ಸೀತಾಫಲ ( ) ಮೂಲತಃ ವೆಸ್ಟ್ ಇಂಡೀಸ್ ದ್ವೀಪ ಸಮೂಹಗಳ ನಿವಾಸಿ. ಈಗ ಭಾರತದಲ್ಲಿ ಹಾಗೂ ಕರ್ನಾಟಕದಲ್ಲಿ ಬೆಳೆಸಲ್ಪಡುತ್ತಿದೆ. == ಸಸ್ಯಶಾಸ್ತ್ರೀಯ ವರ್ಗೀಕರಣ == ಇದು ಅನೋನಾಸಿ () ಕುಟುಂಬಕ್ಕೆ ಸೇರಿದ್ದು, ಅನೋನ ಸ್ಕ್ವಾಮೋಸ ( ) ಎಂದು ಸಸ್ಯಶಾಸ್ತ್ರೀಯ ಹೆಸರು ಇದೆ. ಆಂಗ್ಲ ಭಾಷೆಯಲ್ಲಿ ಕಸ್ಟರ್ಡ್ ಅಪಲ್ ಎಂಬ ಬಳಕೆಯ ಹೆಸರೂ ಇದೆ. == ಸಸ್ಯದ ಗುಣಲಕ್ಷಣಗಳು == ಇದು ಹೆಚ್ಚು ಕಾಂಡಗಳನ್ನು ಹೊಂದಿದ ಸಾಧಾರಣ ಎತ್ತರದ (೩ ರಿಂದ ೮ ಮೀಟರ್) ಗಿಡ. ಹೆಚ್ಚಾಗಿ ಶುಷ್ಕ ಪ್ರದೇಶದಲ್ಲಿ ಕಂಡು ಬರುವುದು. ಹಣ್ಣು ರುಚಿಕರವಾಗಿದೆ. ಹೃದಯಾಕಾರದ ಹಣ್ಣು ಹಳದಿ ಅಥವಾ ಹಸುರು ಬಣ್ಣ. ಹಣ್ಣಿನಲ್ಲಿ 73.9%ರಷ್ಟು ಶರ್ಕರ, 1.6%ರಷ್ಟು ಪ್ರೋಟೀನು ಹಾಗೂ 0.3% ಕೊಬ್ಬು ಇವೆ. ಜೀವಸತ್ತ್ವ ಎ ಕೂಡ ಅಲ್ಪ ಪ್ರಮಾಣದಲ್ಲಿರುತ್ತದೆ. == ಉಪಯೋಗಗಳು == ಇದರ ಹಣ್ಣು ರುಚಿಕರ ಹಾಗೂ ಪಚನಕಾರಿಯಾಗಿ ಒಳ್ಳೆಯ ಬೇಡಿಕೆ ಹೊಂದಿದೆ. ಇದರ ಬೀಜ ಹಾಗೂ ಎಲೆಗಳು ಕೀಟನಿರೋಧಕ ಗುಣಗಳನ್ನು ಹೊಂದಿದೆ. ಹಸುರೆಲೆಗಳಿಂದ ಎಣ್ಣೆ ತಯಾರಿಸುತ್ತಾರೆ. == ಔಷಧೀಯ ಗುಣಗಳು == ಸೀತಾಫಲದ ಎಲೆಗಳನ್ನು ನುಣ್ಣಗೆ ಅರೆದು ಕುರು, ಗಡ್ಡೆ(ಗ್ರಂಥಿ)ಗಳಿಗೆ ಹಚ್ಚಿದರೆ ಆರಿ ಅಥವಾ ಸಣ್ಣದಾಗಿ ಸೋರಿಹೋಗುತ್ತದೆ. ಇದೇ ಎಲೆಗಳನ್ನು ಅರೆದು ಹಚ್ಚಿದರೆ ಬೆಂಕಿ ಬರುವುದು. ನವೆ(ದಡಿಕೆ) ಗುಣವಾಗುತ್ತದೆ. ೩ ರಿಂದ ೬ ದಿವಸ. ಜ್ವರ, ಕೆಮ್ಮು, ದಮ್ಮಿಗೆ: ಸೀತಾಫಲದ ಗಿಡದ ತೊಗಟೆಯ ಕಷಾಯ ಮಾಡಿ ಜೇನು ಸೇರಿಸಿ ಕುಡಿದರೆ ಜ್ವರ, ಕೆಮ್ಮು, ಗೂರಲು (ಉಬ್ಬಸ) ಗುಣವಾಗಿ ನಿತ್ರಾಣ ಕಮ್ಮಿಯಾಗುತ್ತದೆ. ರೋಗಕ್ಕನುಸರಿಸಿ ಕೆಲವು ದಿವಸಗಳ ವರೆಗೆ ಸೇವಿಸುತ್ತಾ ಬರುವುದು. ಹುಣ್ಣು, ಗಾಯಗಳಿಗೆ: ಸೀತಾಫಲದ ಎಲೆ ತಂದು ಒಣಗಿಸಿ ಬಾಣಲೆಯಲ್ಲಿ ಹಾಕಿ ಕರಕಾಗುವಂತೆ ಹುರಿದು ಹುಡಿಮಾಡಿಟ್ಟುಕೊಡು ಗಾಯಕ್ಕೆ ಹಾಕಿದರೆ, ಗುಣವಾಗುತ್ತದೆ. ಹುಡಿಯನ್ನು ವ್ಯಾಸಲೀನ್ ಹಾಕಿ ಮುಲಾಮಿನಂತೆ ಮಾಡಿಟ್ಟು ಹುಣ್ಣುಗಳಿಗೆ ಹಚ್ಚುತ್ತ ಬಂದರೆ ಹುಣ್ಣುಗಳು ಮಾಯುತ್ತವೆ. == ಆಧಾರ ಗ್ರಂಥಗಳು == 'ವನಸಿರಿ':ಅಜ್ಜಂಪುರ ಕೃಷ್ಣಸ್ವಾಮಿ. == ಉಲ್ಲೇಖಗಳು == == ಹೊರಗಿನ ಕೊಂಡಿಗಳು == " ." . . " ". . . 7 2008. 2008-04-17. . ( , ) ( ) ( )