ಹರನಾಳ ಗ್ರಾಮವು ಕರ್ನಾಟಕ ರಾಜ್ಯದ ವಿಜಯಪುರ ಜಿಲ್ಲೆಯ ದೇವರ ಹಿಪ್ಪರಗಿ ತಾಲ್ಲೂಕಿನಲ್ಲಿದೆ. == ಭೌಗೋಳಿಕ == ಗ್ರಾಮವು ಭೌಗೋಳಿಕವಾಗಿ 16* 32' 10" ಉತ್ತರ ಅಕ್ಷಾಂಶ ಮತ್ತು 75* 31' 19" ಪೂರ್ವ ರೇಖಾಂಶದಲ್ಲಿ ಬರುತ್ತದೆ. == ಜನಸಂಖ್ಯೆ == ಗ್ರಾಮದಲ್ಲಿ ಜನಸಂಖ್ಯೆ ಸುಮಾರು 2500 ಇದೆ. ಅದರಲ್ಲಿ 1300 ಪುರುಷರು ಮತ್ತು 1200 ಮಹಿಳೆಯರು ಇದ್ದಾರೆ. == ಹವಾಮಾನ == ಬೇಸಿಗೆಕಾಲ - ಚಳಿಗಾಲದಲ್ಲಿ ಹವಾಗುಣವು ಹಿತಕರವಾಗಿದ್ದು, ಸಾಧಾರಣ ಪ್ರಮಾಣದ ಮಳೆಯಾಗುತ್ತದೆ. ಬೇಸಿಗೆಯಲ್ಲಿ ಅತಿ ಹೆಚ್ಚು ಉಷ್ಣತೆ ಅಂದರೆ 42° ವರೆಗೆ(ಎಪ್ರೀಲನಲ್ಲಿ), ಅತೀ ಕಡಿಮೆ ಅಂದರೆ 9° ಸೆಲ್ಸಿಯಸವರೆಗೆ (ಡಿಸೆಂಬರನಲ್ಲಿ) ಉಷ್ಣತೆ ದಾಖಲಾಗಿದೆ. ಬೇಸಿಗೆಕಾಲ - 35° - 42° ಮಳೆಗಾಲ - 18° - 32° ಚಳಿಗಾಲ - 15° - 28° ಮಳೆ - ಪ್ರತಿ ವರ್ಷ 300 - 600ಮಿಮಿ ಗಳಸ್ಟು ಆಗಿತ್ತದೆ == ಆಹಾರ == ಪ್ರಮುಖ ಆಹಾರ ಧಾನ್ಯ ಜೋಳ. ಜೊತೆಗೆ ಗೋಧಿ, ಅಕ್ಕಿ,ಮೆಕ್ಕೆ ಜೋಳ ಬೇಳೆಕಾಳುಗಳು. ಜವಾರಿ ಎಂದು ಗುರುತಿಸಲ್ಪಡುವ ವಿಶೇಷ ರುಚಿಯ ಕಾಯಿಪಲ್ಯ, ಸೊಪ್ಪುಗಳು ಹೆಸರುವಾಸಿ ಮತ್ತು ಸದಾಕಾಲವೂ ಲಭ್ಯ. ಜೋಳದ ರೊಟ್ಟಿ, ಸೇಂಗಾ ಚಟ್ನಿ, ಎಣ್ಣಿ ಬದನೆಯಕಾಯಿ ಪಲ್ಯ, ಕೆನೆಮೊಸರು ಕರ್ನಾಟಕದ ಮೂಲೆಮೂಲೆಗಳಲ್ಲಿ ಪ್ರಸಿದ್ಧಿ ಪಡೆದಿವೆ. == ಸಂಸ್ಕೃತಿ == ಅಪ್ಪಟ ಉತ್ತರ ಕರ್ನಾಟಕ ಶೈಲಿಯ ಕಲೆಯನ್ನು ಒಳಗೊಂಡಿದೆ. ಪುರುಷರು ದೋತ್ರ, ನೆಹರು ಅಂಗಿ ಮತ್ತು ಗಾಂಧಿ ಟೋಪಿ ಅಥವಾ ಬಿಳಿ/ರೇಷ್ಮೆ ರುಮಾಲು(ಪಟಕ) ಧರಿಸುತ್ತಾರೆ. ಮಹಿಳೆಯರು ಇಲಕಲ್ಲ ಸೀರೆಯನ್ನು ಧರಿಸುತ್ತಾರೆ. == ಕಲೆ == ಲಾವಣಿ ಪದ, ಡೊಳ್ಳಿನ ಪದ, ಗೀಗೀ ಪದ, ಹಂತಿ ಪದ, ಜಾನಪದ, ಡೊಳ್ಳು ಕುಣಿತ, ಕರಡಿ ಮಜಲು, ಮೊಹರಮ ಹೆಜ್ಜೆ ಕುಣಿತ, ಹರಿ ಭಜನೆ ಮತ್ತು ಶಿವ ಭಜನೆ ಇತ್ಯಾದಿ ಗ್ರಾಮದ ಕಲೆಯಾಗಿದೆ. == ಧರ್ಮ == ಗ್ರಾಮದಲ್ಲಿ ಹಿಂದೂ ಮತ್ತು ಮುಸ್ಲಿಂ ಧರ್ಮದ ಜನರಿದ್ದಾರೆ. == ಭಾಷೆ == ಮುಖ್ಯ ಭಾಷೆ ಕನ್ನಡ. ಆದರೆ ವಿವಿಧ ಸಂಸ್ಕೃತಿಗಳ ಪ್ರಭಾವದಿಂದಾಗಿ ಉರ್ದು, ಮರಾಠಿ ಮತ್ತು ಹಿಂದಿ ಮಿಶ್ರಿತ ವಿಶಿಷ್ಠವಾದ ಕನ್ನಡ. == ದೇವಾಲಯ == ಹರನಾಳ ಗ್ರಾಮದವರ ಬಹುಮುಖ್ಯ ಆರಾಧ್ಯ ದೇವರು ಶ್ರೀ ಪರಮಾನಂದ ಶಿವಯೋಗಿಗಳು.ಊರಿನ ಹೃದಯ ಭಾಗದಲ್ಲಿ ಹಾಗೂ ಊರಿನಿಂದ ಸುಮಾರು ೨ ಕಿ.ಮಿ. ದೂರದಲ್ಲಿ ಒಟ್ಟು ಎರಡು ಶ್ರೀ_ಪರಮಾನಂದ ಶಿವಯೋಗಿಗಳ ದೇವಾಲಯಗಳಿವೆ. ಪ್ರತಿ ಸೋಮವಾರ ಮತ್ತು ಅಮಾವಾಸ್ಯೆಯಂದು ಹಾಗೂ ಹುಣ್ಣಿಮೆ ದಿನ ನೂರಾರು ಜನ ಭಕ್ತರು ದೇವಾಲಯಕ್ಕೆ ಬರುವುದರಿಂದ ಹರನಾಳ ಗ್ರಾಮವು ಸುಕ್ಷೇತ್ರವಾಗಿ ಗುರುತಿಸಲ್ಪಡುತ್ತದೆ. ಶ್ರಾವಣ ಮಾಸದಲ್ಲಿ ಇಲ್ಲಿ ಜರುಗುವ ವಿಜೃಂಭಣೆಯ ಜಾತ್ರೆಯು ಪ್ರಸಿದ್ಧವಾಗಿದ್ದು, ಪ್ರತಿ ವರ್ಷ ಜಾತ್ರೆಗೆ ಕನ್ನೊಳ್ಳಿಯ ಆರಾಧ್ಯ ದೇವರು ಶ್ರೀ ಭಾಗ್ಯವಂತಿ (ಲಕ್ಷ್ಮೀ) ದೇವತೆ ಶ್ರೀ ಪರಮಾನಂದ ಶಿವಯೋಗಿಗಳ ಜಾತ್ರಾ ಮಹೋತ್ಸವಕ್ಕೆ ಪಲ್ಲಕ್ಕಿಯಲ್ಲಿ ಮೆರವಣಿಗೆಯೊಂದಿಗೆ ಹಲವಾರು ಭಕ್ತರೊಂದಿಗೆ ಬರುತ್ತಾರೆ. ಕನ್ನೊಳ್ಳಿಯ ಆರಾಧ್ಯ ದೇವರು ಶ್ರೀ ಭಾಗ್ಯವಂತಿ (ಲಕ್ಷ್ಮೀ) ದೇವತೆ ಹಾಗೂ ಹರನಾಳ ಗ್ರಾಮದವರ ಬಹುಮುಖ್ಯ ಆರಾಧ್ಯ ದೇವರು ಶ್ರೀ ಪರಮಾನಂದ ಶಿವಯೋಗಿಗಳು ಅಣ್ಣ ತಂಗಿಯಂತೆ .ಆ ಉದ್ದೇಶದಿಂದ ಪ್ರತಿ ವರ್ಷ ನಡೆಯುವ ಜಾತ್ರೆಗೆ ಎರಡು ಪಲ್ಲಕ್ಕಿಗಳು ಒಂದಾಗುತ್ತವೆ. ಶ್ರೀ ಮಹಾಲಕ್ಷ್ಮಿ ದೇವಾಲಯ ಶ್ರೀ ದುರ್ಗಾದೇವಿ ದೇವಾಲಯ ಶ್ರೀ ಮಲ್ಲಿಕಾರ್ಜುನ ದೇವಾಲಯ ಶ್ರೀ ಬಸವೇಶ್ವರ ದೇವಾಲಯ ಶ್ರೀ ಹಣಮಂತ ದೇವಾಲಯ ಊರಿನಲ್ಲಿ ಪ್ರಮುಖವಾಗಿ ಎರಡು ಮಠಗಳಿದ್ದು, ಅದರಲ್ಲಿ ಒಂದು ಪಂಚಾಚಾರ್ಯರ ಪೀಠವಿದ್ದು,ಅದು ಪಂಚಗ್ರಹ ಹಿರೇಮಠ ಎಂದು ಕರೆಯಲಾಗುತ್ತದೆ. ಇದು ರಂಭಾಪುರಿ ಪೀಠದ ಸಂಸ್ಥಾನ ಮಠಗಳಲ್ಲಿ ಒಂದಾಗಿದೆ.ಈ ಪೀಠವು ಇಬ್ಬರು ಸ್ವಾಮೀಜಿಗಳನ್ನು ಕಂಡಿದೆ.ಪ್ರಥಮದಲ್ಲಿ ಪಂಚಗ್ರಹ ಹಿರೇಮಠದ ಪೀಠಾಧಿಪತಿಗಳಾಗಿ ಲಿಂ.ಶ್ರೀ ಸಿದ್ಧರಾಮ (ಚಿದಾನಂದ) ಶಿವಾಚಾರ್ಯರು ಹಾಗೂ ಎರಡನೇ ಪೀಠಾಧಿಪತಿಗಳಾಗಿ ಲಿಂ.ಶ್ರೀ ಅಭಿನವ ಸಿದ್ಧರಾಮ ಶಿವಾಚಾರ್ಯರು. ತಮ್ಮ ವಾಕ್ ಚಾತುರ್ಯದಿಂದ ಇಬ್ಬರು ಪೀಠಾಧಿಪತಿಗಳು ನಾಲ್ಕಾರು ರಾಜ್ಯಗಳಲ್ಲಿ ಪುರಾಣ ಪ್ರಸಿದ್ಧರು ಎಂದು ಬಿರುದಾಂಕಿತರಾಗಿದ್ದರು. ಲಿಂ.ಶ್ರೀ ಅಭಿನವ ಸಿದ್ಧರಾಮ ಶಿವಾಚಾರ್ಯರು ದಿನಾಂಕ: 21/01/2014 ರ ಮಂಗಳವಾರ ಲಿಂಗೈಕ್ಯರಾದರು.ಇವರ ಅಂತ್ಯ ಸಂಸ್ಕಾರದ ಧಾರ್ಮಿಕ ವಿಧಿವಿಧಾನ ಕಾರ್ಯಕ್ರಮಕ್ಕೆ ಪಂಚಪೀಠಗಳ ಜಗದ್ಗುರುಗಳು ಹಾಜರಿದ್ದರು ಎಂಬುದು ಸ್ಮರಣೀಯ.. ಊರಿನ ಇನ್ನೊಂದು ಪ್ರಮುಖ ಮಠವೆಂದರೆ ಅದು ಸಿದ್ದಲಿಂಗ ಮಹಾರಾಜರ ಮಠ.ಇದು ಬಂಥನಾಳ ಶಿವಯೋಗಿಗಳಾದ ಶ್ರೀ ವೃಷಭಲಿಂಗ ಸ್ವಾಮೀಜಿಯವರ ಸಾನಿಧ್ಯದಲ್ಲಿ ಮುನ್ನಡೆಯುತ್ತಿದೆ. == ಮಸೀದಿ == ಗ್ರಾಮದಲ್ಲಿ ಮುಸ್ಲಿಂ ಸಮುದಾಯದ ದರ್ಗಾ ಹಾಗೂ ಮಸೀದಿ ಇದೆ. == ಹಬ್ಬ == ಪ್ರತಿವರ್ಷ ಕಾರ ಹುಣ್ಣುಮೆ, ಯುಗಾದಿ, ದಸರಾ, ದೀಪಾವಳಿ, ನಾಗರ ಪಂಚಮಿ ಹಾಗೂ ಮೊಹರಮ್ ಹಬ್ಬಗಳನ್ನು ಆಚರಿಸುತ್ತಾರೆ. == ಕೃಷಿ == ಗ್ರಾಮದ ಪ್ರಮುಖ ಉದ್ಯೋಗವೇ ಕೃಷಿ ಮತ್ತು ತೋಟಗಾರಿಕೆಯಾಗಿದೆ. ಈ ಕ್ಷೇತ್ರದಲ್ಲಿ ಸುಮಾರು 75% ಜನರು ಕೆಲಸ ಮಾಡುತ್ತಾರೆ. == ನೀರಾವರಿ == ಗ್ರಾಮದಲ್ಲಿ ಬಹುಭಾಗ ಭೂಮಿ ಕಾಲುವೆ, ತೆರದ ಬಾವಿ, ಕೊಳವೆ ಬಾವಿಯಿಂದ ನೀರಾವರಿ ಇದ್ದು ಪ್ರಮುಖವಾಗಿ ಕಬ್ಬು, ಮೆಕ್ಕೆಜೋಳ, ಜೋಳ, ಉಳ್ಳಾಗಡ್ಡಿ(ಈರುಳ್ಳಿ), ನಿಂಬೆಹಣ್ಣು , ಪಪ್ಪಾಯ, ಅರಿಶಿನ, ನೆಲಕಡಲೆ, ಶೇಂಗಾ(ಕಡಲೆಕಾಯಿ), ಸೂರ್ಯಕಾಂತಿ, ದ್ರಾಕ್ಷಿ, ದಾಳಿಂಬೆ, ಗೋಧಿ ಹಾಗೂ ಇತರೆ ಬೆಳೆಗಳನ್ನು ಬೆಳೆಯುತ್ತಾರೆ. == ಉದ್ಯೋಗ == ಗ್ರಾಮದಲ್ಲಿ ಫಲವತ್ತಾದ ಭೂಮಿ ಇದುವುದರಿಂದ 70% ಜನಸಂಖ್ಯೆ ಕೃಷಿಯಲ್ಲಿ ನಿರತರಾಗಿದ್ದಾರೆ. ಕೃಷಿಯು ಗ್ರಾಮದ ಪ್ರಮುಖ ಉದ್ಯೋಗವಾಗಿದೆ. ಇದರೊಂದಿಗೆ ಹೈನುಗಾರಿಕೆ, ಕೋಳಿ ಸಾಕಾಣಿಕೆ, ಆಡು(ಮೇಕೆ) ಸಾಕಾಣಿಕೆ ಮತ್ತು ಕುರಿ ಸಾಕಾಣಿಕೆ ಉಪಕಸುಬುಗಳಾಗಿವೆ. == ಬೆಳೆ == ಆಹಾರ ಬೆಳೆಗಳು ಜೋಳ, ಗೋಧಿ, ಮೆಕ್ಕೆಜೋಳ, ಸಜ್ಜೆ , ತೊಗರಿ, ಹೆಸರು ಮತ್ತು ಕಡಲೆ ಇತ್ಯಾದಿ ವಾಣಿಜ್ಯ ಬೆಳೆಗಳು ದ್ರಾಕ್ಷಿ, ಕಬ್ಬು, ದಾಳಿಂಬೆ, ನಿಂಬೆ, ಮಾವು, ಬಾಳೆ, ಸೂರ್ಯಕಾಂತಿ, ಅರಿಸಿಣ, ಪಪ್ಪಾಯಿ, ಕಲ್ಲಂಗಡಿ, ಉಳ್ಳಾಗಡ್ಡಿ (ಈರುಳ್ಳಿ) ಮತ್ತು ಶೇಂಗಾ(ಕಡಲೆಕಾಯಿ) ಇತ್ಯಾದಿ. ತರಕಾರಿ ಬೆಳೆಗಳು ಬದನೆಕಾಯಿ, ಟೊಮ್ಯಾಟೊ, ಹೀರೇಕಾಯಿ, ನುಗ್ಗೆಕಾಯಿ, ಗೆಣಸು, ಗಜ್ಜರಿ, ಮೆಣಸಿನಕಾಯಿ, ಸೌತೆಕಾಯಿ, ಮೊಲಂಗಿ, ಅವರೆಕಾಯಿ, ಪಡವಲಕಾಯಿ, ಕುಂಬಳಕಾಯಿ, ಮೆಂತೆ ಪಲ್ಲೆ ಮತ್ತು ಕೊತಂಬರಿ ಇತ್ಯಾದಿ. == ಸಸ್ಯ == ಆಲದ ಮರ, ಬೇವಿನ ಮರ, ಜಾಲಿ ಮರ, ಮಾವಿನ ಮರ ಮತ್ತು ಅರಳಿ ಮರ ಇತ್ಯಾದಿ. == ಪ್ರಾಣಿ == ತೋಳ, ನರಿ, ಹಾವು, ಮೊಲ, ನವಿಲು, ಬೆಳ್ಳಕ್ಕಿ, ಗುಬ್ಬಿ, ಕಾಗೆ ಮತ್ತು ಕೋಗಿಲೆ ಇತ್ಯಾದಿ. == ಆರ್ಥಿಕತೆ == ಗ್ರಾಮದ ಆರ್ಥಿಕ ಪರಿಸ್ಥಿತಿ ಮಧ್ಯಮ ತರಗತಿಯಲ್ಲಿದೆ. == ಶಿಕ್ಷಣ == ಗ್ರಾಮದಲ್ಲಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಇದೆ. == ಸಾಕ್ಷರತೆ == ಗ್ರಾಮದ ಸಾಕ್ಷರತೆಯ ಪ್ರಮಾಣ ಸುಮಾರು 75%. ಅದರಲ್ಲಿ 85% ಪುರುಷರು ಹಾಗೂ 68% ಮಹಿಳೆಯರು ಸಾಕ್ಷರತೆ ಹೊಂದಿದೆ. == ರಾಜಕೀಯ == ಗ್ರಾಮವು ವಿಜಯಪುರ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುತ್ತದೆ.