ಸೇಡಂ ಕರ್ನಾಟಕ ರಾಜ್ಯದ,ಕಲಬುರಗಿ ಜಿಲ್ಲೆಯ ಪುರಸಭೆ ಮತ್ತು ತಾಲ್ಲೂಕು ಕೇಂದ್ರವಾಗಿದೆ.ಇದು ಜಿಲ್ಲಾ ಕೇಂದ್ರದಿಂದ ೫೭ ಕಿ.ಮೀ ದೂರದಲ್ಲಿದೆ.ಇದು ರಾಷ್ಟ್ರಕೂಟರ ಆಳ್ವಿಕೆಗೆ ಒಳಪಟ್ಟಿತ್ತು. == ಜನಸಂಖ್ಯೆ == ೨೦೧೧ರ ಭಾರತದ ಜನಗಣತಿಯ ಪ್ರಕಾರ ಚಿತ್ತಾಪುರ 39341 ಜನಸಂಖ್ಯೆಯನ್ನು ಹೊಂದಿದ್ದು,19816 ಪುರುಷರು ಮತ್ತು 19525 ಮಹಿಳೆಯರು ಇದ್ದಾರೆ. == ಪ್ರಸಿದ್ಧ ಪ್ರವಾಸಿ ಸ್ಥಳಗಳು == ರಾಷ್ಟ್ರಕೂಟರ ರಾಜಧಾನಿ ಮಳಖೇಡ ಕೊತ್ತಲ್ ಬಸವೇಶ್ವರ ದೇವಸ್ಥಾನ ಪಂಚಲಿಂಗೇಶ್ವರ ಮಂದಿರ ಹಾಗೂ ಬಾಣಂತಿ ಕಂಬ ಮೋತಕಪಲ್ಲಿ ಬಲಭೀಮಸೇನ ದೇವಾಲಯ ಮಳಖೇಡ್‍ನ ಟೀಕಾಚಾರ್ಯರ ಮಠ ಮತ್ತು ಕೋಟೆ ಬಿಜನಳ್ಳಿಯಲ್ಲಿ ಮಹಾಶರಣ ಹರಳಯ್ಯ ಕಲ್ಯಾಣಮ್ಮನವರು ವಿಶ್ವ ಗುರು ಬಸವಣ್ಣನವರಿಗೆ ಒಪ್ಪಿಸಿರುವ ಚಮಾವುಗೆಗಳು ಇವೆ. ಅನುಭವ ಮಂಟಪ ನಿರ್ಮಿಸಲಾಗಿದೆ. ಹಂದರಕಿಯಯಲ್ಲಿ ರಾಷ್ಟ್ರಕೂಟರ ಅರಸ 6ನೆಯ ವಿಷ್ಣುವರ್ಧನನ ಕಾಲದ ಅಲ್ಲೂರಿನ ಮಂಡಲಿಕ ಪ್ರಭುಗಳಾದ ಲೋಕರಸ & ಆನರಸ ಎಂಬ ಅರಸರು ಲೋಕೇಶ್ವರ & ಆನೇಶ್ವರ ದೇವಾಲಯ ನಿರ್ಮಿಸಿದ್ದಾರೆ == ಕೃಷಿ == ಇಲ್ಲಿನ ಮುಖ್ಯ ಬೆಳೆಗಳು ಜೋಳ, ತೊಗರಿ, ನೆಲಗಡಲೆ,ಭತ್ತ,ಉದ್ದು,ಹೆಸರು ಕಾಳು, ಮತ್ತು ಬೇಳೆಗಳು. == ಆರ್ಥಿಕತೆ == ಸೇಡಂನಲ್ಲಿ ಮನೆ ನಿರ್ಮಾಣಕ್ಕೆ ಬಳಸಲಾಗುವ ಕಲ್ಲಿನ ಗಣಿಗಳಿವೆ.ಕಲ್ಲು ಕತ್ತರಿಸುವ ಮತ್ತು ಹೊಳಪು ಮಾಡುವ ಸಣ್ಣ ಪ್ರಮಾಣದ ಉದ್ದಿಮೆಗಳಿಂದ ಜನರಿಗೆ ಉದ್ಯೋಗ ದೊರೆಯುತ್ತದೆ.ಇಲ್ಲಿ ವಾಸವದತ್ತ,ರಾಜಶ್ರೀ,ಬಿರ್ಲಾ ಶಕ್ತಿ, ಅಲ್ಟ್ರಾಟೆಕ್ ನಂಥ ಕೆಲವು ಸಿಮೆಂಟ್ ಕೈಗಾರಿಕೆಗಳಿವೆ. == ಉಲ್ಲೇಖಗಳು == ಟೆಂಪ್ಲೇಟು:ಗುಲ್ಬರ್ಗಾಾ ವಿಷಯಗಳು ಟೆಂಪ್ಲೇಟು:ಗುಲ್ಬರ್ಗಾ ತಾಲ್ಲೂಕುಗಳು