ಇದು ಡಿಪ್ಟೆರೋಕಾರ್ಪೇಸಿಯ ಕುಟುಂಬದಲ್ಲಿಒಂದು ಜಾತಿಯ ಸಸ್ಯವಾಗಿದೆ. ದೊಡ್ಡ ಪ್ರಮಾಣದ ನಿತ್ಯಹರಿದ್ವರ್ಣ ಮರ. ಈ ಮರವು ಸುಮಾರು 30 ಮೀ ಎತ್ತರವಾಗಿದ್ದು, ತೊಗಟೆ 10-12 ಮಿ.ಮೀ.ಇರುತ್ತದೆ.ಉರುಳೆಯಾಕಾರದ ಕಾಂಡ; 6ಮೀ.ಸುತ್ತಿನ ಬೆಳವಣಿಗೆ ಕಾಣುತ್ತದೆ.ಇದು ಬೂದು ಬಣ್ಣದ ನಯವಾದ ತೊಗಟೆಯನ್ನು ಹೊಂದಿದೆ.ಸಾಮಾನ್ಯವಾಗಿ 40-60 ಮೀ.ಎತ್ತರದವರೆಗೆ ಬೆಳೆಯುತ್ತದೆ.ಬೀಜದ ಜೀವಶಕ್ತಿ ಕಡಿಮೆ, ಹೆಚ್ಚೆಂದರೆ 3 ವಾರದವರೆಗೆ ಇರುತ್ತದೆ.ಎಲೆಗಳು ಸರಳವಾಗಿದ್ದೂ ಪರ್ಯಾಯ ಮತ್ತು ಸುತ್ತು ಜೋಡನಾ ವ್ಯವಸ್ಥೆಯಲ್ಲಿರುತ್ತದೆ.ಪುಷ್ಪಮಂಜರಿ ಅಕ್ಷಾಕಂಕುಳಿನಲ್ಲಿನ ದಟ್ಟವಾದ ಹಳದಿ ಬಣ್ಣದಿಂದ ಕೂಡಿರುತ್ತವೆ. ಹೂಗಳು ಬಿಳಿ ಬಣ್ಣದಲ್ಲಿರುತ್ತವೆ.ಕರ್ನಾಟಕದ ಪಶ್ಚಿಮ ಘಟ್ಟದ ಅರಣ್ಯ ಭಾಗಗಳ 200-500 ಸೆಂ.ಮೀ.ಮೇಲ್ಪಟ್ಟು ಮಳೆ ಬೀಳುವ ಪ್ರದೇಶಗಳಲ್ಲಿ ಇದು ವ್ಯಾಪಿಸಿದೆ.ಜನವರಿ-ಮಾರ್ಚ್ ತಿಂಗಳುಗಳಲ್ಲಿ ಹೂವರಳಿ, ಮೇ-ಜುಲೈನಲ್ಲಿ ಕಾಯಿಗಳು ಬಲಿಯುತ್ತದೆ.ಬೀಜಗಳು ತಾಯಿಮರಗಳ ಸಮೀಪ ಆಸುಪಾಸು ಉದುರಿದ್ದು, ಬೇಗ ಮೊಳೆತು ಸಾಕಷ್ಟು ಸಸಿಗಳು ಮರದ ಸುತ್ತಮುತ್ತ ಕಂಡು ಬರುತ್ತದೆ.ದಕ್ಷಣಕನ್ನಡ ಭಾಗಗಳಲ್ಲಿ ಸಾಮಾನ್ಯವಾಗಿ ಇದನ್ನು ಸಾಲುಮರವಾಗಿ ಬೆಳೆಸುತ್ತಾರೆ. == ವ್ಶೆಜ್ಞಾನಿಕ ಹೆಸರು == ವಟೇರಿಯಾಇಂಡಿಕ == ಸಾಮ್ರಾಜ್ಯ == ಪ್ಲಾಂಟ == ಕುಟುಂಬ == ಡಿಪ್ಟೆರೋಕಾರ್ಪೇಸ್ == ಇತರ ಹೆಸರು == ಸಾಲುಧೂಪ, ಧೂಪದ ಮರ, ಬಿಳಿ ಗುಗ್ಗುಲ, ಬಿಳಿ ಡಾಮರ್ == ಉಪಯೋಗಗಳು == “ಬಿಳಿ ಡಾಮರ್” ಎಂದು ವಾಣಿಜ್ಯರಂಗದಲ್ಲಿ ಕರೆಯಲ್ಪಡುವ ಅಂಟುರಾಳವು ಈ ಮರದಿಂದ ಉತ್ಪನ್ನವಾಗುತ್ತದೆ. ಆಯುರ್ವೇದ ಔಷಧವಾಗಿ ಬಳಸಲಾಗುತ್ತದೆ. ಬೀಜದಿಂದಎಣ್ಣೆಯನ್ನುತಯಾರಿಸಲಾಗುತ್ತದೆ. ರಾಳವನ್ನು ಧೂಪದ್ರವ್ಯವಾಗಿ ಬಳಸುತ್ತಾರೆ. ಇದನ್ನು ಕೈಗಾರಿಕಾ ಕ್ಷೇತ್ರದಲ್ಲಿ , ಪದರ ಹಲಗೆ ಹಾಗೂ ಬೆಂಕಿಪೆಟ್ಟಿಗೆಗಳ ತಯಾರಿಕೆಯಲ್ಲಿ ಬಳಸುತ್ತಾರೆ. ಭೇದಿ ಜ್ವರ, ಕರುಳು-ಯೋನಿ ಸೋಂಕುಗಳು ಹಾಗೂ ಸಂಧಿವಾತದ ಊತದ ನಿವಾರಣೆಗೆ ಇದರ ಕಷಾಯ ಬಳಸುತ್ತಾರೆ. == ಉಲ್ಲೇಖಗಳು ==