ಚೆಲ್ಲಪಿಳ್ಳ ಸತ್ಯನಾರಾಯಣ ಶಾಸ್ತ್ರಿ (೧೯೩೩ - ೧೨ ಜನವರಿ ೧೯೮೯)ಇವರು ಸತ್ಯಂ ಎಂಬ ಏಕನಾಮದಿಂದ ಕರೆಯಲ್ಪಡುವ ಭಾರತೀಯ ಸಂಗೀತ ಸಂಯೋಜಕರಾಗಿದ್ದಾರೆ. ಇವರು ೧೯೬೦ ರಿಂದ ೧೯೮೦ ರ ದಶಕದಲ್ಲಿ, ತೆಲುಗು ಮತ್ತು ಕನ್ನಡ ಚಲನಚಿತ್ರೋದ್ಯಮಗಳಲ್ಲಿ ಜನಪ್ರಿಯರಾಗಿದ್ದರು. ಸತ್ಯಂ ಅವರನ್ನು "ಆಂಧ್ರ ಆರ್.ಡಿ. ಬರ್ಮನ್" ಎಂದು ಕರೆಯಲಾಗುತ್ತದೆ. ಅವರು ಬೆರಳೆಣಿಕೆಯಷ್ಟು ಬಂಗಾಳಿ, ಭೋಜಪುರಿ ಮತ್ತು ಹಿಂದಿ ಚಲನಚಿತ್ರಗಳನ್ನು ಸಂಯೋಜಿಸಿದ್ದಾರೆ. ಸತ್ಯಂ ಅವರು ಆಂಧ್ರಪ್ರದೇಶದ ವಿಜಿಯನಗರಂ ಜಿಲ್ಲೆಯ, ಕೊಮರಡ ಮಂಡಲದ ಗುಣನುಪುರಂ ಗ್ರಾಮದಲ್ಲಿ ಜನಿಸಿದರು. ಅವರು ವಿಜಿಯನಗರಂನಲ್ಲಿ ಜನಪ್ರಿಯ ಬರಹಗಾರ್ತಿ ರಾಜಶ್ರೀ ಮತ್ತು ಇತರರೊಂದಿಗೆ ಕೆಲವು ನಾಟಕಗಳಲ್ಲಿ ನಟಿಸಿದ್ದರು. ನಂತರ ಅವರು ಮದ್ರಾಸ್‌ಗೆ ಸ್ಥಳಾಂತರಗೊಂಡು ಪಿ.ಆದಿನಾರಾಯಣ ರಾವ್ ಮತ್ತು ಟಿ.ವಿ.ರಾಜು ಅವರ ಆರ್ಕೆಸ್ಟ್ರಾದಲ್ಲಿ ಕೆಲಸ ಮಾಡಿದರು. ೧೯೫೭ ರಲ್ಲಿ, ತೆರೆಕಂಡ ಸುವರ್ಣ ಸುಂದರಿ ಚಿತ್ರದಲ್ಲಿ ಸಹಾಯಕ ಸಂಗೀತ ನಿರ್ದೇಶಕರಾಗಿ ಕೆಲಸ ಮಾಡಿದರು. ಹಾಗೂ ೧೯೬೩ ರಲ್ಲಿ, ತೆರೆಕಂಡ ಶ್ರೀರಾಮಾಂಜನೇಯ ಯುದ್ಧ ಚಿತ್ರದ ಮೂಲಕ ಸಂಗೀತ ನಿರ್ದೇಶಕರಾಗಿ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರು. ತೆಲುಗು ಚಿತ್ರರಂಗದಲ್ಲಿ ಪೂರ್ಣ ಪ್ರಮಾಣದ ಸಂಗೀತ ನಿರ್ದೇಶಕರಾಗಿ ಅವರ ಮೊದಲ ಚಿತ್ರ ಪಾಲ ಮನಸುಲು (೧೯೬೭), ಆದಾಗ್ಯೂ ಅವರು ೧೯೬೩ ರ ಚಲನಚಿತ್ರ ಸವತಿ ಕೊಡುಕುನಲ್ಲಿ ಟಿ.ವಿ.ರಾಜು ಅವರ ಮೇಲ್ವಿಚಾರಣೆಯಲ್ಲಿ ಸಂಗೀತ ನಿರ್ದೇಶಕರಾಗಿ ಮನ್ನಣೆ ಪಡೆದರು. ತೆಲುಗಿನಲ್ಲಿ ಅವರ ಕೆಲವು ಸ್ಮರಣೀಯ ಪ್ರಖ್ಯಾತವಾದ ಹಾಡುಗಳೆಂದರೆ ಯೇ ದಿವಿಲೋ ವಿರಿಸಿನಾ ಪಾರಿಜಾತಮೊ, ಗುನ್ನ ಮಾಮಿಡಿ ಕೊಮ್ಮ ಮೀದಾ, ಓ ಬಂಗಾರು ರಂಗುಲಾ ಚಿಲಾಕಾ, ಕಾಲಿಸೆ ಕಲ್ಲಾ ಲೋನಾ, ಥೋಲಿ ವಲಾಪೆ ತೀಯಾನಿಡಿ, ಆರನೀಕುಮಾ ಈ ದೀಪಂ ಕಾರ್ತಿಕ ದೀಪಂ, ಗಾಳಿ ವನಲೋ ವನ ನೀತಿಲೋ. ಅವರ ಮೊಮ್ಮಗನಾದ ಶ್ರೀ ವಸಂತ್ ಕೂಡ ಸಂಗೀತ ಸಂಯೋಜಕರಾಗಿದ್ದು, ಸುಡಿಗಾಡು (೨೦೧೨) ನಂತಹ ಚಿತ್ರಗಳಿಗೆ ಕೆಲಸ ಮಾಡಿದ್ದಾರೆ. ಸತ್ಯಂ ಅವರ ನೆನಪಿಗಾಗಿ, ೨೦೦೯ ರಲ್ಲಿ ಯುನೈಟೆಡ್ ಸ್ಟೇಟ್ಸ್‌ನ ಕ್ಯಾಲಿಫೋರ್ನಿಯಾದಲ್ಲಿ ಬೇ ಏರಿಯಾ ತೆಲುಗು ಅಸೋಸಿಯೇಷನ್ ಮತ್ತು ಚಿಮಾಟಾ ಮ್ಯೂಸಿಕ್ ಸಂಗೀತ ರಾತ್ರಿಯನ್ನು ಆಯೋಜಿಸಿತು. == ಸತ್ಯಂ ಅವರು ಸಂಗೀತ ನೀಡಿರುವ ತೆಲುಗು ಹಾಗು ಕನ್ನಡ ಚಿತ್ರಗಳು == === ತೆಲುಗು === == ಕನ್ನಡ == == ತಮಿಳು == ಮುಡಿ ಸೂಡಾ ಮನ್ನಾನ್ (೧೯೭೮) == ಹಿಂದಿ == ರಾಣಿ ಔರ್ ಜಾನಿ (೧೯೭೩) ಅಲಖ್ ನಿರಂಜನ್ (೧೯೭೫) ಆಜ್ ಕೆ ಶೋಲೆ (೧೯೮೫) ಜಾನಿ ಮೇರಾ ಯಾರ್ (೧೯೭೩) ಲೇಡಿ ಜೇಮ್ಸ್ ಬಾಂಡ್ (೧೯೭೨) ಗುನಾಹ್ ಕಿ ರಾತ್ (೧೯೭೯) ಮಹಾಶಕ್ತಿ (೧೯೮೦) ಇನ್ಸ್ಪೆಕ್ಟರ್ ರೇಖಾ (೧೯೭೩) ಅಪ್ನಾ ಫರ್ಜ್ (೧೯೭೩) ಖೂನ್ ಕಿ ಹೋಳಿ (೧೯೭೯) ಕೌನ್ ಸಚಾ ಕೌನ್ ಜುಥಾ (೧೯೭೨) == ಇದನ್ನೂ ನೋಡಿ == ವಿಜಯಭಾಸ್ಕರ್ ಟಿ.ಜಿ. ಲಿಂಗಪ್ಪ ಜಿ.ಕೆ.ವೆಂಕಟೇಶ್ ರಾಜನ್-ನಾಗೇಂದ್ರ ಉಪೇಂದ್ರ ಕುಮಾರ್ ಎಮ್. ರಂಗರಾವ್ == ಬಾಹ್ಯ ಕೊಂಡಿ == ಸತ್ಯಂ ಐ ಎಮ್ ಡಿ ಬಿನಲ್ಲಿ == ಉಲ್ಲೇಖಗಳು ==