ಸಿಂಪಿಗ ( ) ಏಷಿಯಾ ಖಂಡದ ಸಾಮಾನ್ಯ ಪಕ್ಷಿ. ಎಲೆಗಳನ್ನು ನೇಯ್ದು ಗೂಡು ಕಟ್ಟುವ ಕಾರಣ ಪಕ್ಷಿಗೆ ಈ ಹೆಸರು ಬಂದಿದೆ. === ವೈಜ್ಞಾನಿಕ ಹೆಸರು === ಆರ್ಥೋಟೋಮಸ್ ಸುಟೋರಿಯಸ್ ( ) ಎಂಬುದು ವೈಜ್ಞಾನಿಕ ಹೆಸರು. ದರ್ಜಿಹಕ್ಕಿ ಎಂದು ಕನ್ನಡದ ಇನ್ನೊಂದು ಹೆಸರು. ಸಂಸ್ಕೃತದಲ್ಲಿ ಪತ್ರಪುಟ, ಪುಟಿಕಾ ಎಂದು ಕರೆಯುತ್ತಾರೆ. === ಲಕ್ಷಣಗಳು === ಗುಬ್ಬಚ್ಚಿ ಗಿಂತ ಚಿಕ್ಕದಾದ ಪಕ್ಷಿ. ಪಾಚಿ ಹಸಿರು ಬಣ್ಣ.ಎದೆ,ಹೊಟ್ಟೆ,ಹಾಗೂ ಬಾಲದ ತಳ ಭಾಗ ಬಿಳಿ.ತಿಳಿ ಗುಲಾಬಿ ಕಾಲುಗಳು.ಮೊನಚಾದ ಬಾಲವನ್ನು ಸದಾ ಎತ್ತಿಕೊಂಡಿರುತ್ತದೆ. === ಆವಾಸ === ಜನವಸತಿ ಪ್ರದೇಶ,ಕುರುಚಲು ಕಾಡು ಮುಂತಾದ ಕಡೆಗಳಲ್ಲಿ ಪೊದೆಗಳಲ್ಲಿ ವಾಸಿಸುತ್ತವೆ.ಗುಂಪಿನಲ್ಲಿ ಅಥವಾ ಒಂಟಿಯಾಗಿ ಕಾಣ ಸಿಗುತ್ತವೆ. === ವಿಶೇಷತೆ === ಎಲೆಗಳನ್ನು ಹೆಣೆದು ಹತ್ತಿ, ನಾರು ಮುಂತಾದವುದಳನ್ನು ಜೋಡಿಸಿ ಗೂಡುಕಟ್ಟುವುದರಲ್ಲಿ ನಿಪುಣ. === ಬಾಹ್ಯ ಸಂಪರ್ಕ === 2016-04-19 ವೇಬ್ಯಾಕ್ ಮೆಷಿನ್ ನಲ್ಲಿ. === ಛಾಯಾಂಕನ === ಸಿಂಪಿಗ === ಆಧಾರ === ೧. ಪಕ್ಷಿ ಪ್ರಪಂಚ: ಹರೀಶ್ ಆರ್.ಭಟ್ ಹಾಗೂ ಪ್ರಮೋದ್ ಸುಬ್ಬರಾವ್