ಸೈಪ್ರಸ್ ( Κύπρος, Kýpros ,ಅಧಿಕೃತವಾಗಿ ಸೈಪ್ರಸ್ ಗಣರಾಜ್ಯ ) ಮೆಡಿಟೆನೇನಿಯನ್ ಸಮುದ್ರದ ಪೂರ್ವಭಾಗದಲ್ಲಿರುವ ಒಂದು ದ್ವೀಪರಾಷ್ಟ್ರ. ಸೈಪ್ರಸ್ ಟರ್ಕಿಯ ದಕ್ಷಿಣಕ್ಕೆ ಹಾಗೂ ಗ್ರೀಸ್‌ನ ಅಗ್ನೇಯಕ್ಕೆ ಮತ್ತು ಈಜಿಪ್ಟ್‌ನ ಉತ್ತರಕ್ಕಿದೆ. ಹಿಂದೆ ಬ್ರಿಟಿಷ್ ಸಾಮ್ರಾಜ್ಯದ ಅಂಗವಾಗಿದ್ದ ಸೈಪ್ರಸ್ ೧೯೬೦ರಲ್ಲಿ ಸ್ವತಂತ್ರರಾಷ್ಟ್ರವಾಯಿತು.