ಕರ್ನಾಟಕದಲ್ಲಿ ಹಬ್ಬಗಳಲ್ಲಿ ಮಾಡುವ ಒಂದು ಬಗೆಯ ಸಿಹಿ ತಿಂಡಿ. === ಬೇಕಾಗುವ ಪದಾರ್ಥಗಳು === ಚಿರೋಟಿ ರವೆ - ಕೊಬ್ಬರಿ(ಹಸಿ ಕಾಯಿತುರಿ) ಬೆಲ್ಲ ಮೈದಾಹಿಟ್ಟು ಸ್ವಲ್ಪ ಕರಿಯಲು ಎಣ್ಣೆ === ತಯಾರಿಸುವ ವಿಧಾನ === ಮೊದಲಿಗೆ ಚಿರೋಟಿ ರವೆಯನ್ನು ಒಂದು ಪಾತ್ರೆಗೆ ಹಾಕಿಕೊಳ್ಳಬೇಕು. ಅದಕ್ಕೆ ಮೈದಾಹಿಟ್ಟು ಮತ್ತು ತುಪ್ಪವನ್ನು ಸುರಿದು ಚೆನ್ನಾಗಿ ಕಲಸಬೇಕು. ಈ ಮಿಶ್ರಣಕ್ಕೆ ನೀರನ್ನು ಹಾಕಿ ಪೂರಿ ಹಿಟ್ಟಿನ ಹದಕ್ಕೆ ಕಲಸಿಕೊಂಡು, ಚೆನ್ನಾಗಿ ನಾದಬೇಕು. ಹತ್ತರಿಂದ ಹದಿನೈದು ನಿಮಿಷದವರೆಗೆ ಹಿಟ್ಟನ್ನು ನೆನೆಯಲು ಬಿಡಬೇಕು. ನಂತರ ಚಪಾತಿಯಂತೆ ಲಟ್ಟಿಸಿಕೊಂಡು ನಂತರ ಅದರಲ್ಲಿ ಹೂರಣವನ್ನು ಇಟ್ಟು , ಹಿಟ್ಟಿನ ತುದಿಯಿಂದ ಮುಚ್ಚಿ ಮತ್ತೆ ಅದನ್ನು ಲಟ್ಟಿಸಿ, ಗುಂಡನೆಯ ಆಕಾರಕ್ಕೆ ಬಂದಾಗ ಎಣ್ಣೆಯಲ್ಲಿ ಹಾಕಿ, ಗರಿಗರಿಯಾಗಿ, ಕೆಂಪು ಬಣ್ಣ ಬರುವರೆಗೂ ಕರಿಯಬೇಕು. === ಹೂರಣ ತಯಾರಿಸುವ ವಿಧಾನ === ಕಾಯಿತುರಿ ಹಾಗೂ ನುಣ್ಣಗೆ ಜಜ್ಜಿಕೊಂಡ ಬೆಲ್ಲವನ್ನು ಒಂದು ಬಾಣಲೆಯಲ್ಲಿ ಹಾಕಿ ಹುರಿದುಕೊಂಡು, ಬೆಲ್ಲ ಕೆಂಪಾಗಾದ ಬಳಿಕ ಏಲಕ್ಕಿ ಪುಡಿಯನ್ನು ಸೇರಿಸಿಕೊಳ್ಳಬೇಕು. ಈ ಮಿಶ್ರಣಕ್ಕೆಹೂರಣ ಎನ್ನುತ್ತಾರೆ. == ಉಲ್ಲೇಖಗಳು ==