ಅರ್ಜುನ ಉವಾಚ: ಸಂನ್ಯಾಸಂ ಕರ್ಮಣಾಂ ಕೃಷ್ಣ ಪುನರ್ಯೋಗಂ ಚ ಶಂಸಸಿ । ಯಚ್ಛ್ರೇಯ ಏತಯೋರೇಕಂ ತನ್ಮೇ ಬ್ರೂಹಿ ಸುನಿಶ್ಚಿತಮ್ ।।೧।। ಅರ್ಜುನನು: ಶ್ರೀಕೃಷ್ಣ, ಕರ್ಮಸಂನ್ಯಾಸವನ್ನು ಫೊಗಳುತ್ತೀಯೆ. ಕರ್ಮಯೋಗವನ್ನೂ ಹೊಗಳುತ್ತೀಯೆ. ಇವುಗಳಲ್ಲಿ ಯಾವುದು ನನಗೆ ಪ್ರಶಸ್ತವಾದದ್ದೆಂದು ನಿಶ್ಚಿತವಾಗಿ ಹೇಳು. : , . . ಶ್ರೀಭಗವಾನುವಾಚ: ಸಂನ್ಯಾಸ ಕರ್ಮಯೋಗಶ್ಚ ನಿಃಶ್ರೇಯಸಕರಾವುಭೌ । ತಯೋಸ್ತು ಕರ್ಮ ಸಂನ್ಯಾಸಾತ್ಕರ್ಮಯೋಗೋ ವಿಶಿಷ್ಯತೇ ।।೨।। ಭಗವಂತನು: ಕರ್ಮಸಂನ್ಯಾಸ, ಕರ್ಮಯೋಗ - ಇವೆರಡೂ ಮೋಕ್ಷದಾಯಕಗಳೇ ಹೌದು. ಆದರೆ ಅವುಗಳಲ್ಲಿ ಕರ್ಮಸಂನ್ಯಾಸಕ್ಕಿಂತ ಕರ್ಮಯೋಗವು ಉತ್ತಮವಾದದ್ದು. : . , . ಜ್ಞೇಯಃ ಸ ನಿತ್ಯಸಂನ್ಯಾಸೀ ಯೋ ನ ದ್ವೇಷ್ಟಿ ನ ಕಾಂಕ್ಷತಿ । ನಿರ್ದ್ವಂದ್ವೋ ಹಿ ಮಹಾಬಾಹೋ ಸುಖಂ ಬಂಧಾತ್ಪ್ರಮುಚ್ಯತೇ ।।೩।। ಯಾವನು ದ್ವೇಷಿಸಿವುದಿಲ್ಲವೋ ಆಶಿಸುವುದಿಲ್ಲವೋ ಆ ಕರ್ಮಯೋಗಿಯು ನಿತ್ಯಸಂನ್ಯಾಸಿಯೆಂದು ತಿಳಿಯಬಹುದು. ಹೇ ಮಹಾಬಾಹು, ದ್ವಂದ್ವರಹಿತನಾದವನು ಸುಖವಾಗಿ ಯಾವ ಆಯಾಸವೂ ಇಲ್ಲದೆ ಸಂಸಾರಬಂಧನದಿಂದ ಬಿಡುಗಡೆಹೊಂದುತ್ತಾನೆ. , , . , , . ಸಾಂಖ್ಯಯೋಗೌ ಪೃಥಗ್ಬಾಲಾಃ ಪ್ರವದಂತಿ ನ ಪಂಡಿತಃ । ಏಕಮಪ್ಯಾಸ್ಥಿತಃ ಸಮ್ಯಗುಭಯೋರ್ವಿಂದತೇ ಫಲಮ್ ।।೪।। ಸಾಂಖ್ಯ ಮತ್ತು ಕರ್ಮಯೋಗಗಳು ಬೇರೆ ಬೇರೆ - ಭಿನ್ನಫಲಗಳನ್ನು ಕೊಡತಕ್ಕವೆಂದು ಬಾಲಕರು ಹೇಳಬಹುದು - ಪಂಡಿತರು ಹೇಳುವುದಿಲ್ಲ. ಇವುಗಳಲ್ಲಿ ಯಾವುದೇ ಒಂದನ್ನು ಚೆನ್ನಾಗಿ ಇಟ್ಟುಕೊಂಡವನು ಇವೆರಡರ ಫಲವನ್ನೂ ಪಡೆಯುತ್ತಾನೆ. , . , . ಯತ್ ಸಾಂಖ್ಯೈಃ ಪ್ರಾಪ್ಯತೇ ಸ್ಥಾನಂ ತದ್ಯೋಗೈರಪಿ ಗಮ್ಯತೇ । ಏಕಂ ಸಾಂಖ್ಯಂ ಚ ಯೋಗಂ ಚ ಯಃ ಪಶ್ಯತಿ ಸ ಪಶ್ಯತಿ ।।೫।। ಸಾಂಖ್ಯರಿಗೆ ಎಂದರೆ ಜ್ಞಾನನಿಷ್ಠರಾದ ಸಂನ್ಯಾಸಿಗಳಿಗೆ ದೊರೆಯುವ ಮೋಕ್ಷಸ್ಥಾನವು ಕರ್ಮಯೋಗಿಗಳಿಗೂ ದೊರೆಯುತ್ತದೆ. ಅದ್ದರಿಂದ ಸಾಂಖ್ಯವೆಂಬ ಸಂನ್ಯಾಸವನ್ನೂ ಕರ್ಮಯೋಗವನ್ನೂ ಒಂದಾಗಿ ಕಾಣತಕ್ಕವನೇ ಸರಿಯಾಗಿ ಕಾಣತಕ್ಕವನು. , . , .