ಸ್ಲೊವಾಕಿಯ ಮಧ್ಯ ಯುರೋಪಿನ ಒಂದು ರಾಷ್ಟ್ರ. ಹಿಂದೆ ಜೆಕೊಸ್ಲೊವಾಕಿಯದ ಒಂದು ಭಾಗವಾಗಿದ್ದ ಸ್ಲೊವಾಕಿಯ, ೧೯೯೩ರಲ್ಲಿ ಜೆಕೊಸ್ಲೊವಾಕಿಯದ ವಿಸರ್ಜನೆಯಾದಾಗ ಸ್ವತಂತ್ರ ರಾಷ್ಟ್ರವಾಗಿ ಉದಯಿಸಿತು. ಸ್ಲೊವಾಕಿಯದ ಪಶ್ಚಿಮದಲ್ಲಿ ಜೆಕ್ ಗಣರಾಜ್ಯ ಮತ್ತು ಆಸ್ಟ್ರಿಯ, ಉತ್ತರಕ್ಕೆ ಪೋಲೆಂಡ್, ಪೂರ್ವದಲ್ಲಿ ಯುಕ್ರೇನ್ ಹಾಗೂ ದಕ್ಷಿಣದಲ್ಲಿ ಹಂಗರಿ ದೇಶಗಳಿವೆ. ಯುರೋಪಿಯನ್ ಒಕ್ಕೂಟದ ಸದಸ್ಯರಾಷ್ಟ್ರವಾಗಿರುವ ಸ್ಲೊವಾಕಿಯದ ರಾಜಧಾನಿ ಬ್ರಾಟಿಸ್ಲಾವಾ.