ಸಸ್ಯಗಳು ಜೀವಿಗಳಲ್ಲಿ ಒಂದು ಪ್ರಮುಖ ವಿಂಗಡಣೆ. ಸುಮಾರು ೩೫೦,೦೦೦ ಸಸ್ಯ ಪ್ರಬೇಧಗಳು () ಇವೆಯೆಂದು ಅಂದಾಜು ಮಾಡಲಾಗಿದೆ. ಸಸ್ಯಗಳು ಪ್ರಾಣಿಗಳಂತೆ ಜಂಗಮಗಳಲ್ಲ,ಅಂದರೆ ತಮ್ಮ ಸ್ಥಳವನ್ನು ಬಿಟ್ಟು ಓಡಾಡುವುದಿಲ್ಲ.ಎಲ್ಲಾದರೊಂದು ಕಡೆ ಅಂಟಿಕೊಂಡಿರುತ್ತವೆ.ಹೀಗಾಗಿ ಇವುಗಳನ್ನು ಸ್ಥಾವರಗಳೆಂದು ಕರೆಯಬಹುದು.ಗಿಡಮರಗಳೆಲ್ಲ ಈ ವರ್ಗಕ್ಕೆ ಸೇರುತ್ತವೆ.ಸ್ಥಾವರ - ಜಂಗಮಗಳ ವರ್ಗೀಕರಣಕ್ಕೆ ಅಪವಾದಗಳೂ ಇಲ್ಲದಿಲ್ಲ. ಸಾಗರದಲ್ಲಿರುವ ಏಕಕಣಸಸ್ಯ()ಗಳು ಸಸ್ಯಗಳಾದರೂ ನೀರಲ್ಲಿ ಬೇಕಾದಂತೆ ಚಲಿಸುತ್ತವೆ.ಹವಳದ ಜೀವಿ()ಸೂಕ್ಷ್ಮ ಪ್ರಾಣಿಯಾದರೂ ಒಂದು ಕಡೆ ಅಂಟಿಕೊಂಡಿದ್ದು ಸ್ಥಾವರದಂತೆ ಇರುತ್ತದೆ. == ==