ಸೋಮೆಮರ ಮೀಲಿಯೇಸೀ ಕುಟುಂಬದ ಸೊಯಿಮಿಡಾ ಫೆಬ್ರಿಪ್ಯೂಗ ಪ್ರಭೇದದ ನೇರ ಕಾಂಡದ ಮರ. ಇದು ಭಾರತೀಯ ಉಪಖಂಡ ಮತ್ತು ಮ್ಯಾನ್ಮಾರ್‌ನಲ್ಲಿ ಕಂಡುಬರುತ್ತದೆ. == ಸಸ್ಯ ವಿವರಣೆ == ಎಲೆ 3 ರಿಂದ 6 ಉಪಪರ್ಣಗಳನ್ನೊಳಗೊಂಡ ಸಂಯುಕ್ತ ಮಾದರಿಯದು. ಬಂಜರು ಪ್ರದೇಶಗಳಲ್ಲಿಯೂ ಸುಣ್ಣಕಲ್ಲಿನ ಮಣ್ಣುಗಳಲ್ಲಿಯೂ ಜಂಬೆ ಮತ್ತು ಕರಲು ಮಣ್ಣಿನ ಜಾಗಗಳಲ್ಲಿಯೂ ಶುಷ್ಕತೆಯಿರುವ ಕಾಡುಗಳಲ್ಲಿಯೂ ಈ ಮರ ಬೆಳೆಯಬಲ್ಲದು. ಶುಷ್ಕತೆ ಮತ್ತು ಬೆಂಕಿಯ ಹಾನಿಯನ್ನು ತಕ್ಕಷ್ಟು ತಡೆಯಬಲ್ಲದು. ಸ್ವಾಭಾವಿಕ ಪುನರುತ್ಪತ್ತಿ ಅಲ್ಲಲ್ಲಿ ಕಂಡುಬಂದು, ಬೇರು ಸಸಿಗಳೂ ಸಾಮಾನ್ಯವಾಗಿರುತ್ತವೆ. == ಉಪಯೋಗಗಳು == ತೊಗಟೆಯಿಂದ ಅಂಟೂ ಕೆಂಪುನಾರೂ ಒದಗುವುವು. ತೊಗಟೆ ಚರ್ಮ ಹದ ಮಾಡಲೂ ಔಷಧಿಗೂ ಉಪಯುಕ್ತ. ಚೌಬೀನೆ ಮನೆಕಟ್ಟಡಗಳಿಗೆ, ಅಂದವಾದ ಪೀಠೋಪಕರಣಗಳಿಗೆ, ಕೆತ್ತನೆ ಕೆಲಸಗಳಿಗೆ, ಒನಕೆ ತಯಾರಿಕೆ ಇತ್ಯಾದಿಗಳಿಗೆ ಒದಗುತ್ತದೆ. == ಉಲ್ಲೇಖಗಳು ==