ಹರ್ನಾಯಿ ಭಾರತದ ಮಹಾರಾಷ್ಟ್ರ ರಾಜ್ಯದ ರತ್ನಾಗಿರಿ ಜಿಲ್ಲೆಯಲ್ಲಿರುವ ಒಂದು ಗ್ರಾಮ. == ಸುವರ್ಣದುರ್ಗ್ == ಸುವರ್ಣದುರ್ಗ್ ಕೊಂಕಣದ ಹರ್ನಾಯಿ ಬಳಿಯಲ್ಲಿರುವ ಅರೇಬಿಯನ್ ಸಮುದ್ರದ ಒಂದು ಸಣ್ಣ ದ್ವೀಪದಲ್ಲಿರುವ ಕೋಟೆ. ಸುವರ್ಣದುರ್ಗ್ ಕೋಟೆಯನ್ನು ೧೬ ನೇ ಶತಮಾನದಲ್ಲಿ ಚಕ್ರವರ್ತಿ ಆದಿಲ್‍ಷಾ ಆಳ್ವಿಕೆಯಲ್ಲಿ ನಿರ್ಮಿಸಲಾಯಿತು. ೧೬೬೦ ರಲ್ಲಿ, ಶಿವಾಜಿ ಮಹಾರಾಜನು ಎರಡನೆಯ ಆದಿಲ್‍ಷಾನನ್ನು ಸೋಲಿಸಿ ಈ ಕೋಟೆಯನ್ನು ಮರಾಠಾ ಸಾಮ್ರಾಜ್ಯಕ್ಕೆ ಸೇರಿಸಿಕೊಂಡನು. ಈ ಕೋಟೆಯು ಸಮುದ್ರದ ಶಿವಾಜಿ ಎಂದೇ ಹೆಸರಾಗಿದ್ದ ಮಹಾನ್ ಸೈನಿಕ ಕಾನ್ಹೋಜಿ ಆಂಗ್ರೆಯ ಪ್ರಧಾನ ಕಚೇರಿಯಾಗಿತ್ತು. ೧೭೫೫ ರಲ್ಲಿ, ಈ ಕೋಟೆಯು ಪೇಶ್ವೆಗಳ ಆಳ್ವಿಕೆಗೆ ಒಳಪಟ್ಟಿತು ಮತ್ತು ನಂತರ ೧೮೧೮ ರಲ್ಲಿ ಬ್ರಿಟಿಷರ ಆಳ್ವಿಕೆಗೆ ಒಳಪಟ್ಟಿತು. ಈ ಕೋಟೆಯು ಸ್ವಾತಂತ್ರ್ಯ ಬರುವವರೆಗೂ ಬ್ರಿಟಿಷರ ಅಧೀನದಲ್ಲಿತ್ತು. ಹರ್ನಾಯಿಯಲ್ಲಿರುವ ಸುವರ್ಣದುರ್ಗ್ ಕೋಟೆಯು ದಾಪೋಲಿಯಲ್ಲಿರುವ ಅತ್ಯಂತ ಹಳೆಯ ಕೋಟೆಯಾಗಿದೆ. == ಗೋವಾ ಕೋಟೆ == ದಾಪೋಲಿ ತಾಲೂಕಿನ ಹರ್ನಾಯಿ ಬಂದರು ಕನಕದುರ್ಗ, ಫತೇ ಗಢ್ ಮತ್ತು ಗೋವಾ ಕೋಟೆಗಳೆಂಬ ೩ ಕೋಟೆಗಳ ಗುಂಪನ್ನು ಹೊಂದಿದೆ. ಈ ಕೋಟೆಗಳನ್ನು ಯಾರು ನಿರ್ಮಿಸಿದರು ಎಂಬುದರ ಬಗ್ಗೆ ಸರಿಯಾದ ಮಾಹಿತಿಯಿಲ್ಲ, ಆದರೆ ಮುಖ್ಯವಾದ ಸುವರ್ಣದುರ್ಗ್ ಕೋಟೆಗೆ ಯುದ್ಧಾನುಕೂಲವಾಗಿ ಆಧಾರ ನೀಡಲು ಮತ್ತು ಅದನ್ನು ರಕ್ಷಿಸಲು ಈ ಕೋಟೆಗಳನ್ನು ನಿರ್ಮಿಸಲಾಗಿದೆ ಎಂದು ಖಚಿತವಾಗಿ ತಿಳಿದಿದೆ. ಈ ೩ ಕೋಟೆಗಳಲ್ಲಿ, ಗೋವಾ ಕೋಟೆಯು ಮುಕ್ಕಾಲು ಹೆಕ್ಟೇರ್ ಮೇಲ್ಮೈ ಪ್ರದೇಶದಲ್ಲಿ ಹರಡಿಕೊಂಡಿದೆ. ಕೋಟೆಯು ಪಶ್ಚಿಮ ಮತ್ತು ಉತ್ತರ ಭಾಗದಲ್ಲಿ ಸಮುದ್ರದಿಂದ ಆವೃತವಾಗಿದೆ. ಕೋಟೆಯು ದಕ್ಷಿಣ ಭಾಗದಲ್ಲಿ ಸ್ವಾಭಾವಿಕ ಎತ್ತರವನ್ನು ಹೊಂದಿದೆ. ಈ ಎತ್ತರದ ಮೇಲೆ ರಚನೆಗಳ ಅವಶೇಷಗಳನ್ನು ಕಾಣಬಹುದು.[೧] == ಕನಕ್‍ದುರ್ಗ್ ಕೋಟೆ == ಕನಕ್‍ದುರ್ಗ್ ಕೋಟೆಯು ಹರ್ನಾಯಿ ಬಂದರಿಗೆ ಸಮೀಪದಲ್ಲಿದೆ. ಕನಕ್‍ದುರ್ಗ್ ಕೋಟೆಯು ಎಲ್ಲಾ ೩ ಕಡೆಗಳಲ್ಲಿ ಸಮುದ್ರದಿಂದ ಆವೃತವಾಗಿದೆ ಮತ್ತು ಸುಮಾರು ಕಾಲು ಹೆಕ್ಟೇರ್ ಮೇಲ್ಮೈ ವಿಸ್ತೀರ್ಣವನ್ನು ಹೊಂದಿದೆ. ಈ ಕೋಟೆಯು ಅಂಡಾಕಾರವಾಗಿದ್ದು ಮೆಟ್ಟಿಲುಗಳ ಮೂಲಕ ಇದನ್ನು ಪ್ರವೇಶಿಸಬಹುದು. ಮೆಟ್ಟಿಲುಗಳ ಕೊನೆಯಲ್ಲಿ, ನೀವು ಕೆಳಗಿನ ಮಟ್ಟದಲ್ಲಿ ಬಲಭಾಗದಲ್ಲಿ ನೀರಿನ ಟ್ಯಾಂಕ್ ಅನ್ನು ಕಾಣಬಹುದು.[೨] == ಹರ್ನಾಯಿ ಮೀನು ಮಾರುಕಟ್ಟೆ == ಮೀನುಗಾರಿಕೆಯು ಹರ್ನಾಯಿ ಜನರ ವ್ಯಾಪಾರದ ಮುಖ್ಯ ಮೂಲವಾಗಿದೆ. ಆಪೂಸು ಮಾವಿನ ಹಣ್ಣುಗಳ ವ್ಯಾಪಾರ ಕೂಡ ನಡೆಯುತ್ತದೆ. ಪಾಮ್‌ಫ್ರೆಟ್, ಕಿಂಗ್‌ಫಿಶ್, ಮ್ಯಾಕೆರೆಲ್, ಬಿಳಿ ದೈತ್ಯ ಸೀಗಡಿಗಳು, ನಳ್ಳಿ, ಸ್ಕ್ವಿಡ್‌ಗಳು ಇತ್ಯಾದಿಗಳನ್ನು ಒಳಗೊಂಡಿರುವ ವಿವಿಧ ಮೀನುಗಳನ್ನು ಇಲ್ಲಿ ನೋಡಬಹುದು. == ಉಲ್ಲೇಖಗಳು ==