ಸೋಹಂ (सो ऽहम्) ಒಂದು ಹಿಂದೂ ಮಂತ್ರವಾಗಿದೆ. ಸಂಸ್ಕೃತದಲ್ಲಿ ಇದರರ್ಥ "ನಾನು ಅವನು/ಅದು" ಎಂದು. ವೈದಿಕ ತತ್ತ್ವಶಾಸ್ತ್ರದಲ್ಲಿ ಇದರರ್ಥ ತಮ್ಮನ್ನು ಬ್ರಹ್ಮಾಂಡ ಅಥವಾ ಪರಮ ವಾಸ್ತವದೊಂದಿಗೆ ಗುರುತಿಸಿಕೊಳ್ಳುವುದು. == ಇತಿಹಾಸ == ಈ ಪದಗುಚ್ಛವು ಪ್ರಧಾನ ಉಪನಿಷತ್ತುಗಳಲ್ಲಿ ಕಂಡುಬರುತ್ತದೆ, ಉದಾಹರಣೆಗೆ ಈಶಾವಾಸ್ಯೋಪನಿಷತ್‍ (ಶ್ಲೋಕ ೧೬) ಹೀಗೆ ಕೊನೆಗೊಳ್ಳುತ್ತದೆ: (...) तेजो यत्ते रूपं कल्याणतमं तत्ते पश्यामि योऽसावसौ पुरुषः सोऽहमस्मि ॥१६॥ ತೇಜೋ ಯತ್ ತೇ ರೂಪಂ ಕಲ್ಯಾಣತಮಂ ತತ್ ತೇ ಪಶ್ಯಾಮಿ ಯೋ 'ಸಾವ್ [ಅಸೌ ಪುರುಷಃ] ಸೋಹಂ ಅಸ್ಮಿ "ನಿನ್ನ ಅತ್ಯಂತ ಸುಂದರ ರೂಪವಾದದ್ದು ಬೆಳಕು, ನಾನು ಅದನ್ನು ಕಾಣುತ್ತಿದ್ದೇನೆ. ಅವನೇನೋ ಅದೇ ನಾನು" (ಆಂಗ್ಲದಿಂದ. ಮ್ಯಾಕ್ಸ್‌ ಮುಲ್ಲರ್) ಸೋಹಂ, ಅಥವಾ "ಅವನು ನಾನೇ", ಪ್ರಾಚೀನ ಹಾಗೂ ಮಧ್ಯಕಾಲೀನ ಸಾಹಿತ್ಯದಲ್ಲಿ ಬಹಳ ಸಾಮಾನ್ಯವಾಗಿದೆ. ಕೆಲವು ಉದಾಹರಣೆಗಳೆಂದರೆ: ಉಪನಿಷತ್‍ಗಳು ಸಂನ್ಯಾಸ ಉಪನಿಷತ್ತುಗಳು, ಉದಾ. ನಾರದಪರಿವ್ರಾಜಕ ಉಪನಿಷತ್ತು, ನಿರ್ವಾಣ ಉಪನಿಷತ್ತು, ಆಶ್ರಮ ಉಪನಿಷತ್ತು, ಮೈತ್ರೇಯ ಉಪನಿಷತ್ತು ಮತ್ತು ಸತ್ಯಾಯನೀಯ ಉಪನಿಷತ್ತು. ಯೋಗ ಉಪನಿಷತ್ತುಗಳು, ಉದಾ. ಧ್ಯಾನಬಿಂದು ಉಪನಿಷತ್ತು ಹಾಗೂ ಯೋಗಶಿಖಾ ಉಪನಿಷತ್ತು. ಹಂಸ ಉಪನಿಷತ್ತು == ಉಲ್ಲೇಖಗಳು ==