ಸೇನಾವತಿ ಕರ್ನಾಟಕ ಸಂಗೀತಪದ್ಧತಿಯ ಮೇಳಕರ್ತ ರಾಗಗಳಲ್ಲಿ ಏಳನೆಯದು.ಮುತ್ತುಸ್ವಾಮಿ ದೀಕ್ಷಿತರು ಇದನ್ನು ಸೇನಾಗ್ರಣಿ ಎಂದು ಹೆಸರಿಸಿದ್ದಾರೆ. == ರಾಗ ಲಕ್ಷಣ ಮತ್ತು ಸ್ವರೂಪ == ಇದು ದ್ವಿತೀಯ "ನೇತ್ರ" ಚಕ್ರದ ಮೊದಲನೆಯ ರಾಗ.ಇದರ ಆರೋಹಣ ಮತ್ತು ಅವರೋಹಣದಲ್ಲಿ ಎಲ್ಲಾ ಶುದ್ಧ ಸ್ವರಗಳೂ ಇದ್ದು ಅವುಗಳು ಈ ಕೆಳಗಿನಂತಿವೆ. ಆರೋಹಣ ಸ ರಿ೧ ಗ೨ ಮ೦ ಪ ದ೧ ನಿ೧ ಸ ಅವರೋಹಣ ಸ ನಿ೧ ದ೧ ಪ ಮ೧ ಗ೨ ರಿ೧ ಸ ಇದು ಒಂದು ಸಂಪೂರ್ಣ ರಾಗವಾಗಿದೆ. == ಜನ್ಯ ರಾಗಗಳು == ಈ ರಾಗಕ್ಕೆ ಹಲವು ಜನ್ಯ ರಾಗಗಳಿದ್ದು ಹೆಚ್ಚು ಪ್ರಚಲಿತದಲ್ಲಿರುವ ಕೆಲವು ಭೋಗಿ,ಚಿತ್ತಾಕರ್ಷಿಣಿ,ನವರಸ ಮಾಲಾ ಮತ್ತು ಸಿಂಧು ಗೌರಿ. 1 ಸೇನಾಗ್ರಣಿ ಸ ರಿ೧ ಗ೨ ರಿ೧ ಮ೧ ಗ೨ ಮ೧ ಪ ನಿ೧ ದ೧ ಸ ಸ ನಿ೧ ದ೧ ಪ ಮ೧ ಗ೨ ಮ೧ ಗ೨ ರಿ೧ ಸ 2 ಭೋಗಿ .ಸ ಗ೨ ಮ೧ ಪ ದ೧ ನಿ೧ ದ೧ ಸ ಸ ನಿ೧ ದ೧ ಪ ಮ೧ ಗ೨ ಸ 3 ಚಿತ್ತಾಕರ್ಶಣಿ. ಸ ರಿ೧ ಗ೨ ಮ೧ ದ೧ ಸ ಸ ದ೧ ಮ೧ ಗ೨ ರಿ೧ ಸ 4 ನವರಸ ಮಾಲ. ಸ ರಿ೧ ಗ೨ ಮ೧ ಪ ದ೧ ಸ ಸ ನಿ೧ ದ೧ ಪ ಮ೧ ರಿ೧ ಸ 5 ಸಿಂಧು ಗೌರಿ. ಸ ರಿ೧ ಗ೨ ಮ೧ ಪ ದ೧ ನಿ೧ ಸ ಸ ನಿ೧ ದ೧ ಮ೧ ಗ೨ ಮ೧ ರಿ೧ ಸ == ಜನಪ್ರಿಯ ರಚನೆಗಳು == ಈ ರಾಗದಲ್ಲಿ ಪ್ರಚಲಿತದಲ್ಲಿರುವ ರಚನೆಗಳು ಜ್ಣಾನಾಂಬಿಕಾ ಪಾಲಯಮಾಮ್- ಮುತ್ತುಸ್ವಾಮೀ ದೀಕ್ಷಿತ ರು ಜಲಮೇಲ ರಘುಪತೇ - ಬಾಲಮುರಳಿ ಕೃಷ್ಣ ಹೆಚ್ಚಾಗಿ ಕಛೇರಿಗಳಲ್ಲಿ ಹಾಡಲ್ಪಡುತ್ತವೆ. == ಉಲ್ಲೇಖಗಳು == == ಬಾಹ್ಯ ಸಂಪರ್ಕಗಳು == ಯೂ ಟ್ಯೂಬ್ ನಲ್ಲಿ ಮೇಳಕರ್ತ ರಾಗಗಳು