ಸಿ.ಎಸ್.ನಾಡಗೌಡ(ಅಪ್ಪಾಜಿ: ಚನ್ನಬಸವರಾಜ ಶಂಕರರಾವ ನಾಡಗೌಡ)ಯವರು ಮಾಜಿ ಶಾಸಕರು, ಮಂತ್ರಿಗಳು ಹಾಗೂ ರಾಜಕೀಯ ಧುರೀಣರು. == ಜನನ == ನಾಡಗೌಡರು 21ನೇ ನವೆಂಬರ್, 1960ರಂದು ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲ್ಲೂಕಿನ ಬಲದಿನ್ನಿ ಗ್ರಾಮದಲ್ಲಿ ಜನಿಸಿದರು. == ಶಿಕ್ಷಣ == ಧಾರವಾಡದ ಸೆಂಟ್ ಜೋಸೆಫ್ ಪ್ರೌಢ ಶಾಲೆಯಿಂದ ಎಸ್.ಎಸ್.ಎಲ್.ಸಿ ಉತ್ತಿರ್ಣರಾಗಿ ರಾಯಚೂರಿನ ಎಲ್.ವಿ.ಡಿ ಕಾಲೇಜಿನಿಂದ ಬಿ.ಎ. ಪದವಿ ಪಡೆದಿದ್ದಾರೆ. == ರಾಜಕೀಯ == ವಿಜಯಪುರ ಜಿಲ್ಲಾ ಕಾಂಗ್ರೆಸ್‌ ಸದಸ್ಯ ಹಾಗೂ ಕೆ.ಪಿ.ಸಿ.ಸಿ. ಸದಸ್ಯರಾಗಿದ್ದರು. ಐದು ಬಾರಿ ಮುದ್ದೇಬಿಹಾಳ ವಿಧಾನಸಭಾ ಕ್ಷೇತ್ರದಿಂದ ವಿಧಾನ ಸಭೆಗೆ ಆಯ್ಕೆಯಾಗಿದ್ದರು. == ನಿರ್ವಹಿಸಿದ ಖಾತೆಗಳು == 1989ರಲ್ಲಿ ಮುದ್ದೇಬಿಹಾಳ ವಿಧಾನಸಭಾ ಕ್ಷೇತ್ರದಿಂದ ಸಿ.ಎಸ್.ನಾಡಗೌಡರು ಹ್ಯಾಟಿಕ್ ಸಾಧಿಸಿದ ಜಗದೇವರಾವ್ ದೇಶಮುಖರನ್ನು ಸೋಲಿಸಿ ಕಾಂಗ್ರೆಸ್‌ ಪಕ್ಷದಿಂದ ಮೊದಲ ಬಾರಿಗೆ ವಿಧಾನ ಸಭೆ ಪ್ರವೇಶಿಸಿದ್ದರು. 1994ರಲ್ಲಿ ವಿಮಲಾಬಾಯಿ ದೇಶಮುಖರವರ ವಿರುದ್ಧ ಸೋಲು. 1999, 2004, 2008 ಹಾಗೂ 2013 ನಾಲ್ಕು ಬಾರಿ ಸತತ ಕಾಂಗ್ರೆಸ್‌ ಪಕ್ಷದಿಂದ ಗೆಲುವು. 2018ರಲ್ಲಿ ಬಿಜೆಪಿಯ ಎ.ಎಸ್.ಪಾಟೀಲ(ನಡಹಳ್ಳಿ)ಯವರ ವಿರುದ್ಧ ಸೋಲು. 2013 - ಕರ್ನಾಟಕ ಸರ್ಕಾರದ ಸಿದ್ದರಾಮಯ್ಯ ಸಂಪುಟದಲ್ಲಿ ದೆಹಲಿ ವಿಶೇಷ ಪ್ರತಿನಿಧಿಯಾಗಿದ್ದರು. ಕಾರ್ಮಿಕ ಸಚಿವ ಮತ್ತು ಸರ್ಕಾರದ ಮುಖ್ಯ ಸಚೇತಕರಾಗಿದ್ದರು. 2013 - ಕರ್ನಾಟಕ ಸರ್ಕಾರದ ಸ್ಥಳೀಯ ಸಂಸ್ಥೆಗಳ ಮತ್ತು ಪಂಚಾಯತ ರಾಜ್ ಸಮಿತಿಯ ಅಧ್ಯಕ್ಷರಾಗಿದ್ದರು. == ವೈಯಕ್ತಿಕ ಜೀವನ == ನಾಡಗೌಡರು ವಿವಾಹಿತರಾಗಿದ್ದು ಪತ್ನಿಯ ಹೆಸರು ಸುವರ್ಣಾ ಮತ್ತು ಏಕೈಕ ಮಗಳು-ನಿಯಾತಿ. == ಉಲ್ಲೇಖಗಳು ==