ಸಂಪುಟವು ಒಂದು ಭೌತಿಕ ಪುಸ್ತಕ. ಇದನ್ನು ಮುದ್ರಿಸಿರಬಹುದು ಅಥವಾ ಕೈಯಿಂದ ಬರೆದಿರಬಹುದು. ಈ ಪದವನ್ನು ಸಾಮಾನ್ಯವಾಗಿ ದೊಡ್ಡ ಸಂಗ್ರಹದ ಭಾಗವಾದ ಒಂದು ಒಂಟಿ ಪುಸ್ತಕವನ್ನು ಗುರುತಿಸಲು ಬಳಸಲಾಗುತ್ತದೆ. ಸಂಪುಟಗಳನ್ನು ಸಾಮಾನ್ಯವಾಗಿ ಅಂಕೆಗಳಿಂದ ಅನುಕ್ರಮವಾಗಿ ಗುರುತಿಸಲಾಗುತ್ತದೆ, ಉದಾ. "ಸಂಪುಟ ೩", ಸಾಮಾನ್ಯವಾಗಿ "ಸಂ." ಎಂದು ಸಂಕ್ಷೇಪಿಸಲಾಗುತ್ತದೆ. ಸಂಪುಟಗಳನ್ನು ನೇರವಾಗಿ ಪ್ರಕಟಿಸಬಹುದು, ಅಥವಾ ಅವನ್ನು ರಟ್ಟುಹಾಕಿದ ಪ್ರಕಾಶನಗಳಿಂದ ಸೃಷ್ಟಿಸಬಹುದು. ಉದಾಹರಣೆಗೆ, ಒಂದು ನಿಯತಕಾಲಿಕಕ್ಕೆ ಚಂದಾದಾರವಾಗುವ ಮತ್ತು ಅದನ್ನು ಸಂರಕ್ಷಿಸಿಡಲು ಬಯಸುವ ಒಂದು ಗ್ರಂಥಾಲಯವು ಸಂಚಿಕೆಗಳ ಸಮೂಹವನ್ನು ತೆಗೆದುಕೊಂಡು ಒಂದು ಸಂಪುಟದಲ್ಲಿ ರಟ್ಟುಹಾಕಿ ಇಡುತ್ತದೆ. ಪ್ರಕಾಶಕನು ಕೂಡ ಹಿಂದೆ ಪ್ರಕಟಿಸಿದ ಸಂಚಿಕೆಗಳಿಂದ ಪ್ರತ್ಯೇಕವಾಗಿ ಒಂದು ಸಂಪುಟವನ್ನು ಪ್ರಕಟಿಸಬಹುದು; ಇದು ಚಿತ್ರವಿರುವ ಕಾದಂಬರಿಗಳಿಗೆ ಸಾಮಾನ್ಯವಾಗಿದೆ. == ಉಲ್ಲೇಖಗಳು ==