ಸೊಮಾಲಿಯ (; الصومال - ಅಸ್-ಸೂಮಾಲ್), ಅಧಿಕೃತವಾಗಿ ಸೊಮಾಲಿ ಗಣರಾಜ್ಯ ( , جمهورية الصومال - ಜುಮ್ಹೂರಿಯ್ಯತ್ ಅಸ್-ಸೂಮಾಲ್), ಪೂರ್ವ ಆಫ್ರಿಕಾದ ಕೊಂಬು ಪ್ರದೇಶದಲ್ಲಿನ ಒಂದು ದೇಶ. ಇದರ ವಾಯುವ್ಯಕ್ಕೆ ದ್ಜಿಬೂಟಿ, ನೈರುತ್ಯಕ್ಕೆ ಕೀನ್ಯ ದೇಶಗಳು, ಉತ್ತರಕ್ಕೆ ಅಡೆನ್ ಕೊಲ್ಲಿ ಮತ್ತು ಯೆಮೆನ್, ಪಶ್ಚಿಮಕ್ಕೆ ಇಥಿಯೋಪಿಯ ಮತ್ತು ಪೂರ್ವಕ್ಕೆ ಹಿಂದೂ ಮಹಾಸಾಗರಗಳಿವೆ.