ಸೆನೆಗಲ್ ( Sénégal), ಅಧಿಕೃತವಾಗಿ ಸೆನೆಗಲ್ ಗಣರಾಜ್ಯ, ಪಶ್ಚಿಮ ಆಫ್ರಿಕಾದಲ್ಲಿನ ಸೆನೆಗಲ್ ನದಿಯ ದಕ್ಷಿಣಕ್ಕೆ ಇರುವ ಒಂದು ದೇಶ. ಇದರ ಪಶ್ಚಿಮಕ್ಕೆ ಅಟ್ಲಾಂಟಿಕ್ ಮಾಹಾಸಾಗರ, ಉತ್ತರಕ್ಕೆ ಮೌರಿಟೇನಿಯ, ಪೂರ್ವಕ್ಕೆ ಮಾಲಿ ಮತ್ತು ದಕ್ಷಿಣಕ್ಕೆ ಗಿನಿ ಮತ್ತು ಗಿನಿ-ಬಿಸೌ ದೇಶಗಳಿವೆ. ಗ್ಯಾಂಬಿಯ ಗಣರಾಜ್ಯ ಸುಮಾರು ಸಂಪೂರ್ಣವಾಗಿ ಈ ದೇಶದ ಒಳಗೇ ಇದೆ. ಡಕಾರ್ ಈ ದೇಶದ ರಾಜಧಾನಿ.