ಸೌರಕಲೆಗಳು ಸೂರ್ಯನ ಉಜ್ವಲ ದ್ಯುತಿಗೋಳದಲ್ಲಿ ( ) ತಾತ್ಕಾಲಿಕವಾಗಿ ನಡೆಯುವ ಒಂದು ವಿದ್ಯಮಾನ.ಇವುಗಳು ಆಗಾಗ ಒಂಟೊಂಟಿಯಾಗಿ ಅಥವಾ ಭಾರೀ ಗುಂಪು ಗುಂಪಾಗಿ ಚಿತ್ರ ವಿಚಿತ್ರ ಆಕಾರಗಳಲ್ಲಿ ಮೈದಳೆವ ಕಪ್ಪು ಮಚ್ಚೆಗಳು. == ಗುಣಲಕ್ಷಣಗಳು == ಸೌರಕಲೆಗಳದು ಕಲ್ಪನಾತೀತ ವಿಸ್ತಾರ. ಇವುಗಳ ವ್ಯಾಸ 16 ಕಿ.ಮೀ.ನಿಂದ 1.6 ಲಕ್ಷ ಕಿ.ಮೀ ಗಳವರೆಗಿರುತ್ತದೆ .ಕೆಲವನ್ನು ದೂರದರ್ಶಕದ ನೆರವಿಲ್ಲದೆ ನೋಡಬಹುದು . ಸೌರಕಲೆಗಳು ಸ್ಥಿರವೂ ಅಲ್ಲ, ಶಾಶ್ವತವೂ ಅಲ್ಲ. ಉದ್ಭವಿಸಿದ ನೆಲೆಗಳಿಂದ ಪ್ರತಿ ಸೆಕೆಂಡಿಗೆ ಕೆಲ ನೂರು ಮೀಟರ್‍ಗಳ ವೇಗದಲ್ಲಿ ಸೂರ್ಯನ ಮೇಲ್ಮೈಯಲ್ಲಿ ಚಲಿಸುತ್ತಾ ಸಾಗುತ್ತವೆ.ಕೆಲ ದಿನಗಳಿಂದ ಒಂದೆರಡು ತಿಂಗಳುಗಳ ಕಾಲ ಉಳಿದಿರುತ್ತವೆ.ನಂತರ ನಿಧಾನವಾಗಿ ಸಾಯುತ್ತವೆ. ಸೌರಕಲೆಗಳ ಗುಂಪು ಒಂದು ತುದಿಯಿಂದ ಮತ್ತೊಂದು ತುದಿಗೆ 3 ಲಕ್ಷ ಕಿ.ಮೀ.ಗೂ ಅಧಿಕ ಅಗಲ ಹರಡಿ ಮೂಡಿರುವ ದಾಖಲೆಗಳಿವೆ. ಸೌರಕಲೆಗಳು ವಾಸ್ತವವಾಗಿ ಕಪ್ಪು ಬಣ್ಣದವೇನಲ್ಲ.ಅವು ಸೂರ್ಯನ ಮೇಲ್ಮೈಯಲ್ಲಿ ತಾಪ ಕುಸಿದ ಪ್ರದೇಶಗಳು.ಸೂರ್ಯನ ಮೇಲ್ಮೈ ಸರಾಸರಿ ಉಷ್ಣತೆ 5,500 ° (5,780 ).ಆದರೆ ಕಲೆಗಳು ಮೂಡಿದ ಪ್ರದೇಶದ ಉಷ್ಣತೆ 2,700° ರಿಂದ 4,200 ° (3,000 ರಿಂದ 4,500 ). ಈ ತಾಪಾಂತರದಿಂದಾಗಿ ಸೌರಕಲೆಗಳು ಕಪ್ಪಾಗಿರುವಂತೆ ಕಾಣುತ್ತವೆ. == ಜೀವನ ಚಕ್ರ == ಸೌರಕಲೆಗಳ ಚಟುವಟಿಕೆಗಳ ಚಕ್ರವು ಪ್ರತಿ 11 ವರ್ಷಗಳಿಗೊಮ್ಮೆ ಪುನರಾವರ್ತನೆಗೊಳ್ಳುತ್ತದೆ. ಸೂರ್ಯನ ಕಾಂತಕ್ಷೇತ್ರದಲ್ಲಿ ಉಂಟಾಗುವ ಏಳುಬೀಳುಗಳು ಸೌರಕಲೆಗಳು ಮೈದಳೆಯಲು ಕಾರಣ. ಸೂರ್ಯನಲ್ಲಿ ನಿರಂತರ ಕ್ರಿಯಾಶೀಲವಾಗಿರುವ ಬಲಿಷ್ಠ ಕಾಂತೀಯ ಬಲ ರೇಖೆಗಳು ಕೆಲಬಾರಿ ಕೆಲವೆಡೆಗಳಲ್ಲಿ ಇದ್ದಕ್ಕಿದ್ದಂತೆ ಸೂರ್ಯನ ಮೇಲ್ಮೈಯಲ್ಲಿ ಕುದಿ ಕುದಿವ ಅನಿಲಗಳ ಚಲನೆಗೆ ಅಡ್ಡ ನಿಲ್ಲುತ್ತವೆ. ಹಾಗಾದಾಗ ಅಂತಹ ಪ್ರದೇಶಗಳಲ್ಲಿ ಉಷ್ಣತೆ ಕುಸಿಯುತ್ತದೆ.ಹೀಗಾಗಿ ಆ ಪ್ರದೇಶಗಳು ಕಪ್ಪಾದಂತೆ ಗೋಚರಿಸುತ್ತವೆ. ಆದರೆ ಹಾಗೆ ಉಕ್ಕುವ ಶಕ್ತಿಯ ಅಲೆಗಳನ್ನು ಒತ್ತಿ ಹಿಡಿದಿದ್ದ ಕಾಂತ ಕ್ಷೋಭೆ ಕೈ ಬಿಟ್ಟೊಡನೆ ಆ ವರೆಗೆ ಒತ್ತಡದಲ್ಲಿ ಉಳಿದಿದ್ದ ಶಕ್ತಿಯೆಲ್ಲ ಒಮ್ಮೆಗೇ ಸ್ಫೋಟಿಸಿ ಸೌರದ್ರವ್ಯವನ್ನು ಲಕ್ಷಾಂತರ ಕಿ.ಮಿ. ದೂರಕ್ಕೆ ಚಿಮ್ಮುತ್ತದೆ ಅತ್ಯಂತ ಉಗ್ರವಾದ ಸೌರಜ್ವಾಲೆ, ಕರೋನ(ಪ್ರಭಾವಲಯ)ದ ಮಾಸ್‌ ಇಜೆಕ್ಷನ್‌ ಗಳಂತಹ ವಿದ್ಯಮಾನಗಳನ್ನು ಸೃಜಿಸುತ್ತದೆ. ಪ್ರತಿ 11 ವರ್ಷಗಳಿಗೊಮ್ಮೆ ಗರಿಷ್ಠ ಸಂಖ್ಯೆಯಲ್ಲಿ ಒಡಮೂಡುವ ಸೌರ ಕಲೆಗಳಿಂದ ಅಂತಹ ಕಾಲಗಳಲ್ಲಿ ಭೂ ವಾಯುಮಂಡಲದಲ್ಲಿ, ಭೂ ಹವಾಮಾನದಲ್ಲಿ ಭಾರೀ ಏರುಪೇರುಗಳು ಸಂಭವಿಸುತ್ತವೆ. == ಸಂಪುಟಗಳು == === ಚಿತ್ರ ಸಂಪುಟ === === ವೀಡಿಯೋ ಸಂಪುಟ === == ಬಾಹ್ಯಕೊಂಡಿಗಳು == ಪ್ರಜಾವಾಣಿ - ಮುಕ್ತಛಂದ ದಿ.31.01.2016 ಭೂಮಿಯ ( / ) ಮತ್ತು ಉಪಗ್ರಹ ( / ) ಹೊಸ ದತ್ತಾಂಶ ಇಂದು 1872 ರಿಂದ ಅಭಿಪ್ರಾಯಗಳ ಆಧಾರದ ಸೌರಕಲೆ ದತ್ತಸಂಚಯ. () ಸೌರ ಚಕ್ರ 24 ಮತ್ತು ಅರೋರಾ ಜಾಲತಾಣ ಸೌರಕಲೆ ಸೂಚ್ಯಂಕ, ಬೆಲ್ಜಿಯಂ ವಿಶ್ವ ಡೇಟಾ ಸೆಂಟರ್ 2017-08-03 ವೇಬ್ಯಾಕ್ ಮೆಷಿನ್ ನಲ್ಲಿ. ಹೈ ರೆಸಲ್ಯೂಷನ್ ಸೌರಕಲೆ ಚಿತ್ರ ಹೈ ರೆಸಲ್ಯೂಷನ್ ಸೌರಕಲೆ ಚಿತ್ರ ಸಂಗ್ರಹ ಎನ್ಒಎಎ () ಸೌರ ಚಕ್ರದ ಪ್ರಗತಿ 2006-01-29 ವೇಬ್ಯಾಕ್ ಮೆಷಿನ್ ನಲ್ಲಿ.: ಪ್ರಸಕ್ತ ಸೌರ ಚಕ್ರ. ಪ್ರಸ್ತುತ ಪರಿಸ್ಥಿತಿಗಳು: ಬಾಹ್ಯಾಕಾಶ ವಾತಾವರಣ ಲಾಕ್ಹೀಡ್ ಮಾರ್ಟಿನ್ ಸೌರ ಮತ್ತು ಆಸ್ಟ್ರೋಫಿಸಿಕ್ಸ್ ಪ್ರಯೋಗಾಲಯ ಸೂರ್ಯ|ಚಲನೆ ಜಾಲತಾಣ: ಭೂಮಿಯ ಮೇಲೆ ಸೂರ್ಯ ಮತ್ತು ಅವನ ಪರಿಣಾಮದ ಬಗ್ಗೆ ಶಿಕ್ಷಕರು ಮತ್ತು ವಿದ್ಯಾರ್ಥಿಗಳಿಗಾಗಿ ಒಂದು ಶೈಕ್ಷಣಿಕ ಸಂಪನ್ಮೂಲ. ಬ್ರೌಸರ್‍ನಲ್ಲಿ(ವೀಕ್ಷಕ ತಂತ್ರಾಂಶ) ಪ್ರಸ್ತುತ ಸೌರಕಲೆ ಸಂಖ್ಯೆ ಪ್ರದರ್ಶಿಸಲು ಬೇಕಾದ ಪರಿಕರಗಳು. –ಬ್ರೌಸರ್ ಸ್ಟೇಟಸ್‍ ಬಾರ್‍ನಲ್ಲಿ ಪ್ರಸ್ತುತ ಸೌರಕಲೆ ಸಂಖ್ಯೆಯನ್ನು ತೋರಿಸುತ್ತದೆ – ಸೌರ ಹರಿವು, ಒಂದು ಟೂಲ್ಬಾರ್ ಸೂಚ್ಯಂಕ ಮತ್ತು ಸೂಚ್ಯಂಕ ದತ್ತಾಂಶವನ್ನು ತೋರಿಸುತ್ತದೆ ಸೂರ್ಯನ ತೀಕ್ಷ್ಣ ನೋಟ ದೈನಂದಿನ ಸೌರಕಲೆಗಳ ನೋಟ ಮತ್ತು ಸೂರ್ಯನ ಚಿತ್ರ ಸೌರಕಲೆಗಳ ಬಗ್ಗೆ ಅನಿಮೇಟೆಡ್ ವಿವರಣೆ 2015-11-16 ವೇಬ್ಯಾಕ್ ಮೆಷಿನ್ ನಲ್ಲಿ. (ಸೌತ್ ವೇಲ್ಸ್ ವಿಶ್ವವಿದ್ಯಾಲಯ) == ಸೌರಕಲೆ ದತ್ತಾಂಶ == "11,000 ವರ್ಷದ ಸೌರಕಲೆ ಸಂಖ್ಯೆ ಪುನರ್ನಿರ್ಮಾಣ". ಗ್ಲೋಬಲ್ ಚೇಂಜ್ ಮಾಸ್ಟರ್ ಡೈರೆಕ್ಟರಿ.2005 ಮಾರ್ಚ್ 11 ರಂದು ಮರುಸಂಪಾದಿಸಲಾಗಿದೆ. 2015-11-02. {{ }}: |= |-= (); |= |-= () "ಹಿಂದಿನ 11,000 ವರ್ಷಗಳಿಗೆ ಹೋಲಿಸಿದರೆ ಇತ್ತೀಚಿನ ದಶಕಗಳಲ್ಲಿ ಸೂರ್ಯನ ಅಸಾಮಾನ್ಯ ಚಟುವಟಿಕೆ". ಭೂಹವಾಗುಣ ಇತಿಹಾಸ ಶಾಸ್ತ್ರ .ಡಬ್ಲ್ಯೂಡಿಸಿ. 2005 ಮಾರ್ಚ್ 11 ರಂದು ಮರುಸಂಪಾದಿಸಲಾಗಿದೆ. "ಪ್ರಾಚೀನ ಕಾಲದಿಂದ ಇಲ್ಲಿಯವರೆಗಿನ ಸೌರಕಲೆ ಸಂಖ್ಯೆಗಳು - / ". ಜಾಗತಿಕ ಬದಲಾವಣೆ ಮಾಸ್ಟರ್ ಕೋಶ. ಮಾರ್ಚ್ 2005 11 ರಂದು ಮರುಸಂಪಾದಿಸಲಾಯಿತು. 2015-09-14. {{ }}: |= |-= (); |= |-= () "ಸೌರಕಲೆ ಸಂಖ್ಯೆಗಳು". ಸೌರ ದತ್ತಾಂಶ ಸೇವೆಗಳು. 2010 ರ ಜೂನ್ 21 ರಂದು ಮರುಸಂಪಾದಿಸಲಾಯಿತು. ಅಂತಾರಾಷ್ಟ್ರೀಯ ಸೌರಕಲೆ ಸಂಖ್ಯೆ- ಸೌರಕಲೆಗಳ ಗರಿಷ್ಠ ಮತ್ತು ಕನಿಷ್ಠ ಸಂಖ್ಯೆ ಕ್ರಿ.ಶ.1610-ಪ್ರಸ್ತುತ; ವಾರ್ಷಿಕ ಸಂಖ್ಯೆ ಕ್ರಿ.ಶ. 1700-ಪ್ರಸ್ತುತ; ಮಾಸಿಕ ಸಂಖ್ಯೆ ಕ್ರಿ.ಶ. 1749-ಪ್ರಸ್ತುತ; ದೈನಂದಿನ ಮೌಲ್ಯಗಳು ಕ್ರಿ.ಶ.1818-ಪ್ರಸ್ತುತ; ಮತ್ತು ಉತ್ತರ ಮತ್ತು ದಕ್ಷಿಣ ಗೋಳಾರ್ಧದಲ್ಲಿ ಸೌರಕಲೆ ಸಂಖ್ಯೆಗಳು. ಮೆಕ್‍ನಿಶ್-ಲಿಂಕನ್ ಸೌರಕಲೆ ಭವಿಷ್ಯವನ್ನೂ ಸಹ ಸೇರಿಸಲಾಗಿದೆ. ಅಮೆರಿಕನ್ ಸೌರಕಲೆ ಸಂಖ್ಯೆಗಳನ್ನು 1945 ರಿಂದ ಪ್ರಸ್ತುತ. ಪ್ರಾಚೀನ ಸೌರಕಲೆ ದತ್ತಾಂಶ ಕ್ರಿ.ಪೂ.165 ರಿಂದ ಕ್ರಿ.ಶ.1684 ಸೌರಕಲೆ ಗುಂಪಿನ ಸಂಖ್ಯೆಗಳು (ಡೌಗ್ ಹಾಯ್ಟ್ ಮರು ಮೌಲ್ಯಮಾಪನ) 1610-1995 ವಿಲ್ಸನ್, ರಾಬರ್ಟ್ . ( 2014). ಸೌರಕಲೆ ಸಂಖ್ಯೆಗಳ ಹೋಲಿಕೆ, ಸೌರಕಲೆ ಗುಂಪುಗಳು ಸಂಖ್ಯೆ, ಮತ್ತು ಸೌರಕಲೆ ಪ್ರದೇಶ 1875-2013 ರ ಪರಿವರ್ತನೆಗಳು. ಹಂಟ್ಸ್ವಿಲ್, : ನ್ಯಾಷನಲ್ ಏರೋನಾಟಿಕ್ಸ್ ಅಂಡ್ ಸ್ಪೇಸ್ ಅಡ್ಮಿನಿಸ್ಟ್ರೇಷನ್, ಮಾರ್ಷಲ್ ಸ್ಪೇಸ್ ಫ್ಲೈಟ್ ಸೆಂಟರ್. ಮಾರ್ಚ್ 2015 13 ರಂದು ಮರುಸಂಪಾದಿಸಲಾಗಿದೆ. == ಉಲ್ಲೇಖಗಳು ==