ಸಾಫ್ಟೆಕ್ ಮೆಕ್ಸಿಕೊ ಮೂಲದ ಮಾಹಿತಿ ತ೦ತ್ರಜ್ಞಾನ ಕಂಪನಿ.ಉತ್ತರ ಅಮೇರಿಕಾ,ಲ್ಯಾಟಿನ್ ಅಮೆರಿಕ, ಯುರೋಪ್ ಮತ್ತು ಏಷ್ಯಾದಲ್ಲಿ ಈ ಕಂಪನಿ ಕಾರ್ಯನಿರ್ವಹಿಸುತ್ತದೆ. ಸಾಫ್ಟೆಕ್ ನ ಪ್ರಧಾನ ಕಚೇರಿ ಮೆಕ್ಸಿಕೊದ ಮಾಂಟೆರ್ರಿಯಲ್ಲಿದ್ದು, ಮೆಕ್ಸಿಕೋ ಮತ್ತು ವಿದೇಶಗಳಲ್ಲಿ ಸೇರಿ 8,000 ಉದ್ಯೋಗಿಗಳನ್ನು ಹೊಂದಿದೆ == ಇತಿಹಾಸ == ಸಾಫ್ಟೆಕ್ ಅನ್ನು 1982 ರಲ್ಲಿ ಗೆರಾರ್ಡೊ ಲೋಪೆಜ್ ಅವರು ಸ್ಥಾಪಿಸಿದರು. ೧೯೯೭ ನಲ್ಲಿ ಲ್ಯಾಟಿನ್ ಅಮೇರಿಕದಲ್ಲಿ ಮತ್ತು ೨೦೦೭ರಲ್ಲಿ ಚೀನಾದಲ್ಲಿ ತನ್ನ ಕೇಂದ್ರವನ್ನು ತೆರೆಯಿತು. ೨೦೧೩ರಲ್ಲಿ ಅಮೆರಿಕಾ ಮತ್ತು ಬೆಂಗಳೂರಿನಲ್ಲಿ ತನ್ನ ಮಾಹಿತಿ ತ೦ತ್ರಜ್ಞಾನ ಕೇಂದ್ರವನ್ನು ಶುರುಮಾಡಿತು. == ಆಡಳಿತ == ವಿಶ್ವದ ಬಹುರಾಷ್ಟ್ರೀಯ ಕಂಪೆನಿಗಳಲ್ಲಿ ಕೆಲವೇ ಮಹಿಳಾ (ಮುಖ್ಯ ಕಾರ್ಯನಿರ್ವಾಹಕ) ಹೊಂದಿರುವ ಕ೦ಪನಿಗಳಲ್ಲಿ ಸಾಫ್ಟ್ಟೆಕ್ ಕೂಡ ಒಂದು . ಬ್ಲಾಂಕಾ ಟ್ರೆವಿನೋ , ಸಾಫ್ಟ್ಟೆಕ್ ನ ಅಧ್ಯಕ್ಷೆ ಮತ್ತು . ಆಗಸ್ಟ್ 2000ರಿಂದ ಈ ಸ್ಥಾನದಲ್ಲಿದ್ದಾರೆ.2007ರಲ್ಲಿ ಫಾರ್ಚ್ಯೂನ್ ನಿಯತಕಾಲಿಕೆಯ "ಜಾಗತಿಕ ವ್ಯವಹಾರದಲ್ಲಿ 50 ಅತ್ಯಂತ ಶಕ್ತಿಶಾಲಿ ಮಹಿಳೆಯರು" ಈ ಪಟ್ಟಿಯಲ್ಲಿ ಬ್ಲಾಂಕಾ ಸ್ಥಾನಪಡೆದಿದ್ದರು. == ಸ್ವಾಧೀನಗಳು == == ಉಲ್ಲೇಖಗಳು == == ಬಾಹ್ಯ ಕೊಂಡಿಗಳು == ವೆಬ್ಸೈಟ್ ' 50 , 22, 2011 2012-03-03 ವೇಬ್ಯಾಕ್ ಮೆಷಿನ್ ನಲ್ಲಿ.