ಸಾರಥಿ (ಇಂಗ್ಲೀಷ್ಆಂಗ್ಲ:) ೨೦೧೧ ರ ದಿನಕರ್ ತೂಗುದೀಪ್ ಬರೆದು ಮತ್ತು ನಿರ್ದೇಶಿಸಿದ ಭಾರತೀಯ ಕನ್ನಡ ಭಾಷೆಯ ರೋಮ್ಯಾನ್ಸ್ ಆಕ್ಷನ್ ಚಿತ್ರ. ಚಿತ್ರದಲ್ಲಿ ದರ್ಶನ ಮತ್ತು ತಮ್ಮ ಚೊಚ್ಚಲ ಚಿತ್ರದಲ್ಲಿ ದೀಪ ಸನ್ನಿಧಿ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ವಿ.ಹರಿಕೃಷ್ಣ ಚಿತ್ರದ ಹಿನ್ನೆಲೆ ಸಂಗೀತ ಮತ್ತು ಅದರ ಧ್ವನಿಮುದ್ರಿಕೆಯನ್ನು ನೀಡಿದ್ದಾರೆ, ಸಾಹಿತ್ಯವನ್ನು ವಿ ನಾಗೇಂದ್ರ ಪ್ರಸಾದ್ ಅವರು ಬರೆದಿದ್ದಾರೆ. ೩೦ ಸೆಪ್ಟೆಂಬರ್ ೨೦೧೧ ರಂದು ಚಿತ್ರವು ರಾಜ್ಯಾದ್ಯಂತ ಬಿಡುಗಡೆಯಾಯಿತು, ಆವಾಗ ದರ್ಶನರವರು ಪತ್ನಿ ವಿಜಯಲಕ್ಷ್ಮಿ ಮೇಲೆ ಕಿರುಕುಳದ ಆರೋಪದ ಅಡಿಯಲ್ಲಿ ನ್ಯಾಯಾಂಗದ ವಶದಲ್ಲಿದ್ದರು. ಆರಂಭಿಕ ನಿರಾಕರಣೆಯ ನಂತರ, ತಯಾರಕರು ಫೆಬ್ರವರಿ ೨೦೧೨ ರಲ್ಲಿ ಚಿತ್ರ, ೧೯೯೪ ರಲ್ಲಿ ಚಿತ್ರ ಲಯನ್ ಕಿಂಗ್ ನಿಂದ ಸ್ಫೂರ್ತಿ ಪಡೆದಿದೆ ಎಂದು ಒಪ್ಪಿಕೊಂಡರು . ಈ ಚಿತ್ರವು ೨೦೧೧ ರ ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿ ಸಮಾರಂಭದಲ್ಲಿ ಅತ್ಯುತ್ತಮ ಮನರಂಜನೆಯ ಚಿತ್ರ ಸೇರಿದಂತೆ ಮೂರು ಪ್ರಶಸ್ತಿಗಳನ್ನು ಪಡೆದುಕೊಂಡಿದೆ. == ಉಲ್ಲೇಖಗಳು == ವರ್ಗ-೨೦೧೧ ಕನ್ನಡಚಿತ್ರಗಳು