ಹರಿಕಾಂಭೋಜಿಕರ್ನಾಟಕ ಸಂಗೀತಪದ್ಧತಿಯ ಮೇಳಕರ್ತ ರಾಗಗಳಲ್ಲಿ ಇಪ್ಪತ್ತೆಂಟನೆಯದು.ಮುತ್ತುಸ್ವಾಮಿ ದೀಕ್ಷಿತರು ಇದನ್ನು ಹರಿಕೇದಾರ ಗೌಳ ಎಂದು ಹೆಸರಿಸಿದ್ದಾರೆ. ಹಿಂದೂಸ್ತಾನಿ ಸಂಗೀತ ಪದ್ಧತಿಯಲ್ಲಿ ಈ ರಾಗವು ಖಮಾಜ್ ಥಾಟ್‍ಗೆ ಸಮಾನವಾಗಿದೆ. == ರಾಗ ಲಕ್ಷಣ ಮತ್ತು ಸ್ವರೂಪ == ಇದು ಐದನೆಯ "ಬನ" ಚಕ್ರದ ನಾಲ್ಕನೆಯ ರಾಗ.ಇದರ ಆರೋಹಣ ಮತ್ತು ಅವರೋಹಣದಲ್ಲಿ ಎಲ್ಲಾ ಶುದ್ಧ ಸ್ವರಗಳೂ ಇದ್ದು ಅವುಗಳು ಈ ಕೆಳಗಿನಂತಿವೆ. ಆರೋಹಣ ಸ ರಿ೨ ಗ೩ ಮ೦ ಪ ದ೧ ನಿ೩ ಸ' ಅವರೋಹಣ ಸ' ನಿ೩ ದ೧ ಪ ಮ೧ ಗ೩ ರಿ೨ ಸ ಇದು ಒಂದು ಸಂಪೂರ್ಣ ರಾಗವಾಗಿದೆ. == ಜನ್ಯ ರಾಗಗಳು == ಈ ರಾಗಕ್ಕೆ ದೊಡ್ಡ ಪ್ರಮಾಣದಲ್ಲಿ ಜನ್ಯ ರಾಗಗಳಿದ್ದು,ಕಾಂಭೋಜಿ,ಕೆದಾರಗೌಳ,ಮೋಹನ,ಸಹನ,ಯದುಕುಲ ಕಾಂಭೋಜಿ ಮುಂತಾದವುಗಳು ಜನಪ್ರಿಯವಾಗಿವೆ. == ಜನಪ್ರಿಯ ರಚನೆಗಳು == ಈ ರಾಗದಲ್ಲಿ ಜನಪ್ರಿಯ ರಚನೆಗಳು == ಉಲ್ಲೇಖಗಳು == == ಬಾಹ್ಯ ಸಂಪರ್ಕಗಳು == ಯೂ ಟ್ಯೂಬ್‍ನಲ್ಲಿ ಚೆಂಬೈ ವೈದ್ಯನಾಥ ಭಾಗವತರಿಂದ ಹರಿಕಾಂಭೋಜಿ ರಾಗ ಗಾಯನ.