ಸಿಂಹೇಂದ್ರಮಧ್ಯಮ ಕರ್ನಾಟಕ ಸಂಗೀತ ಪದ್ಧತಿಯ ಮೇಳಕರ್ತ ರಾಗಗಳಲ್ಲಿ ೫೭ನೆಯ ರಾಗ.ಈ ರಾಗವನ್ನು ಮುತ್ತುಸ್ವಾಮಿ ದೀಕ್ಷಿತರು ಸಂಪಾದಿಸಿದ ಸಂಗೀತ ಗ್ರಂಥದಲ್ಲಿ ಸುಮದ್ಯುತಿ ಎಂದು ಹೆಸರಿಸಿದ್ದಾರೆ. == ರಾಗ ಸ್ವರೂಪ ಮತ್ತು ಲಕ್ಷಣ == ಇದು ಹತ್ತನೆಯ ದಿಸಿ ಚಕ್ರದ ಮೂರನೆಯ ರಾಗ.ಇದರ ನೆನೆಪಿನ ಹೆಸರು ದಿಸಿ-ಗೊ ನೆನಪಿನ ನುಡಿಕಟ್ಟು:ಸ ರಿ ಗಿ ಮಿ ಪ ಧ ನಿ ಇದರ ಆರೋಹಣ ಮತ್ತು ಅವರೋಹಣದಲ್ಲಿ ಎಲ್ಲಾ ಶುದ್ಧ ಸ್ವರಗಳೂ ಇದ್ದು ಅದು ಈ ಕೆಳಗಿನಂತಿವೆ. ಆರೋಹಣ ಸ ರಿ೨ ಗ೨ ಮ೨ ಪ ದ೧ ನಿ೩ ಸ ಅವರೋಹಣ ಸ ನಿ೩ ದ೧ ಪ ಮ೨ ಗ೨ ರಿ೨ ಸ ಇದು ಒಂದು ಸಂಪೂರ್ಣ ರಾಗವಾಗಿದೆ.ಇದರ ಸ್ವರಶ್ರೇಣಿ. 'ಷಡ್ಜ, ಚತುಶ್ರುತಿ ರಿಷಭ,ಸಾಧಾರಣ ಗಾಂಧಾರ,ಪ್ರತಿಮಧ್ಯಮ,ಪಂಚಮ,ಶುದ್ಧ ಧೈವತಮತ್ತು ಕಾಕಲಿ ನಿಷಾಧ.ಇದು ೨೧ನೆಯ ಮೇಳಕರ್ತ ರಾಗವಾದ ಕೀರ್ವಾಣಿ ಸಮಾನವಾದ ಪ್ರತಿಮಧ್ಯಮವನ್ನು ಹೊಂದಿದೆ. == ಜನ್ಯ ರಾಗಗಳು == ಈ ರಾಗಕ್ಕೆ ಕೆಲವು ಜನ್ಯ ರಾಗಗಳಿವೆ.ಇವುಗಳಲ್ಲಿ ಮುತ್ತಯ್ಯ ಭಾಗವತರ್ ಬಳಕೆಗೆ ತಂದ ರಾಗ ವಿಜಯಸರಸ್ವತಿ ಹೆಚ್ಚಾಗಿ ಕಛೇರಿಗಳಲ್ಲಿ ಹಾಡಲ್ಪಡುತ್ತದೆ. == ಜನಪ್ರಿಯ ರಚನೆಗಳು == ಸಿಂಹೇಂದ್ರಮಧ್ಯಮ ರಾಗದಲ್ಲಿ ಕೆಲವು ಜನಪ್ರಿಯ ಕೃತಿಗಳು ಈ ಕೆಳಗಿನಂತಿವೆ. ನೀದು ಚರಣಮುಲೆ-ತ್ಯಾಗರಾಜ ಕಾಮಾಕ್ಷಿ ಕಾಮಕೋಟಿ ಪೀಠ ವಾಸಿನಿ - ಮುತ್ತುಸ್ವಾಮಿ ದೀಕ್ಷಿತ ಪಾಮರಜನಪಾಲಿನಿ- ಮುತ್ತುಸ್ವಾಮಿ ದೀಕ್ಷಿತ ಆಶೈಂಧದಮ್ ಮಾಯಿಲ್ ಒಂಡ್ರು - ಒಟ್ಟುಕ್ಕಾಡು ವೆಂಕಟ ಕವಿ ನಿನ್ನೇ ನಮ್ಮಿತಿ ನಯ್ಯ - ಮೈಸೂರು ವಾಸುದೇವಾಚಾರ್ಯ ಇನ್ನುಂ ಒರುತಾರಮ್- ಮುತ್ತು ತಾಂಡವರ್ ಅಯ್ಯಪ್ಪ- ಕೆ.ಜೆ.ಜೇಸುದಾಸ್ ಉಣ್ಣಯಲ್ಲಾಲ್ ವೀರೇ ಗತಿ- ಕೋಟೀಶ್ವರ ಅಯ್ಯರ್ ರಾಮ ರಾಮ ಗುಣ ಸೀಮ - ಸ್ವಾತಿ ತಿರುನಾಳ್ ಮರಕತ ಸಿಂಹಾಸನ- ಎಂ. ಬಾಲಮುರಳಿ ಕೃಷ್ಣ "ಇಹ ಪರಮ್ ಯೆನ್ನುಂ"- ಮಹಾ ವೈದ್ಯನಾಥ ಅಯ್ಯರ್ == ಸಂಬಂಧಿತ ರಾಗಗಳು == ಗ್ರಹಭೇದಮ್ ಸೂತ್ರವನ್ನು ಸಿಂಹೇಂದ್ರಮಧ್ಯಮ ರಾಗಕ್ಕೆ ಅನ್ವಯಿಸಿದಾಗ ಎರಡು ರಾಗಗಳು ದೊರೆಯುತ್ತದೆ.ಅವುಗಳು ಮಾಯಮಾಳವಗೌಳ ಮತ್ತು ರಸಿಕಪ್ರಯ == ಉಲ್ಲೇಖಗಳು ==