ಸೀಸ () ಬಹಳ ಪ್ರಾಚೀನ ಕಾಲದಿಂದಲೂ ಬಳಕೆಯಲ್ಲಿರುವ ಒಂದು ಲೋಹ ಮೂಲಧಾತು.ಲ್ಯಾಟಿನ್ ಬಾಷೆಯಲ್ಲಿ ಇದನ್ನು ಪ್ಲಂಬಮ್ ಎನ್ನುತ್ತಾರೆ.ಪ್ರಾಚೀನ ಕಾಲದಿಂದಲೂ ಇದನ್ನು ಕಟ್ಟಡ ನಿರ್ಮಾಣಕ್ಕೆ,ನೀರಿನ ಕೊಳವೆಗೆ,ಪಾತ್ರೆಗಳ ತಯಾರಿಕೆಗಳಿಗೆ ಉಪಯೋಗಿಸುತ್ತಿದ್ದಾರೆ. ಈಗ ಇದು ಹಲವಾರು ವೈಶಿಷ್ಟ್ಯಪೂರ್ಣ ಗುಣಗಳಿಂದ ಸಾವಿರಾರು ವಸ್ತುಗಳ ತಯಾರಿಯಲ್ಲಿ ನೇರವಾಗಿ ಅಥವಾ ಸಂಯುಕ್ತಗಳ ರೂಪದಲ್ಲಿ ಉಪಯೋಗಿಸಲ್ಪಡುತ್ತದೆ.ಇದು ಉಪಯುಕ್ತ ಲೋಹವಾಗಿರುವಂತೆಯೇ ಅತಿಯಾದ ಬಳಕೆಯಿಂದ ವಾತಾವರಣ ಮಾಲಿನ್ಯಕ್ಕೆ ಕಾರಣ ಕೂಡಾ ಅಗಿದೆ. ಸೀಸ ತವರ, ಜೋಡಿಸಲ್ಪಡುವ ಮಿಶ್ರಲೋಹಗಳಿಗೆ ಭಾಗವಾಗಿ. ಲೆಡ್-ಆಸಿಡ್ ಬ್ಯಾಟರಿಗಳನ್ನು ಮತ್ತು ವಿಧ್ಯುತ್ ಸಂಗ್ರಹಿಸುವ ಸಾಧನಗಳನ್ನು ಮಾಡಲು, ಗುಂಡುಗಳು ಮತ್ತು ಶಾಟ್, ತೂಕದ ಕಲ್ಲುಗಳನ್ನು ನಿರ್ಮಿಸಲು ಬಳಸಲಾಗುತ್ತದೆ. ಇದಲ್ಲದೆ ವಿಕಿರಣದ ಗುರಾಣಿಗೆ ಬಳಸಲಾಗುತ್ತದೆ. ಸೀಸವನ್ನು ಸೇವಿಸಿದರೆ ಅಥವಾ ಉಸಿರಾಡಿದರೆ, ಸೀಸ ಮತ್ತು ಅದರ ಸಂಯುಕ್ತಗಳು ಪ್ರಾಣಿಗಳು ಮತ್ತು ಮಾನವರಿಗೆ ವಿಷಕಾರಿ. ಸೀಸ ಮೃದು ಅಂಗಾಂಶಗಳ ಮತ್ತು ಮೂಳೆಗಳಲ್ಲಿ ಒಟ್ಟುಗೂಡುವ ಒಂದು ನರವಿಷಕಾರಿ ವಸ್ತು. ನಂತರ ಇದು ನರಮಂಡಲದ ಹಾನಿ ಮತ್ತು ಮಿದುಳಿನ ಕಾಯಿಲೆಗಳಿಗೆ ಕಾರಣವಾಗುತ್ತದೆ.