ಲೆಪ್ಟಡೆನಿಯಾ ರೆಟಿಕ್ಯುಲಾಟಾ ಒಂದು ಹಳದಿ ಹೂ ಬಿಡುವ ಒಂದು ಬಳ್ಳಿ ನೀರಿನಾಸೆರೆಯಿರುವಲ್ಲಿ ತಾನಾಗಿಯೇ ಬೆಳೆಯುವ ಸಸ್ಯ. ಬಳ್ಳಿ ಅಥವಾ ಎಲೆಯನ್ನು ಮುರಿದಾಗ ನಸುಹಳದಿಯ ಬಣ್ಣದ ಹಾಲು ಬರುವ ಈ ಗಿಡವನ್ನು ಬೀಜಗಳಿಂದ ಪಡೆಯಬಹುದು. ಬೀಜ ಹಾಕಿದ ಮೂರು-ನಾಲ್ಕು ತಿಂಗಳಲ್ಲಿ ಬಳಸಬಹುದಾದ ಮಟ್ಟಕ್ಕೆ ಬೆಳೆಯುತ್ತದೆ. ಎಲೆಗಳು ಹಳದಿಯಾಗುವ ಮೂದಲು ಉಪಯೋಗಿಸಬೇಕು . ಈ ಸಸ್ಯ ಔಷಧವಷ್ಟೇ ಅಲ್ಲ ಅತ್ಯುತ್ತಮ ತರಕಾರಿಯು ಹೌದು. ಸಿಹಿಹಾಲೆ, ಪೌಷ್ಟಿಕಾಂಶ ಮತ್ತು ಜೀವಸತ್ವಗಳ ಆಗರ. ಕಣ್ಣುಗಳ ದೃಷ್ಟಿಶಕ್ತಿ ಹೆಚ್ಚಿಸಿ, ಕೆಮ್ಮು-ದಮ್ಮು, ದುಬ೯ಲತೆಳನ್ನು ನಿವಾರಿಸಿ, ರೋಗನಿರೋಧಕ ಶಕ್ತಿಯನ್ನು ಬೆಳೆಸುತದೆ. == ಇತರ ಹೆಸರು == ಸಿಹಿಸಾಲೆ ಕಿರುಹಾಲೆ ಹಾಲುಬಳ್ಳಿ ಫಲತಿಗೇ ಬಳ್ಳಿ ದೊದೆಬಳ್ಳಿ == ಉಪಯೋಗ == ಸಿಹಿಹಾಲೆಯ ಸೊಪ್ಪನ್ನು ಹೆಸರುಕಾಳು ಆಥವ ತೊಗರಿ ಬೇಳೆಯೂಂದಿಗೆ ಸೇರಿಸಿ ಪಲ್ಯ ಮಾಡಿ ತಿನ್ನುವುದರಿಂದ ಹಾಲು ಕುಡಿಸುವ ತಾಯಂದೆರಲ್ಲಿ ಎದೆಹಾಲಿನ ಪ್ರಮಾಣ ಹೆಚ್ಚುತ್ತದೆ. ಮಗುವಿಗೆ ಪೌಷ್ಟಿಕಾಂಶ ದೊರೆಯುತ್ತದೆ. ರೋಗನಿರೋಧಕ ಶಕ್ತಿಯೂ ಬೆಳೆಯುತ್ತದೆ. ಈ ಸೊಪ್ಪಿನ ಸಾರು ಆಥವಾ ಕಟ್ಟು ಕೂಡ ಇಷ್ಟೆ ಒಳೆಯದು. ಕೆಮ್ಮು, ದಮ್ಮು ಸ್ವರವ್ಯತ್ಯಾಸ ಮುಂತಾದವುಗಳಲ ಇದರು ಎಲೆಗಳಿಂದ ತೆಗೆದ ಮೂರು-ನಾಲ್ಕು ಟೀ ಚಮಚದಷ್ಟು ರಸಕ್ಕೆ ಒಂದು ಟೀ ಚಮಚ ಜೇನುತುಪ್ಪ ಸೇರಿಸಿ ದಿನದಲ್ಲಿ ಎರಡು ಮೂರು ಬಾರಿ ಆಹಾರಕ್ಕೆ ಮೊದಲು ಸೇವಿಸಬೇಕು. ಇದರಿಂದ ಗಂಟ್ಲು ಉರಿ ಮತ್ತು ಮೂಗಿನಿಂದ ಸುರಿಯುವ ರಕ್ತವು ನಿಲ್ಲುತ್ತದೆ. ವಾರದಲ್ಲಿ ಒಂದೆರಡು ಬಾರಿ ತರಕಾರಿಯಾಗಿ ಬಳಸುವುದರಿಂದ 'ಎ' ಜೀವಸತ್ವದ ಕೊರತೆಯಿಂದ ಕಾಣಿಸುವ ದೃಷ್ಟಿಮಾಂದ್ಯ ಸಂಪುಣ೯ವಾಗಿ ಪರಿಹಾರವಾಗಿ ಕಣ್ಣು ಆರೋಗ್ಯ ಪುಣ೯ವಾಗುತ್ತದೆ. == ಉಲ್ಲೇಖಗಳು ==