ಸುಮನ್ (ಹಿಂದಿನ ಸುಮನ್ ಮಿಶ್ರಾ, ಜುಗ್ನು ಇಶಿಕಿ) (ಜನನ ೨೪ ಡಿಸೆಂಬರ್ ೧೯೮೯)ರವರು ಒಬ್ಬ ಭಾರತೀಯ ನಟಿ, ರೂಪದರ್ಶಿ, ಗಾಯಕಿ ಮತ್ತು ನೃತ್ಯಗಾರ್ತಿ. == ವೈಯಕ್ತಿಕ ಜೀವನ == ಸುಮನ್ ಹುಟ್ಟಿ ಬೆಳೆದದ್ದು ಜಾರ್ಖಂಡ್‌ನ ಜಮ್ಶೆಡ್‌ಪುರದಲ್ಲಿ. ಅವರ ತಂದೆ ಸುಶೀಲ್ ಕುಮಾರ್ ಮಿಶ್ರಾ ಮತ್ತು ತಾಯಿ ಕಮಲ್ ಮಿಶ್ರಾ ಹಾಗೂ ಇವರ ಸಹೋದರಿ ಶೀತಲ್ ಮಿಶ್ರಾ. ಸುಮನ್ ತನ್ನ ಶಾಲಾ ಶಿಕ್ಷಣವನ್ನು ಡಿಬಿಎಮ್‌ಎಸ್() ಇಂಗ್ಲಿಷ್ ಶಾಲೆಯಲ್ಲಿ ಮತ್ತು ಉನ್ನತ ಶಿಕ್ಷಣವನ್ನು ಮೋತಿಲಾಲ್ ನೆಹರು ಪಬ್ಲಿಕ್ ಸ್ಕೂಲ್‌ನಿಂದ ಪೂರ್ಣಗೊಳಿಸಿದರು. ಅವರು ಮುಂಬೈನ ಸೋಫಿಯಾ ಕಾಲೇಜ್ ಫಾರ್ ವುಮೆನ್‌ನಿಂದ ಪದವಿಯನ್ನು ಪೂರ್ಣಗೊಳಿಸಿದರು. ಆಕೆಯ ತಂದೆ ಸುಶೀಲ್ ಕುಮಾರ್ ಮಿಶ್ರಾ ವೈದ್ಯರಾಗಿದ್ದಾರೆ. ನಾಲ್ಕನೇ ವಯಸ್ಸಿನಿಂದ ನೃತ್ಯವನ್ನು ಅಭ್ಯಾಸ ಮಾಡುತ್ತಿದ್ದ ಸುಮನ್ ಅವರು ಕಥಕ್ ನೃತ್ಯದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದರು. == ವೃತ್ತಿ == ಸುಮನ್ ಮಾಡೆಲಿಂಗ್ ಆಗಿ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದರು ಮತ್ತು ದೀಪಾವಳಿಯಂದು ಪಟಾಕಿಗಳೊಂದಿಗೆ ಫೋಟೋಶೂಟ್ ಮಾಡಿದಾಗ ಅವರು ಬೆಳಕಿಗೆ ಬಂದರು. ನಂತರ ಅವರು ಲೂಟಿ ಚಿತ್ರದಲ್ಲಿ ಸಾರಿ ಧುನಿಯಾ ಮೇರೆ ಇಸ್ಪೆ ಎಂಬ ಪ್ರಚಾರ ಗೀತೆಯಲ್ಲಿ ಕಾಣಿಸಿಕೊಂಡರು. ೨೦೧೩ ರಲ್ಲಿ ಅವರು ಸಿಲ್ಲುನು ಒರು ಸಂಧಿಪ್ಪು ಚಿತ್ರದಲ್ಲಿ ಐಟಂ ಸಾಂಗ್ ಮಾಡಿದ್ದರು. ಅವರು ಅಮ್ಮಾ ಕಿ ಬೋಲಿ ಚಿತ್ರದಲ್ಲಿ ತರ್ಲಾ ಆಗಿಯೂ ಕೆಲಸ ಮಾಡಿದರು. ನಂತರ ಅವರು ಕ್ರೇಜಿ ಕುಕ್ಕಡ್ ಫ್ಯಾಮಿಲಿ ಚಿತ್ರದಲ್ಲಿ ಚೆರ್ರಿ ಪ್ರಕಾಶ್ ಝಾ ನಿರ್ಮಿಸಿದ ಪಾತ್ರದಲ್ಲಿ ಗುರುತಿಸಿಕೊಂಡರು. ಜಹಾಂಗೀರ್ ಆರ್ಟ್ ಗ್ಯಾಲರಿಯಲ್ಲಿ ರಾವ್ಸಾಹೇಬ್ ಗುರವ್ ಅವರ ಚಿತ್ರಕಲಾ ಪ್ರದರ್ಶನದಲ್ಲಿ ಸುಮನ್ ಭಾಗವಹಿಸಿದ್ದಾರೆ. == ಚಿತ್ರಕಥೆ == ಬೊಂಗು (೨೦೧೭), ಕ್ರೇಜಿ ಕುಕ್ಕಡ್ ಫ್ಯಾಮಿಲಿ (೨೦೧೫), ಚೆರ್ರಿ ಆಗಿ ಅಮ್ಮಾ ಕಿ ಬೋಲಿ (೨೦೧೩), ತರಳ ಆಗಿ ಸಿಲ್ಲುನು ಒರು ಸಂಧಿಪ್ಪು (೨೦೧೩) ಐಟಂ ಹಾಡು ಲೂಟ್ (೨೦೧೧), "ಸಾರಿ ದುನಿಯಾ ಮೇರೆ ಇಸ್ಪೆ" ಪ್ರಚಾರದ ಹಾಡಿನಲ್ಲಿ ಕಾಣಿಸಿಕೊಂಡರು. == ಉಲ್ಲೇಖಗಳು ==