ಸಹಾರ ಮರುಭೂಮಿ ಪ್ರಪಂಚದ ಎರಡನೆಯ ದೊಡ್ಡ ಮರುಭೂಮಿಯಾಗಿದೆ. ೯,೦೦೦,೦೦೦ ಚದರ ಕಿ.ಮೀ (೩,೫೦೦,೦೦೦ ಚದರ ಮೈಲಿ)ಗಳಷ್ಟು ವಿಶಾಲವಾಗಿ ಉತ್ತರ ಆಫ್ರಿಕಾದ ಉತ್ತರ ಭಾಗದಲ್ಲಿ ಹರಡಿರುವ ಇದು ೨.೫ ದಶಲಕ್ಷ ವರ್ಷಗಳಷ್ಟು ಹಳೆಯದು. ಸಹಾರ ಎಂದರೆ ಅರಾಬಿಕ್ ಭಾಷೆಯಲ್ಲಿ ಒಣ ಭೂಮಿ ಎಂದರ್ಥ. == ಭೂಗೋಳ == ಸಹಾರ ಮರುಭೂಮಿಯು ಆಫ್ರಿಕಾದ ಹಲವು ದೇಶಗಳಲ್ಲಿ ಹರಡಿ ಕೊಂಡಿದೆ. ಇದರಲ್ಲಿ ಪ್ರಮುಖ ದೇಶಗಳೆಂದರೆ ಅಲ್ಜೀರಿಯ, ಚಾಡ್, ಈಜಿಪ್ಟ್, ಲಿಬ್ಯ, ಮಾಲಿ, ಮೌರಿಟೇನಿಯ, ಮೊರಾಕೊ, ನೈಜರ್, ಪಶ್ಚಿಮ ಸಹಾರ, ಸುಡಾನ್ ಮತ್ತು ಟ್ಯುನೀಶಿಯ. == ಇದನ್ನೂ ನೋಡಿ == ವಿಶ್ವದ ಅತಿ ದೊಡ್ಡ ಮರುಭೂಮಿಗಳ ಪಟ್ಟಿ