ಸ್ಟೀರಾಯ್ಡ್ ಎಂದರೆ ಜೀವಿಗಳಲ್ಲಿರುವ ಅನೇಕ ಸಂಕೀರ್ಣ ಹೈಡ್ರೊಕಾರ್ಬನ್‍ಗಳ ಪೈಕಿ ಯಾವುದೇ ಒಂದು. ಇವೆಲ್ಲವೂ ಒಂದು ಜಾತಿಯ ರಾಸಾಯನಿಕಗಳು. ಇವುಗಳ ಮೂಲರಚನೆಯಲ್ಲಿ ಒಂದು ಚಕ್ರವಿದೆ. ಈ ಗುಂಪಿಗೆ 11 ಬಗೆಯವು ಸೇರಿವೆ. ಪ್ರೊಜೆಸ್ಟಿರಾನ್, ಅಡ್ರಿನಲ್ ಕಾರ್ಟಿಕಲ್ ಹಾರ್ಮೋನ್, ಜನನ ಗ್ರಂಥಿಗಳ ಹಾರ್ಮೋನ್, ಹೃದಯ ಗ್ಲೈಕೊಸೈಡ್, ಪಿತ್ತಾಮ್ಲ, ಕೊಲೆಸ್ಟಿರಾಲ್, ಕಪ್ಪೆ ವಿಷ, ಸ್ಯಾಪೊನಿನ್‌ಗಳು, ಕ್ಯಾನ್ಸರ್‌ಕಾರಕ ಹೈಡ್ರೊಕಾರ್ಬನ್, ಉಪಚಯಕ (ಅನಬಾಲಿಕ್) ಸ್ಟೀರಾಯ್ಡ್ ಮತ್ತು ಟೆಸ್ಟೊಸ್ಟಿರಾನ್.: 10–19 ಹಲವು ಬಗೆಯ ಕಾಯಿಲೆಗಳಲ್ಲಿ ಇವನ್ನು ಔಷಧಿಗಳಾಗಿ ಬಳಸುತ್ತಾರೆ. == ಉತ್ಪಾದನೆ == ಇದು ಮುಖ್ಯವಾಗಿ ಅಡ್ರಿನಲ್ ಮತ್ತು ಜನನ ಗ್ರಂಥಿಗಳಲ್ಲಿ ನಡೆಯುತ್ತದೆ. ಕೆಲವು ಸಸ್ಯಮೂಲ ರಾಸಾಯನಿಕಗಳನ್ನು ಪರಿವರ್ತಿಸಿ ಸ್ಟೀರಾಯ್ಡ್‌ಗಳನ್ನು ತಯಾರಿಸುವುದು ಸಾಧ್ಯವೆಂದು ಗೊತ್ತಾಗಿದೆ. ಇಂಥವುಗಳ ತಯಾರಿಕೆ ಕಡಿಮೆ ವೆಚ್ಚದಲ್ಲಿ ಸಾಧ್ಯ. == ಉಪಯೋಗಗಳು == ಅಲರ್ಜಿ, ಊತ, ಉರಿಯೂತ, ತ್ವಚೆಯ ಉರಿಯೂತ — ಇಂಥ ಅಸುಖಗಳ ನಿವಾರಣೆಗೂ, ಜನನ ನಿರೋಧಕಗಳಾಗಿ ಮತ್ತು ಹಾರ್ಮೋನ್ ಅಭಾವ ನಿವಾರಕಗಳಾಗಿಯೂ ಸ್ಟೀರಾಯ್ಡುಗಳ ಉಪಯೋಗ ಉಂಟು. ಕಾರ್ಟಿಸೋನ್, ಆಲ್ಡೊಸ್ಟಿರೋನ್, ಪ್ರೆಡ್ನಿಸೋನ್ ಮತ್ತು ಪ್ರೆಡ್ನಿಸಲೋನ್ ಪ್ರಮುಖ ಸ್ಟೀರಾಯ್ಡುಗಳು. ಈಚಿನ ದಿನಗಳಲ್ಲಿ ಸ್ಟೀರಾಯ್ಡುಗಳನ್ನು ಜೈವತಂತ್ರವಿದ್ಯಾವಿಧಾನದಿAದ ತಯಾರಿಸಲಾಗುತ್ತಿದೆ. == ಉಲ್ಲೇಖಗಳು == == ಗ್ರಂಥಸೂಚಿ ==