ಸಿರವಾರ ಇದು ಕರ್ನಾಟಕದ ರಾಯಚೂರು ಜಿಲ್ಲೆಯ ಒಂದು ಹೊಸ ತಾಲೂಕ ಕೇಂದ್ರ. ಕರ್ನಾಟಕದ ವೇಗವಾಗಿ ಬೆಳೆಯುತ್ತಿರುವ ಪಟ್ಟಣಗಳಲ್ಲಿ ಸಿರವಾರ ಪಟ್ಟಣವು ಕೂಡ ಒಂದಾಗಿದೆ. ವಿಶ್ವದಲ್ಲೇ ಅತ್ಯಂತ ಪ್ರಸಿದ್ಧಿ ಪಡೆದಿರುವ ಸೋನಾ ಮಸೂರಿ ಭತ್ತಕ್ಕೆ ಈ ಪಟ್ಟಣವು ಹೆಸರುವಾಸಿಯಾಗಿದೆ. ಸಮೀಪದ ಗ್ರಾಮಗಳಿಗೆ ವ್ಯಾಪಾರ ಕೇಂದ್ರವಾಗಿ ಮಾರ್ಪಟ್ಟಿದೆ. ಈ ಪ್ರದೇಶವೂ ಚೆರ್ರಿ ಹಣ್ಣುಗೆ ಪ್ರಸಿದ್ಧಿ ಪಡೆದಿದ್ದು ಟನ್ನುಗಟ್ಟಲೆ ರಫ್ತು ಮಾಡಲಾಗುತ್ತದೆ. == ಇತಿಹಾಸ == ರಾಯಚೂರು ಜಿಲ್ಲೆಯ ಸಿರವಾರ ಪಟ್ಟಣವು ರಾಯಚೂರಿನ ಇತಿಹಾಸ ಪೂರ್ವಕಾಲದ ನಿವೇಶನಗಳಾದ ಮಸ್ಕಿ,ಕವಿತಾಳ, ಪಿಲ್ಲಿಹಾಲ್ ಮತ್ತು ಕಲ್ಲೂರು ಮುಂತಾದ ಸ್ಥಳಗಳಲ್ಲಿ ಸಿರವಾರವು ಒಂದು. == ಜನಸಂಖ್ಯೆ == ಸಿರವಾರ ಪಟ್ಟಣವು ರಾಯಚೂರು ಜಿಲ್ಲೆಯ ಒಂದು ತಾಲ್ಲೂಕು ಕೇಂದ್ರ.ಇದು ಕರ್ನಾಟಕ ರಾಜ್ಯದ ಪ್ರಮುಖ ಕಂದಾಯ ವಿಭಾಗವಾದ ಕಲಬುರಗಿಯ ಭಾಗಕ್ಕೆ ಬರುವ ಪ್ರಮುಖ ಪಟ್ಟಣ. ಸಿರವಾರ ಪಟ್ಟಣವು 2011 ಜನಗಣತಿಯ ಪ್ರಕಾರ 19295 ಅದರಲ್ಲಿ 9568 ಪುರುಷರು ಮತ್ತು 9767 ಮಹಿಳೆಯರನ್ನು ಒಳಗೊಂಡಿದೆ. == ಉಲ್ಲೇಖಗಳು == == ಬಾಹ್ಯ ಸಂಪರ್ಕಗಳು == ://../