== ಸತ್ಯಕ್ಕ == ಒಬ್ಬ ಪ್ರಾಮಾಣಿಕ ಸತ್ಯಸಾಧಕಿ. ಇವರು ಕರ್ನಾಟಕದ ಶಿವಮೊಗ್ಗ ಜಿಲ್ಲೆಯ ಶಿರಳಕೊಪ್ಪದ ಬಳಿ ಹಿರೆಜಾಂಬುರಿನಲ್ಲಿ ಜನಿಸಿದರು. ಸಂಸಾರದಿಂದ ದೂರವೇ ಉಳಿಯಲು ನಿರ್ಧರಿಸಿ, ಅವಿವಾಹಿತೆಯಾಗಿಯೇ ಉಳಿದು ಆಧ್ಯಾತ್ಮ ಸಾಧನೆಗೈದ ಶಿವಶರಣೆ. ತಾನು ಲಂಚ-ವಂಚನೆಗಳಿಗೆ ಕೈಯೊಡ್ಡದವಳೆಂದೂ, ದಾರಿಯಲ್ಲಿ ಬಿದ್ದ ಅನ್ಯರ ಒಡವೆ, ವಸ್ತುಗಳನ್ನು ಮುಟ್ಟುವುದಿಲ್ಲವೆಂದು ತನಗೆ ತಾನೇ ನಿರ್ಬಂಧ ವಿಧಿಸಿ ಕೊಂಡವಳು. ಶಿವನನ್ನು ಅಂತರಂಗದ ದೈವವೆಂದು ಪರಿಗಣಿಸಿ ಅವನೊಡನೆ ಸಂಭಾಷಣೆ ನಡೆಸುತ್ತಿದ್ದಳು. 'ಏಕೆನಗೆ ಕರುಣಿಸಲೊಲ್ಲದೆ ಕಾಡಿದೆ, ಏಕೆ ಹೇಳು ಎಲೆ ಲಿಂಗವೇ ? ತಾನು ಮಾಡಿದ ತಪ್ಪೇನು?' ಎಂದು ಶಿವನನ್ನೇ ಪ್ರಶ್ನಿಸಿದ್ದಾಳೆ. ಈಕೆಯ ವಚನಗಳ ಅಂಕಿತ "ಶಂಭುಜಕೇಶ್ವರ".