ಸುದೀಪ ಅಥವಾ ಕಿಚ್ಚ ಸುದೀಪ (ಜನನ ೨ ಸೆಪ್ಟೆಂಬರ್ ೧೯೭೩) ಒಬ್ಬ ಭಾರತೀಯ ಚಲನಚಿತ್ರ ನಟ, ನಿರ್ದೇಶಕ, ನಿರ್ಮಾಪಕ, ಕಥೆ,ಚಿತ್ರಕಥೆಗಾರ,ವಿತರಕ,ದೂರದರ್ಶನ ನಿರೂಪಕ ಮತ್ತು ಹಿನ್ನೆಲೆ ಗಾಯಕ, ಇವರು ಮುಖ್ಯವಾಗಿ ಕನ್ನಡ ಭಾಷೆಯ ಚಲನಚಿತ್ರಗಳಲ್ಲಿ ಕೆಲಸ ಮಾಡುತ್ತಾರೆ, ಜೊತೆಗೆ ತೆಲುಗು, ಹಿಂದಿ ಮತ್ತು ತಮಿಳು ಭಾಷೆಯ ಕೆಲವು ಚಿತ್ರಗಳಲ್ಲಿ ನಟಿಸಿದ್ದಾರೆ. ಕನ್ನಡ ಚಿತ್ರಗಳಾದ ಸ್ಪರ್ಶ (2000), ಹುಚ್ಚ (2001), ನಂದಿ (2002), ಕಿಚ್ಚ (2003), ಸ್ವಾತಿ ಮುತ್ತು (2003), ಮೈ ಆಟೋಗ್ರಾಫ್ (2006), ನಂ 73 ಶಾಂತಿ ನಿವಾಸ (2007), ಮುಸ್ಸಂಜೆ ಮಾತು (2008), ವೀರ ಮದಕರಿ (2009), ಜಸ್ಟ್ ಮಾತ್ ಮಾತಲ್ಲಿ (2010), ಕೆಂಪೇಗೌಡ (2011), ತೆಲುಗು-ತಮಿಳು ದ್ವಿಭಾಷಾ ಚಿತ್ರ ಈಗ (2012) ಮತ್ತು ಹಿಂದಿ ಚಲನಚಿತ್ರ ದಬಾಂಗ್ 3 (2019) ಇವರ ಪ್ರಮುಖ ಚಿತ್ರಗಳು. ಹುಚ್ಚ, ನಂದಿ ಮತ್ತು ಸ್ವಾತಿ ಮುತ್ತು ಚಿತ್ರಗಳಿಗಾಗಿ ಸತತ ಮೂರು ವರ್ಷಗಳ ಕಾಲ ಕನ್ನಡದ ಅತ್ಯುತ್ತಮ ನಟನೆಗಾಗಿ ಫಿಲ್ಮ್‌ಫೇರ್ ಪ್ರಶಸ್ತಿ ಪಡೆದರು. 2013 ರಿಂದ, ಅವರು ಟೆಲಿವಿಷನ್ ರಿಯಾಲಿಟಿ ಶೋ ಬಿಗ್ ಬಾಸ್ ಕನ್ನಡದ ನಿರೂಪಕರಾಗಿದ್ದಾರೆ. ಇವರು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಸದಸ್ಯರು ಕೂಡ ಆಗಿದ್ದಾರೆ. == ಆರಂಭಿಕ ಜೀವನ == ಕರ್ನಾಟಕದ ಶಿವಮೊಗ್ಗ ಜಿಲ್ಲೆಯಲ್ಲಿ ಸಂಜೀವ್ ಮಂಜಪ್ಪ ಮತ್ತು ಸರೋಜ ದಂಪತಿಗಳಿಗೆ ಸುದೀಪ್ ಜನಿಸಿದರು.ಬೆಂಗಳೂರಿನ ದಯಾನಂದ ಸಾಗರ್ ಕಾಲೇಜ್ ಆಫ್ ಇಂಜಿನಿಯರಿಂಗ್ ಶಿಕ್ಷಣ ಸಂಸ್ಥೆಯಲ್ಲಿ ಕೈಗಾರಿಕಾ ಮತ್ತು ಉತ್ಪಾದನಾ ಇಂಜಿನಿಯರಿಂಗ್ ಪದವಿಯನ್ನು ಪಡೆದರು. == ಚಿತ್ರಗಳು == == ಸೌತ್ ಇಂಡಿಯನ್ ಇಂಟರ್ನ್ಯಾಷನಲ್ ಮೂವಿ ಅವಾರ್ಡ್ಸ್ == === ಕರ್ನಾಟಕ ರಾಜ್ಯ ಪ್ರಶಸ್ತಿ === ಅತ್ಯುತ್ತಮ ನಟ ಪ್ರಶಸ್ತಿ == ಉಲ್ಲೇಖಗಳು ==