ಸ್ಪಂದನಾ ಕನ್ನಡ ಚಿತ್ರರಂಗದ ನಟಿ, ಇವರು ಸ್ಯಾಂಡಲ್ ವುಡ್ ನ ಖ್ಯಾತ ನಟ ವಿಜಯ್ ರಾಘವೇಂದ್ರ ಅವರ ಪತ್ನಿ. == ಜನನ == ಸ್ಪಂದನಾ ವಿಜಯ್ ರಾಘವೇಂದ್ರ ಅವರು ಭಾರತದ ಕರ್ನಾಟಕ ರಾಜ್ಯದ ಬೆಂಗಳೂರಿನಲ್ಲಿ ಜನಿಸಿದರು. ಅವರ ತಂದೆಯ ಹೆಸರು ಬಿ.ಕೆ.ಶಿವರಾಂ, ಸಹಾಯಕ ಪೊಲೀಸ್ ಆಯುಕ್ತರು, ಬೆಂಗಳೂರು == ಶಿಕ್ಷಣ == ತಮ್ಮ ಶಾಲಾ ಶಿಕ್ಷಣವನ್ನುಬೆಂಗಳೂರಿನ ಸ್ಟೆಲ್ಲಾ ಮಾರಿಸ್ ಹೈಸ್ಕೂಲ್‌ನಲ್ಲಿ ಪೂರ್ಣಗೊಳಿಸಿ,ನಂತರ ಕೇರಳದ ಎಂಇಎಸ್ ಕಾಲೇಜಿನಲ್ಲಿ ಪದವಿಯನ್ನು ಮುಗಿಸಿದರು. == ವೈಯಕ್ತಿಕ ಜೀವನ == ಸ್ಪಂದನಾ ಅವರು ಪ್ರಸಿದ್ಧಕನ್ನಡ ಚಲನಚಿತ್ರ ನಟ ವಿಜಯ ರಾಘವೇಂದ್ರ ಅವರನ್ನು 26 ಆಗಸ್ಟ್ 2007 ರಂದು ವಿವಾಹವಾದರು. ಈ ದಂಪತಿಗಳಿಗೆ ಶೌರ್ಯ ಎಂಬ ಮಗನಿದ್ದಾನೆ. == ನಟಿಯಾಗಿ == ಅವರು 2016 ರಲ್ಲಿ ವಿ.ರವಿಚಂದ್ರನ್ ನಿರ್ದೇಶನದ "ಅಪೂರ್ವ" ಎಂಬ ಕನ್ನಡ ಚಲನಚಿತ್ರದೊಂದಿಗೆ ತಮ್ಮ ನಟನೆಯನ್ನು ಪ್ರಾರಂಭಿಸಿದರು.ಅಷ್ಟೇಅಲ್ಲದೇ ಕಿಸ್ಮತ್ ಚಿತ್ರದಲ್ಲಿ ನಟಿಸಿದ್ದಾರೆ. == ಮರಣ == ಸ್ಪಂದನಾ ಅವರು 7 ಆಗಸ್ಟ್ 2023 ಬ್ಯಾಂಕಾಕ್‌ನ ಆಸ್ಪತ್ರೆಯಲ್ಲಿ ಹೃದಯ ಸ್ತಂಭನದಿಂದಾಗಿ ನಿಧನರಾದರು. == ಉಲ್ಲೇಖ ==