ಸೆರುಂಡೆಂಗ್ ಇಂಡೋನೇಷ್ಯಾದಲ್ಲಿ ಹುಟ್ಟಿದ ಖಾರದ ತುರಿದ ತೆಂಗಿನಕಾಯಿಯ ಭಕ್ಷ್ಯ ಅಥವಾ ವ್ಯಂಜನ. ಇದನ್ನು ಅನ್ನದ ಜೊತೆಗೆ ಬಳಸಲಾಗುತ್ತದೆ. ಪಾಕವಿಧಾನದ ರೂಪಾಂತರಗಳ ಪ್ರಕಾರ, ಸೆರುಂಡೆಂಗ್ ಸಿಹಿ ಅಥವಾ ಖಾರವಾದ ರುಚಿ ಹೊಂದಿರಬಹುದು.: 34, 37 ಇದರ ಸುಪ್ರಸಿದ್ಧ ರೂಪಾಂತರವೆಂದರೆ ಇಂಡೋನೇಷಿಯನ್ ತಯಾರಿಯಾದ ಕೊಬ್ಬರಿ ತುರಿಗೆ ಸಂಬಾರ ಪದಾರ್ಥಗಳು ಮತ್ತು ಇತರ ಪದಾರ್ಥಗಳನ್ನು ಬೆರೆಸುವುದು.: 17 ಖಾರವಾದ ತುರಿದ, ಬಾಡಿಸಿದ ಕಾಯಿತುರಿಯನ್ನು ಕಡಲೆಕಾಯಿಯೊಂದಿಗೆ ಬೆರೆಸಬಹುದು. ಇದನ್ನು ಪರಿಮಳ ಸೇರಿಸಲು ವ್ಯಂಜನವಾಗಿ ಬಳಸಲಾಗುತ್ತದೆ, ಅಥವಾ ಅನ್ನ ಆಧಾರಿತ ಭಕ್ಷ್ಯಗಳ ಮೇಲೆ ಸಿಂಪಡಿಸಲಾದ ಖಾದ್ಯಾಲಂಕಾರವಾಗಿ ಬಳಸಲಾಗುತ್ತದೆ, ಉದಾಹರಣೆಗೆ ಆವಿಯಲ್ಲಿ ಬೇಯಿಸಿದ ಅನ್ನ, ಲಾಂಟಾಂಗ್, ಕೆಟಾನ್ ಅಂಟಂಟಾದ ಅನ್ನ ಮತ್ತು ಬುರಾಸಾ ; ಅಥವಾ ಸಾಂಪ್ರದಾಯಿಕ ಸೋಟೊ ಸೂಪ್‌ಗಳ ಮೇಲೆ. == ಉಲ್ಲೇಖಗಳು ==