== ಸಸ್ಯಾಹಾರ ಸೂಕ್ತ ಆಹಾರ == ಆರೋಗ್ಯವಾಗರಲು ಸಸ್ಯಾಹಾರಿ ಆಹಾರ ಕ್ರಮ ಎಂದಿಗೂ ಸೂಕ್ತವಾದುದು. ಆರೋಗ್ಯವಾಗಿರಲು, ಹೃದಯ ಸ್ವಾಸ್ಥ್ಯಕ್ಕೆ, ಶಕ್ತಿಯುತವಾಗಿರಲು, ಮಧುಮೇಹಕ್ಕೆ, ಕ್ಯಾನ್ಸರ್‌‍ಗಳ ತಡೆಗೆ ಸರಳ. ಎಲ್ಲಕ್ಕೂ ಸಸ್ಯಾಹಾರಿ ಡಯೆಟ್‌ ಸಹಾಯವಾಗಬಲ್ಲದು.ಮನೆಯಲ್ಲೇ ಇರುವ ಕೆಲವೇ ಆಹಾರಗಳಿಂದ ನಮ್ಮ ಆರೋಗ್ಯವನ್ನು ಸಮತೋಲನವಾಗಿಟ್ಟುಕೊಳ್ಳಬಹುದು. ಒಮೆಗಾ 3 ಫ್ಯಾಟಿ ಆಸಿಡ್‌; ಸ್ವಸ್ಥ ಹೃದಯ, ಮೆದುಳು, ಚರ್ಮ ಹಾಗೂ ಕೀಲಿಗೆ ಒಮೆಗಾ 3 ತುಂಬಾ ಅಗತ್ಯ. ಇದು ಅಗಸೆ ಬೀಜ, ಅಗಸೆ ಎಣ್ಣೆ, ಅಕ್ರೋಡ, ಗೋಣಿ ಸೊಪ್ಪಿನಲ್ಲಿ ಇರುತ್ತದೆ. ವಿಟಮಿನ್ ಡಿ: ವಿಟಮಿನ್‌ ಡಿ-೩ ಸೂರ್ಯನ ಬೆಳಕಿನಿಂದಲೇ ಪಡೆಯಬಹುದು. ಇದರೊಂದಿಗೆ ಕಿತ್ತಳೆ ಹಣ್ಣಿನ ರಸ, ಸೋಯಾ ಮಿಲ್ಕ್‌ನಲ್ಲಿ ಕೂಡ ಇತರೆ ವಿಟಮಿನ್ ಡಿ ಯ ಅಂಶಗಳಿವೆ ಕೊಲೆಸ್ಟ್ರಾಲ್ ಹತೋಟಿ: ಸಸ್ಯಾಹಾರಿ ಆಹಾರ ಕ್ರಮ ಕೊಲೆಸ್ಟ್ರಾಲ್ ಹೆಚ್ಚಿನ ಅಂಶವನ್ನು ತಡೆಯುತ್ತದೆ 200ಎಂ.ಜಿಗಿಂತ ಹೆಚ್ಚಿನ ಮಟ್ಟದ ಕೊಲೆಸ್ಟ್ರಾಲ್ ಅಂಶವು ಹೃದಯದ ತೊಂದರೆ ಹಾಗೂ ರಕ್ತದ ಏರೊತ್ತಡಕ್ಕೆ ಕಾರಣವಾಗಬಲ್ಲದು. ಇಂಥ ಕೆಟ್ಟ ಕೊಬ್ಬನ್ನು ಸಸ್ಯಾಹಾರಿ ಆಹಾರ ಕ್ರಮ ಪರಿಣಾಮಕಾರಿಯಾಗಿ ನಿಯಂತ್ರಿಸುತ್ತದೆ.. ಸಸ್ಯಾಹಾರದ ಊಟ-ತಿಂಡಿ ಸರಳವಾದ್ದರಿಂದ ಆರೋಗ್ಯವನ್ನು ಕಾಪಾಡಿಕೊಳ್ಳಲು ಕಡಿಮೆ ಹಣ ಸಾಕಾಗುವುದು. ಅದರಿಂದ ಭವಿಷ್ಯದಲ್ಲಿ ಚಿಕಿತ್ಸೆಗೆ ಹಣ ಸುರಿಯುವುದೂ ತಪ್ಪುತ್ತದೆ. == ಸಮತೋಲ ಸಸ್ಯಾಹಾರ ಸೇವನೆಯಲ್ಲಿ ಉಪಯೋಗಿಸಬಹುದಾದ ಆಹಾರ ವಸ್ತುಗಳು == === ಪ್ರೊಟೀನ್‌ === === ಕ್ಯಾಲ್ಸಿಯಂ-ಸುಣ್ಣದ ಅಂಶ === == ಕಬ್ಬಿಣದ ಅಂಶ == == ನೋಡಿ == ಆಹಾರಾಂಶಗಳು: *[೧] ಆಹಾರ ಗುಲ್‌ಮೊಹರ್ಸಸ್ಯಾಹಾರಿ ಸರಳ ಕ್ರಮ;ಪ್ರಜಾವಾಣಿ ವಾರ್ತೆ;15 ,2016[://..//20161117154450/://..///2016/11/15/452039. 2016-11-17 ವೇಬ್ಯಾಕ್ ಮೆಷಿನ್ ನಲ್ಲಿ.] == ಉಲ್ಲೇಖಗಳು == == ಉಲ್ಲೇಖ ==