ಸೆರ್ಬಿಯ ಗಣರಾಜ್ಯ ಮಧ್ಯ ಯುರೋಪಿನಲ್ಲಿನ ಒಂದು ರಾಷ್ಟ್ರ. ಇದು ಬಾಲ್ಕನ್ ಪ್ರದೇಶದಲ್ಲಿದೆ. ಸೆರ್ಬಿಯದ ಉತ್ತರದಲ್ಲಿ ಹಂಗರಿ, ಪೂರ್ವದಲ್ಲಿ ರೊಮೇನಿಯ ಮತ್ತು ಬಲ್ಗೇರಿಯ, ದಕ್ಷಿಣದಲ್ಲಿ ಅಲ್ಬೇನಿಯ ಮತ್ತು ಮ್ಯಾಸೆಡೋನಿಯ, ಪಶ್ಚಿಮದಲ್ಲಿ ಕ್ರೊಯೇಶಿಯ, ಮಾಂಟೆನೆಗ್ರೊ ಹಾಗೂ ಬಾಸ್ನಿಯ ಮತ್ತು ಹೆರ್ಜೆಗೊವಿನ ದೇಶಗಳಿವೆ. ರಾಷ್ಟ್ರದ ರಾಜಧಾನಿ ಬೆಲ್ಗ್ರೇಡ್.