ಸೋನಾಕ್ಷಿ ಅವರು ಕನ್ನಡ ಚಲನಚಿತ್ರ ನಟಿ. ಇವರು ಕನ್ನಡ ಚಿತ್ರರಂಗದಲ್ಲಿ ಇದ್ದಿದ್ದು ಮೂರೇ ವರ್ಷವಾದರೂ ಇವರು ತಮ್ಮ ಕುಂತೀಪುತ್ರ ಮತ್ತು ಮೋಜುಗಾರ ಸೊಗಸುಗಾರ ಚಿತ್ರಗಳ ಅಭಿನಯದಿಂದ ಪ್ರೇಕ್ಷಕರ ಮನಗೆದ್ದರು. == ಸಿನಿಮಾ ಜೀವನ == ಸೋನಾಕ್ಷಿ ಅವರ ಮೊದಲ ಚಿತ್ರ ಕುಂತೀಪುತ್ರವನ್ನು ವಿಜಯ್ ಅವರು ನಿರ್ದೇಶಿಸಿದ್ದರು. ಇದರಲ್ಲಿ ಇವರು ಡಾ| ವಿಷ್ಣುವರ್ಧನ್ ಅವರೊಂದಿಗೆ ನಟಿಸಿದ್ದರು. ಇದರಲ್ಲಿ ಇವರ "ಈ ಪ್ರೇಮ ಮರೆಯದ ಮನಸಿನ ಸಂಗಮ" ಗೀತೆ ತುಂಬಾ ಪ್ರಸಿದ್ಧವಾಗಿತ್ತು. ವಿಷ್ಣುವರ್ಧನ್ ಮತ್ತು ಸೋನಾಕ್ಷಿ ಅವರ ಯಶಸ್ವಿ ಜೋಡಿ ಯಮಕಿಂಕರ, ಮೋಜುಗಾರ ಸೊಗಸುಗಾರ ಮತ್ತು ಹೆಲೋ ಡ್ಯಾಡಿ ಚಿತ್ರಗಳಲ್ಲಿ ಅಭಿನಯಿಸಿದರು. == ವಿಷ್ಣುವರ್ಧನ್ ನಾಯಕಿ == ಇವರ ನಾಲ್ಕೂ ಚಿತ್ರಗಳಲ್ಲಿ ವಿಷ್ಣುವರ್ಧನ್ ಅವರೇ ನಾಯಕರಾಗಿದ್ದರಿಂದ ಇವರಿಗೆ ವಿಷ್ಣುವರ್ಧನ್ ಅವರ ನಾಯಕಿ ಎಂದೇ ಜನ ಕರೆಯುತ್ತಿದ್ದರು. == ಸೋನಾಕ್ಷಿ ಅವರ ಅಭಿನಯದ ಚಲನಚಿತ್ರಗಳು == == ಉಲ್ಲೇಖಗಳು == == ಬಾಹ್ಯ ಕೊಂಡಿಗಳು ==