ಸುಚರಿತ್ರ ಕರ್ನಾಟಕ ಸಂಗೀತ ಪದ್ಧತಿಯ ಮೇಳಕರ್ತ ರಾಗಗಳಲ್ಲಿ ೬೭ ನೆಯ ರಾಗ.ಈ ರಾಗವನ್ನು ಮುತ್ತುಸ್ವಾಮಿ ದೀಕ್ಷಿತರು ಸಂಪಾದಿಸಿದ ಸಂಗೀತ ಗ್ರಂಥದಲ್ಲಿ ಸಂತಾನಮಂಜರಿ ಎಂದು ಹೆಸರಿಸಿದ್ದಾರೆ. . == ರಾಗ ಸ್ವರೂಪ ಮತ್ತು ಲಕ್ಷಣ == ಇದು ಹನ್ನರಡನೆಯ ಆದಿತ್ಯ ಚಕ್ರದ ಮೊದಲನೆಯ ರಾಗ.ಇದರ ನೆನೆಪಿನ ಹೆಸರು ಆದಿತ್ಯ-ಪಾ ನೆನಪಿನ ನುಡಿಕಟ್ಟು:ಸ ರು ಗು ಮಿ ಪ ಧ ನ ಇದರ ಆರೋಹಣ ಮತ್ತು ಅವರೋಹಣದಲ್ಲಿ ಎಲ್ಲಾ ಶುದ್ಧ ಸ್ವರಗಳೂ ಇದ್ದು ಅದು ಈ ಕೆಳಗಿನಂತಿವೆ. ಆರೋಹಣ ಸ ರಿ೩ ಗ೩ ಮ೨ ಪ ದ೧ ನಿ೧ ಸ ಅವರೋಹಣ ಸ ನಿ೧ ದ೧ ಪ ಮ೨ ಗ೩ ರಿ೩ ಸ ಇದು ಒಂದು ಸಂಪೂರ್ಣ ರಾಗವಾಗಿದೆ.ಇದರ ಸ್ವರಶ್ರೇಣಿ. 'ಷಡ್ಜ, ಷಟ್‍ಶೃತಿ ರಿಷಭ,ಅಂತರ ಗಾಂಧಾರ,ಪ್ರತಿಮಧ್ಯಮ,ಪಂಚಮ,ಶುದ್ಧ ಧೈವತಮತ್ತು ಶುದ್ಧ ನಿಷಾಧ.ಇದು ೩೧ನೆಯ ಮೇಳಕರ್ತ ರಾಗವಾದ ಯಾಗಪ್ರಿಯಗೆ ಸಮಾನವಾದ ಪ್ರತಿಮಧ್ಯಮವನ್ನು ಹೊಂದಿದೆ. == ಜನ್ಯ ರಾಗಗಳು == ಈ ರಾಗಕ್ಕೆ ಕೆಲವು ಜನ್ಯ ರಾಗಗಳಿವೆ. == ಜನಪ್ರಿಯ ರಚನೆಗಳು == ಈ ರಾಗದಲ್ಲಿ ಹಲವಾರು ರಚನೆಗಳಿದ್ದು, ಕೆಲವು ಚಿಂತಯಾಮಿ ಸಂತತಮ್- ಎಂ. ಬಾಲಮುರಳಿ ಕೃಷ್ಣ ವೇಲು ಮಾಯಿಲುಮೆ- ಕೋಟೀಶ್ವರ ಐಯ್ಯರ್ ಸಂತಾನ ಮಂಜರಿ- ಮುತ್ತುಸ್ವಾಮಿ ದೀಕ್ಷಿತರು == ಸಂಬಂಧಿತ ರಾಗಗಳು == ಗ್ರಹಭೇದಮ್ ಸೂತ್ರವನ್ನು ಸುಚರಿತ್ರ ರಾಗಕ್ಕೆ ಅನ್ವಯಿಸಿದಾಗ ಯಾವುದೇ ರಾಗಗಳು ದೊರೆಯುವುದಿಲ್ಲ. == ಉಲ್ಲೇಖಗಳು ==