ಒಂದು ಚಾಂದ್ರಮಾನ ವರ್ಷವನ್ನು ಸಂವತ್ಸರ ಎಂದು ಕರೆಯುತ್ತೇವೆ. ಈ ಪದ್ಧತಿಯಲ್ಲಿ ೬೦ ಸಂವತ್ಸರಗಳ ಒಂದು ಚಕ್ರವನ್ನು ಅನುಸರಿಸುತ್ತೇವೆ. ಈ ಸಂವತ್ಸರಗಳನ್ನು ಪ್ರಭವ, ವಿಭವ, ಶುಕ್ಲ ಇತ್ಯಾದಿ ಹೆಸರುಗಳಿಂದ ಗುರುತಿಸುತ್ತಾರೆ. ಮೊದಲನೆಯ ಸಂವತ್ಸರವು ಪ್ರಭವ ಎಂಬ ಹೆಸರಿನಿಂದ ಕರೆಸಿಕೊಂಡರೆ ಕೊನೆಯ ಅಂದರೆ ೬೦ನೇ ಸಂವತ್ಸರವನ್ನು ಕ್ಷಯ ಅಥವಾ ಅಕ್ಷಯ ಎಂದು ಕರೆಯಲಾಗಿದೆ. ಬೃಹಸ್ಪತಿ ಗ್ರಹವು ಒಂದು ಪ್ರದಕ್ಷಿಣೆ ಮುಗಿಸಲು ೧೨ ವರ್ಷಗಳ ಕಾಲಾವಧಿ ಬೇಕಾಗುತ್ತದೆ. ಇದನ್ನು "ಬಾರ್ಹಸ್ಪತ್ಯ ಯುಗ" ಎನ್ನುತ್ತಾರೆ. ಇಂತಹ ಐದು ಬ್ರಾಹಸ್ಪತ್ಯ ಯುಗಗಳ ಒಟ್ಟು ಕಾಲಾವಧಿ ೬೦ ವರ್ಷಗಳ ಒಂದು ಚಕ್ರಕ್ಕೆ ಅಷ್ಟು ಸಂವತ್ಸರಗಳೆಂದು ಪರಿಗಣಿಸುತ್ತೇವೆ. == ವರ್ಷದ ಪರಿಕಲ್ಪನೆ == ಸಂವತ್ಸರ ಎಂದರೆ ಸಂಸ್ಕೃತದಲ್ಲಿ ವರ್ಷವಾಗಿದ್ದು, ಹಿಂದೂ ಸಂಪ್ರದಾಯದಲ್ಲಿ ಒಟ್ಟು ೬೦ ಸಂವತ್ಸರಗಳಿವೆ. ಸಂವತ್ಸರ (संवत्सर) ಎಂಬುದು ಸಂಸ್ಕೃತ ಭಾಷೆಯ ಒಂದು ಪಾರಿಭಾಷಿಕ ಪದವಾಗಿದ್ದು, ವೇದ ಸಾಹಿತ್ಯಗಳಲ್ಲಿ ಮುಖ್ಯವಾಗಿ ಋಗ್ವೇದ ಮತ್ತು ಇತರ ಪ್ರಾಚೀನ ಸಾಹಿತ್ಯ ಪಠ್ಯಗಳಲ್ಲಿ ಒಂದು ವರ್ಷಕ್ಕೆ ಸಂವಾದಿಯಾಗಿ ಬಳಕೆಯಾಗುತ್ತಿತ್ತು. ಒಂದು ಜೋವಿಯನ್ ವರ್ಷವನ್ನು ಭಾರತೀಯ ಕ್ಯಾಲೆಂಡರ್‌ಗಳಲ್ಲಿ ಬೃಹಸ್ಪತಿ(ಗುರು) ಗ್ರಹದ ಸಾಪೇಕ್ಷ ಸ್ಥಾನವನ್ನು ಆಧರಿಸಿದ ವರ್ಷವಾಗಿದೆ. ಅದು ಒಂದು ನಕ್ಷತ್ರಪುಂಜದಿಂದ ಮುಂದಿನ ನಕ್ಷತ್ರಕ್ಕೆ ಸಾಗಲು ತೆಗೆದುಕೊಳ್ಳುವ ಸರಾಸರಿ ಚಲನೆಯ ಸಮಯವಾಗಿದೆ. == ಸಂವತ್ಸರಗಳು == == ೧೮೦ ವರ್ಷಗಳ ಸಂವತ್ಸರ ಕ್ರಮ == ನಾವೆಲ್ಲರೂ ನಮ್ಮ ಹುಟ್ಟಿದ ವರ್ಷವನ್ನು ಥಟ್ಟನೆ ಹೇಳುತ್ತೇವೆ. ಭಾರತೀಯ ಪಂಚಾಂಗ ರೀತ್ಯಾ ಹುಟ್ಟಿದ ಸಂವತ್ಸರ, ನಿಮ್ಮ ಹುಟ್ಟಿದ ವರ್ಷ ಯಾವ ಸಂವತ್ಸರದಲ್ಲಿದೆಯೆಂಬ ವಿವರ ಇಲ್ಲಿದೆ ನೋಡಿ. == ಉಲ್ಲೇಖಗಳು ==