ಹಂಗರಿ (ಅಧಿಕೃತವಾಗಿ ಹಂಗರಿ ಗಣರಾಜ್ಯ) ಸ್ಥಳೀಯ ಭಾಷೆಯಲ್ಲಿ ಮಗ್ಯಾರ್ ಗಣರಾಜ್ಯವೆಂದು ಕರೆಯಲ್ಪಡುತ್ತದೆ. ಹಂಗರಿ ಮಧ್ಯ ಯುರೋಪಿನ ಒಂದು ರಾಷ್ಟ್ರ. ಹಂಗರಿಯನ್ನು ಎಲ್ಲಾ ದಿಕ್ಕುಗಳಲ್ಲಿಯೂ ಇತರ ರಾಷ್ಟ್ರಗಳು ಸುತ್ತುವರಿದಿವೆ. ಆಸ್ಟ್ರಿಯ, ಸ್ಲೊವಾಕಿಯ, ಉಕ್ರೈನ್, ರೊಮಾನಿಯ, ಸೆರ್ಬಿಯ, ಕ್ರೊಯೆಶಿಯ ಮತ್ತು ಸ್ಲೊವೇನಿಯ ದೇಶಗಳು ಹಂಗರಿಯೊಂದಿಗೆ ಭೂಗಡಿಗಳನ್ನು ಹೊಂದಿವೆ. ರಾಷ್ಟ್ರದ ರಾಜಧಾನಿ ಬುಡಾಪೆಸ್ಟ್. ನಾಡಿನ ಅಧಿಕೃತ ಭಾಷೆ ಹಂಗೇರಿಯನ್ ಅಥವಾ ಮಗ್ಯಾರ್.