ಹಾಂಡ್ವೊ (ಗುಜರಾತಿ: હાંડવો) ಭಾರತದ ಗುಜರಾತ್ ಖಾದ್ಯದಲ್ಲಿ ಹುಟ್ಟಿಕೊಂಡ ಒಂದು ತರಕಾರಿ ಬಿಲ್ಲೆಖಾದ್ಯವಾಗಿದೆ. ಇದು ಗುಜರಾತಿ ಪಾಕಶೈಲಿಯ ಒಂದು ಭಾಗವಾಗಿದೆ. ಇದನ್ನು ಹಲವುವೇಳೆ ಸೋರೆಕಾಯಿಯ ಹೂರಣದಿಂದ ತಯಾರಿಸಲಾಗುತ್ತದಾದರೂ, ಅನೇಕ ಇತರ ತರಕಾರಿಗಳನ್ನು ಸೇರಿಸಬಹುದು. ಕೆಲವೊಮ್ಮೆ ಪುಡಿಮಾಡಿದ ಕಡಲೇಕಾಯಿಗಳನ್ನು ಕೂಡ ಸೇರಿಸಲಾಗುತ್ತದೆ. == ತರಕಾರಿ ಹಾಂಡ್ವಾ == ತರಕಾರಿ ಹಾಂಡ್ವಾ (ಗುಜರಾತಿ: લીલો હાંડવો) ಹಾಂಡ್ವೊದ ಒಂದು ವಿಧವಾಗಿದ್ದು ಕಡಲೆಹಿಟ್ಟಿನ ಮೇಲೆ ಆಧಾರಿತವಾಗಿರುತ್ತದೆ ಮತ್ತು ಬಟಾಣಿ, ಎಲೆಕೋಸಿನಂತಹ ತರಕಾರಿಗಳನ್ನು ಹೊಂದಿರುತ್ತದೆ ಮತ್ತು ಗರಂ ಮಸಾಲಾವನ್ನು ಕೂಡ ಒಳಗೊಂಡಿರುತ್ತದೆ. ಇದನ್ನು ಹಲವುವೇಳೆ ಉಪ್ಪಿನಕಾಯಿ ಅಥವಾ ಚಹಾದ ಜೊತೆ ತಿನ್ನಲಾಗುತ್ತದೆ. == ಉಲ್ಲೇಖಗಳು ==