ಸಾವರಿಯ ೨೦೦೭ರಲ್ಲಿ ಬಿಡುಗಡೆಯಾಗಿರುವ ಬಾಲಿವುಡ್ ಚಿತ್ರ. ಇದು ಫಯದೊರ್ ದಾಸ್ಟಾವ್ಸ್ಕೀರವರ ವ್ಹೈಟ್ ನೈಟ್ಸ್ ಎಂಬ ಕಥೆಯಿಂದ ಪ್ರೇರಿಸಲ್ಪಟ್ಟದ್ದು.ಈ ಚಿತ್ರವನ್ನು ಸಂಜಯ್ ಲೀಲಾ ಭಂಸಾಲಿ ಅವರು ನಿರ್ದೇಶಿಸಿ ನಿರ್ಮಾಣ ಮಾಡಿದ್ದಾರೆ ಈ ಚಿತ್ರ ನಾಯಕ ರನ್ಬೀರ್ ಕಪೂರ್ ಹಾಗು ನಾಯಕಿ ಸೋನಮ್ ಕಪೂರ್ ಅವರ ಮೊದಲನೇ ಚಿತ್ರ. ಇದರ ಲೇಖಕ ಪ್ರಕಾಶ್ ಕಪಾಡಿಯ ಮತ್ತು ವಿಭು ಪೂರಿ.ಈ ಚಿತ್ರದಲ್ಲಿರುವ ಪಾತ್ರವರ್ಗ ರನ್ಬೀರ್ ಕಪೂರ್,ಸೋನಮ್ ಕಪೂರ್,ಸಲ್ಮಾನ್ ಖಾನ್,ರಾಣಿ ಮುಖರ್ಜಿ,ಜ಼ೊಹ್ರ ಸೆಹ್ಗಲ್.ಈ ಚಿತ್ರದ ಸಂಗೀತ ಸಂಯೋಜಕರು ಮೋಂಟಿ ಶರ್ಮ,ಈ ಚಿತ್ರದ ಛಾಯಾಗ್ರಹಕರು ರವಿ ಚಂದ್ರನ್,ಈ ಚಿತ್ರವು ಹಿಂದಿ ಭಾಷೆಯಲ್ಲಿ ಇದೆ.