ಹಂಸಲೇಖ (ಜನನ: ಜೂನ್ ೨೩, ೧೯೫೧) ಅವರು ಕನ್ನಡ ಚಿತ್ರರಂಗದ ಜನಪ್ರಿಯ ಸಂಗೀತ ನಿರ್ದೇಶಕರಲ್ಲಿ ಒಬ್ಬರು. ಇವರ ಮೂಲ ಹೆಸರು "ಗಂಗರಾಜು". ೧೯೭೩ ರಲ್ಲಿ "ತ್ರಿವೇಣಿ" ಚಿತ್ರದ "ನೀನಾ ಭಗವಂತ" ಹಾಡಿನ ಮೂಲಕ ಗೀತ ರಚನೆಕಾರರಾಗಿ ಚಿತ್ರರಂಗವನ್ನು ಪ್ರವೇಶಿಸಿದ ಇವರು ಇದುವರೆಗೆ ಸಂಗೀತ , ಸಾಹಿತ್ಯ ಒದಗಿಸಿರುವ ಚಿತ್ರಗಳು ಐನೂರಕ್ಕೂ ಹೆಚ್ಚು. ಕನ್ನಡ ಮಾತ್ರವಲ್ಲದೆ ತಮಿಳು, ತೆಲುಗು, ಮಲೆಯಾಳಂ ಭಾಷಾ ಚಿತ್ರಗಳಿಗೂ ಸಂಗೀತ ನೀಡಿದ್ದಾರೆ. === ಹಂಸಲೇಖ ಅವರ "ವಿಶ್ವರಂಗಭೂಮಿ" ಪರಿಕಲ್ಪನೆ. === ಹಂಸಲೇಖ ಅವರ "ವಿಶ್ವರಂಗಭೂಮಿ " ಪರಿಕಲ್ಪನೆ ಕನಸನ್ನು ಸಾಕಾರಗೊಳಿಸುವ ನಿಟ್ಟಿನಲ್ಲಿ ಚನ್ನಪಟ್ಟಣದ ಬಳಿ ನರಸಿಂಹ ಸ್ವಾಮಿ ದೇವರ ಗುಡ್ಡದ ತಪ್ಪಲಲ್ಲಿ ವಸತಿ ಮತ್ತು ವಿದ್ಯಾಲಯ ನಿರ್ಮಾಣ ಸಾಗಿದೆ. ಇನ್ನು ಎರಡು ವರ್ಷದಲ್ಲಿ ಒಂದೂವರೆ ಸಾವಿರ ವಿದ್ಯಾರ್ಥಿಗಳು ಕಲೆ-ಶಿಕ್ಷಣದಲ್ಲಿ ತೊಡಗಿಸಿಕೊಳ್ಳುವ ಕನಸಿದೆ. ಆ ವಿದ್ಯಾರ್ಥಿಗಳು ಸೃಷ್ಟಿಸಲಿರುವ ಬೃಹತ್ ದೇಸಿ ಸೊಗಡಿನ ನೃತ್ಯ ರೂಪಕಗಳು ಅಲ್ಲಿ ಪ್ರದರ್ಶಿಸಲ್ಪಡುತ್ತವೆ. ಮೈಸೂರನ್ನು ನೋಡ ಬಯಸುವ ಪ್ರವಾಸಿಗರಿಗೆ ನಡುವಿನಲ್ಲಿಯೇ ಒಂದು ಸಾಂಸ್ಕೃತಿಕ ಲೋಕದ ದರ್ಶನವನ್ನು ಹಂಸಲೇಖ ಅವರ "ವಿಶ್ವರಂಗಭೂಮಿ" ನೀಡಲಿದೆ. == ಸಂಗೀತದ ಪರಿವಿಡಿ - ಡಿಸ್ಕೊಗ್ರಾಫಿ == (ಸೂಚನೆ: ಈ ಪಟ್ಟಿಯ ಬಹುತೇಕ ಚಿತ್ರಗಳಿಗೆ ಅವರದೇ ಸಾಹಿತ್ಯ ಕೂಡ ಆಗಿರುತ್ತದೆ) ನಾನು ನನ್ನ ಕನಸು ಅಪ್ಪು ಮತ್ತು ಪಪ್ಪು ರಾಜಾಹುಲಿ ಸಕುತ್ಲೆ ಕದ್ದು ಮುಚ್ಚಿ 2018 ಮದಕರಿ ನಾಯಕ 2018 === ಕಥೆ === ೧೯೮೯ ಅವನೇ ನನ್ನ ಗಂಡ ೧೯೯೩ ಗಂಧರ್ವ ೧೯೯೪ ನನ್ನ ತಂಗಿ ೨೦೦೧ ಶಾಪ === ಚಿತ್ರಕಥೆ === ಅವನೇ ನನ್ನ ಗಂಡ ಗಂಧರ್ವ === ಸಂಭಾಷಣೆ === ಪ್ರೇಮಲೋಕ ರಣಧೀರ ಯುಗಪುರುಷ ಅವನೇ ನನ್ನ ಗಂಡ ಹಳ್ಳಿಮೇಷ್ಟ್ರು ಗಂಧರ್ವ === ಹಿನ್ನೆಲೆ ಗಾಯಕ === == ಪ್ರಶಸ್ತಿ/ಪುರಸ್ಕಾರಗಳು == ===== ಅತ್ಯುತ್ತಮ ಸಂಗೀತ ನಿರ್ದೇಶಕ - ರಾಷ್ಟ್ರಪ್ರಶಸ್ತಿ ===== ===== ಅತ್ಯುತ್ತಮ ಸಂಗೀತ ನಿರ್ದೇಶಕ - ರಾಜ್ಯಪ್ರಶಸ್ತಿ ===== ೧೯೯೪ - ಹಾಲುಂಡ ತವರು ೧೯೯೫ - ಗಾನಯೋಗಿ ಪಂಚಾಕ್ಷರ ಗವಾಯಿ ===== ಅತ್ಯುತ್ತಮ ಸಾಹಿತ್ಯ - ರಾಜ್ಯಪ್ರಶಸ್ತಿ ===== 1994 - ಹಾಲುಂಡ ತವರು ೨೦೦೧ - ಶ್ರೀ ಮಂಜುನಾಥ ===== ಫಿಲ್ಮ್‍ಫೇರ್ ಪ್ರಶಸ್ತಿ ===== ೧೯೯೨ - ರಾಮಾಚಾರಿ ೧೯೯೫ - ಓಂ ೨೦೦೫ - ನೆನಪಿರಲಿ === ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ === ೨೦೦೬ - ಕರ್ನಾಟಕ ಸರಕಾರದ ಸುವರ್ಣ ರಾಜ್ಯೋತ್ಸವ ಪ್ರಶಸ್ತಿ. == ಇತರ ಪ್ರಶಸ್ತಿಗಳು == ೨೦೦೬ - ಕೆಂಪೇಗೌಡ ಪ್ರಶಸ್ತಿ ಉದಯ ಟಿವಿಯ -ಅತ್ಯುತ್ತಮ ಗೀತರಚನೆ - ಚಿತ್ರ:ನೆನಪಿರಲಿ == ವಿವಾದಗಳು == ಹಂಸಲೇಖ ಅವರು ಕೀರ್ತಿಶೇಷ ಪೇಜಾವರ ಶ್ರೀಗಳು ದಲಿತರ ಉದ್ಧಾರಕ್ಕೆ ಕೆಲಸ ಮಾಡಿದ್ದು ಕೇವಲ ಬೂಟಾಟಿಕೆ ಎಂದು ಹೇಳಿಕೆ ನೀಡಿ ವಿವಾದ ಸೃಷ್ಟಿಸಿದ್ದಾರೆ. ನಂತರ ಆ ಬಗ್ಗೆ ಕ್ಷಮೆ ಕೇಳಿದ್ದಾರೆ. == ಉಲ್ಲೇಖಗಳು ==