ಸಾಲಿಡ್‍ವರ್ಕ್ಸ್ () ಎಂಬುದು ಒಂದು ಕಂಪ್ಯೂಟರ್ ನೆರವಿನ ವಿನ್ಯಾಸ () ಮತ್ತು ಕಂಪ್ಯೂಟರ್ ನೆರವಿನ ಇಂಜಿನಿಯರಿಂಗ್ () ತಂತ್ರಾಂಶ. ಇದು ಮೈಕ್ರೋಸಾಫ್ಟ್ ವಿಂಡೋಸ್ ಕಾರ್ಯಾಚರಣ ವ್ಯವಸ್ಥೆಯಲ್ಲಿ ಕೆಲಸ ಮಾಡುತ್ತದೆ. ಡಸಾಲ್ಟ್ ಸಿಸ್ಟಮ್ಸ್ ಎಂಬ ಕಂಪನಿಯಿಂದ ಈ ತಂತ್ರಾಂಶ ಬಿಡುಗಡೆಯಾಗಿದೆ. ಪ್ರಕಟಿತ ಅಂಕಿ ಅಂಶಗಳ ಪ್ರಕಾರ, ೨೦೧೩ ನೇ ಇಸವಿಯವರೆಗೆ ವರೆಗೆ ೧,೬೫,೦೦೦ ಕಂಪನಿಗಳಲ್ಲಿ ಇಪ್ಪತ್ತು ಲಕ್ಷಕ್ಕೂ ಹೆಚ್ಚಿನ ಇಂಜಿನಿಯರ್ ಗಳು ಮತ್ತು ವಿನ್ಯಾಸಕಾರರು () ಸಾಲಿಡ್‍ವರ್ಕ್ಸ್ ತಂತ್ರಾಂಶವನ್ನು ಬಳಸಿದ್ದಾರೆ. == ಇತಿಹಾಸ == ಮಸ್ಸಾಂಚುಸೆಟ್ಸ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಪದವಿಧರರಾದ ಅವರಿಂದ ೧೯೯೩ ಡಿಸೆಂಬರಲ್ಲಿ ಸಾಲಿಡ್‍ವರ್ಕ್ಸ್ ಕಾರ್ಪೋರೇಷನ್ ಸ್ಥಾಪಿಸಲ್ಪಟ್ಟಿತು. ಒಂದು ಮಿಲಿಯನ್ ಯು.ಎಸ್. ಡಾಲರ್ ಗಳನ್ನು ಇದಕ್ಕಾಗಿ ಅವರು ವ್ಯಯಿಸಿದರು. ಮೊದಲು ಯು.ಎಸ್. ಎ. ದೇಶದ ಮಸ್ಸಾಂಚುಸೆಟ್ಸ್ ನ ವಾಲ್ತ್‍ಹ್ಯಾಮ್ ಎಂಬಲ್ಲಿ ಶುರುವಾಯಿತು. ಈ ಕಂಪನಿಯ ಗುರಿ ಬಳಕೆದಾರ ಸ್ನೇಹಿಯಾದ, ಕಡಿಮೆದರದ, ವಿಂಡೋಸ್‍ನಲ್ಲಿ ಕೆಲಸ ಮಾಡುವಂತಹ ಒಂದು 3D ತಂತ್ರಾಂಶವನ್ನು ತಯಾರಿಸುವುದಾಗಿತ್ತು. ಅನಂತರ ಮಸ್ಸಾಂಚುಸೆಟ್ಸ್‍ನ ಕಾನ್ಕಾರ್ಡ್ ಪ್ರದೇಶಕ್ಕೆ ಸ್ಥಳಾಂತರ ಆದ ಈ ಕಂಪನಿಯು ೧೯೯೫ರಲ್ಲಿ ಮೊದಲ ಉತ್ಪನ್ನವಾದ ‘ 95' ಬಿಡುಗಡೆಗೊಳಿಸಿತು. ೧೯೯೭ರಲ್ಲಿ ಡಸಾಲ್ಟ್ ಸಿಸ್ಟಮ್ಸ್ ಕಂಪನಿಯು ೩೧೦ ಮಿಲಿಯನ್ ಯು.ಎಸ್. ಡಾಲರುಗಳಿಗೆ ಸಾಲಿಡ್ವಕರ್ಕ್ಸ್ ಕಾರ್ಪೋರೇಶನ್ ಕಂಪನಿಯನ್ನು ಖರೀದಿಸಿತು. ಪ್ರಸ್ತುತ ಸಾಲಿಡ್‍ವರ್ಕ್ಸ್ ತಂತ್ರಾಂಶವು ಇ-ಡ್ರಾಯಿಂಗ್ಸ್, ಡ್ರಾಫ್ಟ್‍ಸೈಟ್ ಮುಂತಾದ ಉಪ ಉತ್ಪನ್ನಗಳನ್ನೂ ತಯಾರಿಸಿ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿದೆ. == ಬಿಡುಗಡೆಯ ಇತಿಹಾಸ ಮತ್ತು ಆವೃತ್ತಿಗಳು == == ಮಾರುಕಟ್ಟೆ == ಈವರೆಗೂ ೧.೫ ಮಿಲಿಯನ್ ಲೈಸನ್ಸ್‍ಗಳು ಮಾರಾಟವಾಗಿವೆ. ಇದರಲ್ಲಿ ಶೈಕ್ಶಷಣಿಕ ಲೈಸೆನ್ಸ್ ಗಳೂ ಸೇರಿವೆ. ಸಾಲಿಡ್ ವರ್ಕ್ಸ್ ಜಗತ್ತಿನ ಅತಿ ಜನಪ್ರಿಯ ತಂತ್ರಾಂಶ ಎಂದು ಉಲ್ಲೇಖಿಸಿದೆ. ಇದು ವೈಯಕ್ತಿಕ ಬಳಕೆದಾರರಿಂದ ಹಿಡಿದು ದೊಡ್ಡ ದೊಡ್ಡ ಉತ್ಪಾದನಾ ಕಂಪನಿಗಳಲ್ಲಿ ಕೂಡ ಬಳಸಲ್ಪಡುತ್ತಿದೆ. ಜಗತ್ತಿನೆಲ್ಲೆಡೆ ಡೀಲರ್ ಮತ್ತು ಪಾರ್ಟನರ್‍ಗಳ ಮೂಲಕ ಮಾರುಕಟ್ಟೆಯನ್ನು ವಿಸ್ತರಿಸಿಕೊಂಡಿದೆ. ಯು.ಎಸ್. ದೇಶದಲ್ಲಿ ೧೯೯೫ರಲ್ಲಿ ಚಿಕಾಗೋದ , ಕಂಪನಿಯು ಸಾಲಿಡ್‍ವರ್ಕ್ಸ್ ಮೊದಲ ಮರುಮಾರುಗನಾಗಿತ್ತು (). ಸಾಲಿಡ್ ಎಡ್ಜ್ ಮತ್ತು ಆಟೋಡೆಸ್ಕ್ ಇನ್ವೆಂಟರ್ ತಂತ್ರಾಂಶಗಳು ಸಾಲಿಡ್‍ವರ್ಕ್ಸ್ ನೇರ ಕಾಂಪಿಟೀಟರ್ ತಂತ್ರಾಂಶಗಳಾಗಿವೆ. ಹಲವು ತಂತ್ರಾಂಶ ತಯಾರಿಕಾ ಕಂಪನಿಗಳ ಜೊತೆ ಸಾಲಿಡ್‍ವರ್ಕ್ಸ್ ಒಪ್ಪಂದಗಳನ್ನು ಮಾಡಿಕೊಂಡು ಅನೇಕ ಸೌಲಭ್ಯ ಪರಿಕರಗಳನ್ನು ಸಾಲಿಡ್‍ವರ್ಕ್ಸ್ ತಂತ್ರಾಂಶದಲ್ಲಿ ಸೇರಿಸಿದೆ. == ಮಾಡೆಲ್ಲಿಂಗ್ ಕ್ರಮ == ಸಾಲಿಡ್‍ವರ್ಕ್ಸ್ ಗಣಕದಲ್ಲಿ ಘನ ಆಕೃತಿಗಳ ಪ್ರತಿಕೃತಿಗಳನ್ನು ತಯಾರಿಸಬಹುದಾದಂತಹ ಒಂದು ಸಾಲಿಡ್ ಮಾಡೆಲರ್ ಆಗಿದ್ದು, - ಮಾರ್ಗವನ್ನು ಬಳಸುತ್ತದೆ. ನಿಯತಾಂಕಗಳು() ಅಂದರೆ ಒಂದು ಮಾಡೆಲ್‍ ನ ಆಕಾರ ಅಥವಾ geometryಯನ್ನು ನಿರ್ಧರಿಸುವಂತಹ ಅಂಶಗಳು. ಇವು ಗೆರೆಯ ಉದ್ದ, ವೃತ್ತದ ವ್ಯಾಸದಂತಹ ಸಂಖ್ಯೆಗಳಾಗಿರಬಹುದು ಅಥವಾ ಟ್ಯಾಂಜೆಂಟ್, ಸಮಾನಾಂತರ, ಏಕಕೆಂದ್ರ, ಪ್ಯಾರಲಲ್, ವರ್ಟಿಕಲ್ ಮುಂತಾದ ಜ್ಯಾಮಿತೀಯ ನಿಯತಾಂಕಗಳಾಗಿರಬಹುದು. ಸಂಖ್ಯಾ ನಿಯತಾಂಕಗಳನ್ನು ಒಂದಕ್ಕೊಂದು ಸಂಬಂಧಿಸುವುದರ ಮೂಲಕ ವಿನ್ಯಾಸದ ಉದ್ದೇಶವನ್ನು ಸಾಕಾರಗೊಳಿಸಬಹುದು. ಅಥವಾ ವಿನ್ಯಾಸದ ಉದ್ದೇಶ ಎಂದರೆ ವಿನ್ಯಾಸಕಾರನ ಉದ್ದೇಶಕ್ಕೆ ತಕ್ಕಂತೆ ಹೇಗೆ ರಚನೆಯು ಬದಲಾಗಬೇಕು ಎಂಬುದು. ಉದಾಹರಣೆಗೆ, ಒಂದು ಬಾಟಲಿಯ ಬಾಯಿಯ ಭಾಗದಲ್ಲಿರುವ ರಂಧ್ರ. ಈ ರಂಧ್ರವು ಬಾಟಲಿಯ ಎತ್ತರ ಏನೇ ವ್ಯತ್ಯಾಸವಾದರೂ ಸಹ ಮೇಲ್ಗಡೆ ತುದಿಯಲ್ಲೇ ಇರಬೇಕಾಗುತ್ತದೆ. ಎತ್ತರದಲ್ಲಿ ವ್ಯತ್ಯಾಸವಾದಾಗಲೂ ರಂಧ್ರವು ಮೇಲುಗಡೆ ತುದಿಯಲ್ಲಿ ಇಂತಹ ಜಾಗದಲ್ಲೇ ಇರಬೇಕು ಎಂದು ನಿರ್ದೇಶನ ಕೊಡುವುದಕ್ಕೆ ಸಾಲಿಡ್‍ವರ್ಕ್ಸ್ ತಂತ್ರಾಂಶವು ಅನುವುಮಾಡಿಕೊಡುತ್ತದೆ. ಸಾಲಿಡ್‍ವರ್ಕ್ಸ್ ತಂತ್ರಾಂಶದಲ್ಲಿ ಎನ್ನುವುದು ಒಂದು ಘಟಕದ/ಭಾಗದ ಆಗಿದ್ದು ಘಟಕದ ನಿರ್ಮಾಣ/ರಚನೆಯಲ್ಲಿನ ಆಕೃತಿ ಹಾಗೂ ಕಾರ್ಯಗಳನ್ನು ಸೂಚಿಸುತ್ತವೆ. ಆಕಾರ ಆಧಾರಿತ featureಗಳು (- ) ಸಾಮಾನ್ಯವಾಗಿ ಎರಡು, ಮೂರು ಆಯಾಮದ ರೇಖೆ(2D, 3D )ಗಳಿಂದ ಪ್ರಾರಂಭವಾಗಿ ನಂತರ ಮೂರು ಆಯಾಮದ ಆಕೃತಿಗಳಾಗುತ್ತವೆ. ಈ ಆಕೃತಿಗಳಿಗೆ ಹೆಚ್ಚಿನ ಮೆಟೀರಿಯಲ್ ಸೇರಿಸುವುದರ ಮೂಲಕ ಅಥವಾ ತೆಗೆಯುವುದರ ಮೂಲಕ ಬೇಕಾದ ಆಕಾರಗಳನ್ನು ರಚಿಸಲಾಗುತ್ತದೆ. - ಎಂದು ಕರೆಯಲಾಗುವ ಕೆಲವು featureಗಳು ಸ್ಕೆಚ್ ಆದಧಾರಿತವಾಗಿರುತವುದಿಲ್ಲ. ಅವುಗಳೆಂದರೆ , , , ಇತ್ಯಾದಿ. ಸಾಲಿಡ್ ವರ್ಕ್ಸ್ ತಂತ್ರಾಂಶದಲ್ಲಿ ಒಂದು ಮಾಡೆಲ್ ರಚನೆಯು 2D ಸ್ಕೆಚ್ ನಿಂದ ಪ್ರಾರಂಭವಾಗುತ್ತದೆ. ಚುಕ್ಕೆಗಳು, ಗೆರೆಗಳು, ಆರ್ಕ್, ಕೋನಿಕ್ಸ್, ಸ್ಪ್ಲೈನ್() ಮುಂತಾದವುಗಳನ್ನು ಈ ಸ್ಕೆಚ್ ಒಳಗೊಂಡಿರುತ್ತದೆ. ಇವುಗಳಿಗೆ ಬೇಕಾದ ಅಳತೆಗಳನ್ನು () ಕೊಡಲಾಗುತ್ತದೆ ಮತ್ತು ಜ್ಯಾಮಿತೀಯ ನಿರ್ಬಂಧಗಳನ್ನು(, , , ) ಕೊಡಲಾಗುತ್ತದೆ. ಈ ಅಳತೆಗಳು ಮತ್ತು ಜ್ಯಾಮಿತೀಯ ಸಂಬಂಧಗಳ ಆಧಾರದ ಮೇಲೆ ಒಂದು ಆಕೃತಿ ನಿರ್ಧರಿತವಾಗುವುದು ಅದು ಸಾಲಿಡ್ ವರ್ಕ್ಸ್ ತಂತ್ರಾಂಶದ ಪ್ಯಾರಾಮೆಟ್ರಿಕ್ ಗುಣಲಕ್ಷಣವಾಗಿದೆ. ಈ ಸ್ಕೆಚ್ ನಲ್ಲಿನ ಅಳತೆಗಳನ್ನು ಸ್ವತಂತ್ರವಾಗಿ ನಿಯಂತ್ರಿಸಬಹುದು ಅಥವಾ ಬೇರೆ ಒಳ, ಹೊರ ಅಂಶಗಳೊಂದಿಗೆ ಸಂಬಂಧ ಕಲ್ಪಿಸುವುದರ ಮೂಲಕ ನಿಯಂತ್ರಿಸಬಹುದಾಗಿರುತ್ತದೆ. ಭಾಗಗಳ ಜೋಡಣೆಯಲ್ಲಿ () matesಗಳ ಮೂಲಕ ಒಂದಕೊಂದು ಭಾಗವನ್ನು ಜೋಡಿಸಲಾಗುತ್ತದೆ. ಅವುಗಳಲ್ಲಿ , , , ಮುಂತಾದ ಹಲವು ರೀತಿಯ ಜೋಡಣೆಗಳಿದ್ದು ಇವು ಜೋಡಣೆಯ ಪ್ರಕ್ರಿಯೆಯನ್ನು ಸುಲಭವಾಗಿಸುತ್ತವೆ. ತದನಂತರ ಈ ಭಾಗ ಅಥವಾ ಜೋಡಣೆಗಳ ರೇಖಾಚಿತ್ರಗಳನ್ನು () ರಚಿಸಬಹುದು. ಡ್ರಾಯಿಂಗ್ ನಲ್ಲಿ ಘನ ಆಕೃತಿಗಳ ವಿವಿಧ ನೋಟಗಳನ್ನು ತೋರಿಸಿ ಅದಕ್ಕೆ ಅಳತೆಗಳು, ಟಿಪ್ಪಣಿಗಳು ಇನ್ನಿತರ ಅಗತ್ಯ ಮಾಹಿತಿಗಳನ್ನು ಸೇರಿಸಬಹುದು. , , , , , ಮುಂತಾದ ಮಾನಕಗಳ ಕಾಗದ ಗಾತ್ರಗಳು ಲಭ್ಯವಿರುತ್ತವೆ. == ಫೈಲ್ ಮಾದರಿಗಳು == ಸಾಲಿಡ್‍ವರ್ಕ್ಸ್ ತಂತ್ರಾಂಶದ ಫೈಲುಗಳು ( ), ( ), ( ) ಮಾದರಿಯಲ್ಲಿ ಇರುತ್ತವೆ. == ಇವನ್ನೂ ನೋಡಿ == ಗಣಕ ನೆರವಿನ ವಿನ್ಯಾಸ () ಗಣಕ ನೆರವಿನ ಎಂಜಿನಿಯರಿಂಗ್ () == ಉಲ್ಲೇಖಗಳು == == ಹೊರಕೊಂಡಿಗಳು == ಸಾಲಿಡ್‍ವರ್ಕ್ಸ್ ಅಧಿಕೃತ ಜಾಲತಾಣ