ಸ್ಲೊವೇನಿಯ (ಅಧಿಕೃತವಾಗಿ ಸ್ಲೊವೇನಿಯ ಗಣರಾಜ್ಯ) ಮಧ್ಯ ಯುರೋಪಿನ ದಕ್ಷಿಣ ಭಾಗದಲ್ಲಿರುವ ಒಂದು ರಾಷ್ಟ್ರ. ಸ್ಲೊವೇನಿಯದ ಪಶ್ಚಿಮಕ್ಕೆ ಇಟಲಿ, ಪೂರ್ವ ಮತ್ತು ದಕ್ಷಿಣದಲ್ಲಿ ಕ್ರೊವೆಶಿಯ, ಈಶಾನ್ಯಕ್ಕೆ ಹಂಗರಿ ಹಾಗೂ ಉತ್ತರದಲ್ಲಿ ಆಸ್ಟ್ರಿಯ ದೇಶಗಳಿವೆ. ನೈಋತ್ಯದಲ್ಲಿ ಏಡ್ರಿಯಾಟಿಕ್ ಸಮುದ್ರವಿದೆ. ರಾಷ್ಟ್ರದ ರಾಜಧಾನಿ ಲ್ಯೂಬ್ಲಿಯಾನ.