತು ಸತ್ಯದ ಆದರ್ಶವಾಗಿ ಗೌರವದಿಂದ ಕಾಣಲಾದ ಮನುಷ್ಯ. ಸಿಖ್ ಧರ್ಮದಲ್ಲಿ ಈ ಪದವನ್ನು ದೇವರೊಡನೆ ಸಂಯೋಗದ ಮೂಲಕ ಆಧ್ಯಾತ್ಮಿಕ ಜ್ಞಾನೋದಯ ಮತ್ತು ದೈವಿಕ ಜ್ಞಾನ ಹಾಗೂ ಶಕ್ತಿಯನ್ನು ಪಡೆದಿರುವ ಜೀವಿಯನ್ನು ವರ್ಣಿಸಲು ಬಳಸಲಾಗುತ್ತದೆ. == ವ್ಯುತ್ಪತ್ತಿ == ಸಂತ ಶಬ್ದವು ಸಂಸ್ಕೃತ ಮೂಲ ಸತ್ ಇಂದ ವ್ಯುತ್ಪನ್ನವಾಗಿದೆ. ಇದರರ್ಥ "ಸತ್ಯ, ವಾಸ್ತವ, ಸಾರ" ಎಂದಿರಬಹುದು. == ಬಳಕೆ == ಈ ಶಬ್ದವನ್ನು ವಿವಿಧ ಸಂದರ್ಭಗಳಲ್ಲಿ ಬಳಸಲಾಗುತ್ತದೆ: ಇಸ್ಲಾಮಿ ಆಳ್ವಿಕೆಯಡಿ ಹದಿನೈದನೇ ಮತ್ತು ಹದಿನಾರನೇ ಶತಮಾನದ ಭಾರತದಲ್ಲಿ, ಈ ಪದವನ್ನು ಸಾಮಾನ್ಯವಾಗಿ ಭಕ್ತಿ ಚಳುವಳಿಯೊಳಗೆ ದೇವ ದೇವಿಯರ ಕೊಂಡಾಟದಲ್ಲಿ ಭಕ್ತರು ಹಾಗೂ ಸಮುದಾಯಗಳ ನೇತೃತ್ವ ವಹಿಸಿದ ಶಿಕ್ಷಕರು ಮತ್ತು ಕವಿ-ವಿದ್ವಾಂಸರನ್ನು ವರ್ಣಿಸಲು ಬಳಸಲಾಗುತ್ತಿತ್ತು. ಆಧುನಿಕ ಯುಗದಲ್ಲಿ, ಈ ಪದವು ಕೆಲವೊಮ್ಮೆ ಒಂದು ನಿರ್ದಿಷ್ಟ ರೂಪದ ಆಧ್ಯಾತ್ಮಿಕತೆಯನ್ನು ಪ್ರತಿಪಾದಿಸುವ ಯಾವುದೇ ಪವಿತ್ರ ಪುರುಷ ಅಥವಾ ಸ್ತ್ರೀಯನ್ನು ವರ್ಣಿಸುತ್ತದೆ. == ಉಲ್ಲೇಖಗಳು ==