ಸೌಲ್ (ಕೇಳಿ ) ದಕ್ಷಿಣ ಕೊರಿಯಾ ದೇಶದ ರಾಜಧಾನಿ ಮತ್ತು ಅದರ ಅತ್ಯಂತ ದೊಡ್ಡ ಹಾಗು ಪ್ರಮುಖ ನಗರವಾಗಿದೆ. ೧೦ ದಶಲಕ್ಷಕ್ಕೂ ಹೆಚ್ಚು ಜನಸಂಖ್ಯೆ ಇರುವ ಸೌಲ್ ನಗರವು ವಿಶ್ವದ ಅತ್ಯಂತ ದೊಡ್ಡ ನಗರಗಳಲ್ಲಿ ಒಂದಾಗಿದೆ. ಇಂಚಿಯಾನ್ ಮತ್ತು ಗ್ಯಾಂಗಿ-ದೊ ಪ್ರದೇಶಗಳನ್ನು ಒಳಗೊಂಡಿರುವ ಸೌಲ್ ರಾಜಧಾನಿ ಪ್ರದೇಶವು ೨೩ ದಶಲಕ್ಷ ಜನರನ್ನು ಹೊಂದ್ದಿದು, ವಿಶ್ವದ ೨ನೆಯ ಅತ್ಯಂತ ದೊಡ್ಡ ಮಹಾನಗರ ಪ್ರದೇಶವಾಗಿದೆ. ದಕ್ಷಿಣ ಕೊರಿಯಾದ ಅರ್ಧದಷ್ಟು ಜನರು ಸೌಲ್ ರಾಜಧಾನಿ ಪ್ರದೇಶದಲ್ಲಿ ವಾಸಿಸುತ್ತಾರೆ. ಸೌಲ್ ನಗರವು ದಕ್ಷಿಣ ಕೊರಿಯಾದ ಮುಖ್ಯ ಆರ್ಥಿಕ, ರಾಜಕೀಯ ಮತ್ತು ಸಾಂಸ್ಕೃತಿಕ ಕೇಂದ್ರವಾಗಿದೆ. ಸೌಲ್ ನಗರವನ್ನು ವಿಶೇಷ ನಗರವೆಂದು ಪರಿಗಣಿಸಿ ಇದರ ಆಡಳಿತವನ್ನು ದಕ್ಷಿಣ ಕೊರಿಯಾದ ಕೇಂದ್ರ ಸರ್ಕಾರವೆ ನಡೆಸುತ್ತದೆ. == ಉಲ್ಲೇಖಗಳು == == ಹೊರಗಿನ ಸಂಪರ್ಕಗಳು == ಸೌಲ್ ಸರ್ಕಾರದ ಅಧಿಕೃತ ತಾಣ ಸೌಲ್ ನಗರ ಪ್ರವಾಸೋದ್ಯಮ ಇಲಾಖೆಯ ಮಾರ್ಗದರ್ಶಿ 2008-12-19 ವೇಬ್ಯಾಕ್ ಮೆಷಿನ್ ನಲ್ಲಿ. ವಿಕಿಟ್ರಾವೆಲ್‍ನಲ್ಲಿ ಸೌಲ್