ಹಠವಾದಿ - ೨೪ ಮಾರ್ಚಿ ೨೦೦೬ ರಂದು ಬಿಡುಗಡೆಯಾದ ಕನ್ನಡ ಚಲನಚಿತ್ರ. ವಿ. ರವಿಚಂದ್ರನ್ ನಾಯಕತ್ವದ ಈ ಚಿತ್ರದಲ್ಲಿ ರಾಧಿಕಾ ಅವರು ದ್ವಿಪಾತ್ರದಲ್ಲಿ ಅಭಿನಯಿಸಿದ್ದಾರೆ. ಈ ಚಿತ್ರದ ವೈಶಿಷ್ಟ್ಯವೆಂದರೆ, ನಾಯಕ ನಟನಾಗಿ ಅಭಿನಯಿಸುವುದರ ಜೊತೆಗೆ ರವಿಚಂದ್ರನ್ ಅವರು ಕಥೆ, ಚಿತ್ರಕಥೆ, ಸಂಭಾಷಣೆ, ಸಂಗೀತ, ಸಾಹಿತ್ಯ, ಸಂಕಲನ, ನಿರ್ದೇಶನದ ಜವಾಬ್ದಾರಿಗಳನ್ನು ಹೊತ್ತಿದ್ದಾರೆ. 'ಯಾರು ಯಾರು' ಎಂಬ ಗೀತೆಗೆ ಶ್ರೀ ಚಂದ್ರು ಅವರು ಸಾಹಿತ್ಯ ಒದಗಿಸಿದ್ದಾರೆ.